
ಭಟ್ಕಳ ತಾಲೂಕಿನ ವಿವಿಧೆಡೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಓಸಿ ಮಟಕಾ ಅಡ್ಡೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಪೊಲೀಸರು, ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಆರೋಪಿಗಳನ್ನು ತಾಲೂಕಿನ ಹನುಮಾನ ನಗರದ ಲೋಕೇಶ ಗಣಪತಿ ನಾಯ್ಕ, ಚೌಥನಿ ರಸ್ತೆಯ ಕೃಷ್ಣ ಜಟ್ಟಪ್ಪ ನಾಯ್ಕ, ಮುಳಿಯ ರತ್ನಾಕರ ರಾಮಕೃಷ್ಣ ಶೇಟ್, ಮಂಜುನಾಥ ಜಟ್ಟಪ್ಪ ನಾಯ್ಕ, ರಘುನಾಥ ರಸ್ತೆಯ ಸಂಜಯ ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ. ಐವರು ಆರೋಪಿಗಳಿಂದ ಒಟ್ಟೂ ರೂ .೯೫೩೦ ನಗದು ಹಾಗೂ ಓಸಿ ಬರೆಯಲು ಬಳಸುತ್ತಿದ್ದ ಸಲಕರಣೆಗಳನ್ನು ಪೊಲೀಸರು ಜಫ್ತುಪಡಿಸಿಕೊಂಡಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಹನುಮಂತ ಕುಡಗುಂಟಿ, ಸುಮಾ ತನಿಖೆ ಕೈಗೊಂಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ