March 12, 2025

Bhavana Tv

Its Your Channel

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಎನ್.ಇ.ಪಿ ಹೆಲ್ಪಡೆಸ್ಕ ಉದ್ಘಾಟನೆ.

ಭಟ್ಕಳ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ನ್ನು ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಅಳವಡಿಸಲಾಗಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜಿತ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ಪಾಲಕರಿಗೆ ಎನ್.ಇ.ಪಿ ಮಾಹಿತಿಯನ್ನು ನೀಡಲು ಹೆಲ್ಪಡೆಸ್ಕ್ ಉದ್ಘಾಟಸಲಾಯಿತು. ಎಸ್.ಜಿ.ಎಸ್ – ಎನ್.ಇ.ಪಿ ಬ್ಲಾಗ್‌ನ್ನು ಲೋಕಾರ್ಪಣೆ ಮಾಡುವ ಮುಖೇನ ಉದ್ಘಾಟಸಿದ ಅಧ್ಯಕ್ಷರಾದ ಡಾ. ಸುರೇಶ ನಾಯಕರವರು ಸರ್ವರೂ ಎನ್.ಇ.ಪಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಪ್ರಾಂಶುಪಾಲರಾದ ಶ್ರೀನಾಥ ಪೈ ಮಾತನಾಡಿ ಕರ್ನಾಟಕ ವಿಶ್ವವಿದ್ಯಾಲಯವು ನೂತನವಾಗಿ ಹೆಲ್ಪಲೈನ ಸಹಾಯವಾಣಿಯನ್ನು ತೆರೆದಿದ್ದು ಶಿಕ್ಷಕವೃಂದದವರು ಪ್ರವೇಶ ಪ್ರಕ್ರಿಯೆ ಹಾಗೂ ಇತರೆ ಮಾಹಿತಿಯನ್ನು ಈ ಮೂಲಕ ಪಡೆಯುವಂತೆ ತಿಳಿಸಿದರು. ಹೆಲ್ಪಡೆಸ್ಕ ಸಂಯೋಜಕರಾದ ಓಂಕಾರ ಮರಬಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ವಿದ್ಯಾರ್ಥಿಗಳಿಗೆ ಉಪಪ್ರಾಂಶುಪಾಲರು ಎನ್.ಇ.ಪಿ ಲಿಂಕ್‌ಕಾರ್ಡ ವಿತರಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: