
ಭಟ್ಕಳ:ಹಣಕ್ಕೆ ಹೆಣವು ಬಾಯಿಬಿಡುತ್ತದೆ ಎಂಬ ಮಾತಿಗೆ ತದ್ವಿರುದ್ಧವಾಗಿ ಭಟ್ಕಳ ತಾಲೂಕಿನ ಬಂದರ ರಸ್ತೆಯಲ್ಲಿನ ಎ.ಟಿ ಎಮ್. ಗೆ ಜಮಾ ಮಾಡಲು ಬಂದ ವ್ಯಕ್ತಿಯೋರ್ವರ ಹಣ ಮಶಿನನ ತಾಂತ್ರಿಕ ಸಮಸ್ಯೆಯಿಂದ ವಾಪಸ್ ಬಂದಿದ್ದನ್ನು ಕಂಡ ಯುವಕ ಪೋಲಿಸ್ ವಶಕ್ಕೆ ನೀಡಿ ಮಾಲೀಕರಿಗೆ ಹಿಂತಿರುಗಿಸಿದ ಘಟನೆ ಮಂಗಳವಾರದoದು ವರದಿಯಾಗಿದೆ.
ಮಂಗಳವಾರದoದು ಮಧ್ಯಾಹ್ನ ೩-೨೦ ರ ಸುಮಾರಿಗೆ ಬಂದರ್ ರಸ್ತೆಯಲ್ಲಿನ ಎಕ್ಸಸ್ ಬ್ಯಾಂಕ್ ಎ.ಟಿ.ಎಮ್. ಗೆ ನಗರದ ನವಾಯತ್ ಕಾಲೋನಿಯ ನಿವಾಸಿ ಬಿಲಾಲ್ ಅಹ್ಮದ್ ತನ್ವಿರ ಎಂಬಾತನು ಆತನ ತಂದೆಯ ಖಾತೆಗೆ ರೂ. ೧,೭೪,೦೦೦ ಜಮಾ ಮಾಡಿ ತೆರಳಿದ್ದಾನೆ. ಆದರೆ ಎ.ಟಿ.ಎಮ್. ನಲ್ಲಿನ ತಾಂತ್ರಿಕ ತೊಡಕಿನಿಂದ ಹಣ ವಾಪಸ್ಸು ಬಂದಿದೆ. ಇದೇ ವೇಳೆ ಬೆಳಕೆಯ ದಿನಕರ ಮಂಗಳಾ ಗೊಂಡ ಎಂಬಾತನು ತಾನು ತನ್ನ ಎ.ಟಿ.ಎಮ್.ನಿಂದ ಹಣ ವಿತ್ ಡ್ರಾ ಮಾಡಲು ತೆರಳಿದ್ದ ವೇಳೆ ಈ ಹಿಂದೆ ಜಮಾ ಮಾಡಿ ತೆರಳಿದ್ದ ವ್ಯಕ್ತಿಯ ಹಣ ವಾಪಸ್ಸಾಗಿರುವುದು ಕಂಡು ಬಂದಿದ್ದು, ತಕ್ಷಣಕ್ಕೆ ದಿನಕರ ಗೊಂಡ ಅಲ್ಲಿನ ಎ.ಟಿ.ಎಮ್. ಸೆಕ್ಯುರಿಟಿ ಗಾರ್ಡಗೆ ನೀಡಲು ತೆರಳಿದ್ದ ಆದರೆ ಅದು ಸಂಬoಧಿಸಿದ ಹಣದ ಮಾಲೀಕರಿಗೆ ತಲುಪುವುದು ಅಸಾಧ್ಯವಾಗಲಿದೆ ಎಂಬ ಹಿನ್ನೆಲೆ ನೇರವಾಗಿ ನಗರ ಪೊಲೀಸ ಠಾಣೆಗೆ ಹಣದ ಜೊತೆಗೆ ತೆರಳಿ ಪೋಲಿಸರ ವಶಕ್ಕೆ ಹಣ ನೀಡಿ ಘಟನೆಯನ್ನು ವಿವರಿಸಿದ್ದಾನೆ.
ತಕ್ಷಣಕ್ಕೆ ಎ.ಟಿ.ಎಮ್. ಬಳಿ ತೆರಳಿ ಅಲ್ಲಿನ ಸಿ.ಸಿ.ಟಿವಿ ದ್ರಶ್ಯಾವಳಿ ಪರಿಶೀಲಿಸಿದ ನಗರ ಠಾಣೆ ಪೋಲಿಸರು ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳನ್ನು ವಿಚಾರಿಸಿದ್ದಾರೆ. ಈ ವೇಳೆ ಹಣ ಜಮಾವಣೆ ಮಾಡಿದ್ದು ತನ್ನ ತಂದೆಗೆ ಜಮಾ ಆಗಿಲ್ಲ ಎಂಬುದನ್ನು ಖಾತರಿ ಪಡಿಸಿದ ಬಿಲಾಲ್ ಅಹ್ಮದ್ ಪುನಃ ಎ.ಟಿ.ಎಮ್.ಗೆ ತೆರಳಿದ್ದ ಹಾಗೂ ಪಕ್ಕದ ಬ್ಯಾಂಕಿಗೆ ಹೋಗಿ ವಿಚಾರಿಸಿದ ವೇಳೆ ಆಗ ಅಲ್ಲಿಯೇ ಇದ್ದ ಪೋಲಿಸರು ಬಿಲಾಲ್ ಕಳೆದುಕೊಂಡ ಹಣದ ವಿವರ ಮತ್ತು ಆತ ಎ.ಟಿ.ಎಮ್.ಗೆ ತೆರಳಿರುವ ಸಿ.ಸಿ.ಟಿವಿ ದ್ರಶ್ಯ ಖಾತರಿಪಡಿಸಿಕೊಂಡು ಹಣದ ಮಾಲೀಕನಿಗೆ ಠಾಣೆಗೆ ಬರುವಂತೆ ತಿಳಿಸಿದ್ದಾರೆ.
ಹಣದ ಮಾಲೀಕ ಬಿಲಾಲ್ ಠಾಣೆಗೆ ಬಂದ ವೇಳೆ ಪೋಲಿಸರು ಹಣ ಹಿಂತಿರುಗಿಸಿದ ವ್ಯಕ್ತಿಯು ತಂದ ಹಣವನ್ನು ಪರಿಶೀಲಿಸಲು ಹೇಳಿದರು. ನಂತರ ತಾನು ಜಮಾ ಮಾಡಲು ಬಂದ ಹಣ ಹೌದೆಂಬುದು ಖಾತರಿ ಮಾಡಿದ ಬಿಲಾಲ್ ಗೆ ನಗರ ಠಾಣೆ ಪಿಎಸ್‌ಐ ಹೆಚ್. ಬಿ. ಕುಡಗುಂಟಿ ಅವರು ಹಣದ ಮಾಲೀಕನಿಗೆ ಒಟ್ಟು ರೂ. ೧,೭೪೦೦೦ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹಣದ ಮಾಲೀಕ ಬಿಲಾಲ್ ಅಹ್ಮದ್ ಅವರು ಹಣ ಹಿಂತಿರುಗಿಸಿದ ಯುವಕ ದಿನಕರ ಗೊಂಡ ಅವರಿಗೆ ಧನ್ಯವಾದ ತಿಳಿಸಿದರು. ಯುವಕರ ಈ ಮಾನವೀಯತೆಯ ಕೆಲಸಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂಧಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಎ.ಎಸ್.ಐ. ಗಳಾದ ಆರ್. ಜಿ. ವೈದ್ಯ, ರವಿ ನಾಯ್ಕ, ಗೋಪಾಲ ನಾಯಕ, ದೀಪಾ ನಾಯಕ ಹಾಗೂ ಪೋಲಿಸ್ ಸಿಬ್ಬಂದಿ ಗೌತಮ್ ಆರ್. ತನಿಖೆಯಲ್ಲಿ ಪಾಲ್ಗೊಂಡಿದ್ದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ