March 12, 2025

Bhavana Tv

Its Your Channel

ಶ್ರೀ ಕೃಷ್ಣಾ ಗ್ರೂಫ್‌ನ ಸಂಸ್ಥಾಪಕ ಅಧ್ಯಕ್ಷ ಪುತ್ತು (ಹನುಮಂತ) ಪೈ ನಿಧನ

ಭಟ್ಕಳ: ಶ್ರೀ ಕೃಷ್ಣಾ ಗ್ರೂಫ್‌ನ ಸಂಸ್ಥಾಪಕ ಅಧ್ಯಕ್ಷ, ಶ್ರೀ ಕೃಷ್ಣಾಮಿಲ್ಕ್ಸ್ ಲಿ. ಅಧ್ಯಕ್ಷರಾಗಿದ್ದ ಪುತ್ತು (ಹನುಮಂತ) ಪೈ(೬೮) ಸೋಮವಾರ ರಾತ್ರಿ ತಮ್ಮ ಕಿರವತ್ತಿಯ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಇಬ್ಬರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸೋಮವಾರ ಕಿರುವತ್ತಿಯ ತಮ್ಮ ನಿವಾಸದಲ್ಲಿ ಶ್ರೀ ಕೃಷ್ಣಾಷ್ಟಮಿಯ ಪೂಜೆಯನ್ನು ನೇರವರಿಸಿದ್ದರು. ಪೂಜೆಯ ಬಳಿಕ ಹೃದಯಾಘಾತವಾಗಿದೆ.

ಶ್ರೀ ಕೃಷ್ಣಾಮಿಲ್ಕ್ಸ್ನ ಸಂಸ್ಥಾಪಕರಾಗಿದ್ದ ಅವರು ಸದಾ ಸಾಮಾಜಿಕ ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಶ್ರೀ ಗೋಕರ್ಣ ಪರ್ತಗಾಳಿ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ ವಡೇಯರ ಸ್ವಾಮೀಜಿಯ ಪ್ರಿಯ ಶಿಷ್ಯರಲ್ಲಿ ಇವರು ಒಬ್ಬರಾಗಿದ್ದರು. ಗೋಕರ್ಣ ಪರ್ತಗಾಳಿ ಮಠಕ್ಕಾಗಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ.

ಬದರಿನಾಥ ಚಾತುರ್ಮಾಸ ವೃತ ಸೇರಿದಂತೆ ವಿವಿದೆಡೆ ಸ್ವಾಮೀಜಿಯವರ ಚಾತುರ್ಮಾಸದಲ್ಲಿ ಅವರೊಂದಿಗೆ ವಾಸ್ತವ್ಯ ಹೂಡಿದ್ದರು. ಭಟ್ಕಳ ಶ್ರೀ ಶಾಂತೇರಿ ಕಾಮಾಕ್ಷೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಭಿವೃದ್ಧಿಗೆ ತನ್ನದೆ ಕೊಡುಗೆ ನೀಡಿದ್ದರು. ಪುತ್ತು ಪೈ ಅವರ ಅಕಾಲಿಕ ಮರಣದಿಂದ ಜಿಲ್ಲೆಯ ಜಿಎಸ್‌ಬಿ ಸಮಾಜ ಶೋಕಸಾಗರದಲ್ಲಿ ಮುಳುಗಿದ್ದು ಭಟ್ಕಳ ಜಿಎಸ್‌ಬಿ ಸಮಾಜದ ಅಂಗಡಿ ಮಳಿಗೆಗಳು ಬಂದ ಮಾಡಿ ಗೌರವ ಸೂಚಿಸಿದೆ. ಮೃತರ ಅಂತಿಮ ದರ್ಶನಕ್ಕಾಗಿ ಭಟ್ಕಳದ ಅವರ ನಿವಾಸದಲ್ಲಿ ೧೨ ಗಂಟೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಂತಿಮ ಸಂಸ್ಕಾರವನ್ನು ಭಟ್ಕಳದಲ್ಲಿ ನೇರವೇರಿಸಲಾಗುವದು.

error: