May 7, 2024

Bhavana Tv

Its Your Channel

ಚರಂಡಿಯ ನೀರು ಸರೋವರದಂತೆ ರಸ್ತೆಯಲ್ಲಿ ಹರಿಯುತ್ತಾ ಇದ್ದರೂ ಪುರಸಭೆ ನಿರ್ಲಕ್ಷ; ಸಾರ್ವಜನಿಕರ ಆಕ್ರೋಶ

ಭಟ್ಕಳ: ಪಕ್ಕದಲ್ಲಿ ಗೋಶಾಲೆ, ಎದುರು ಧರ್ಮಾರ್ಥ ಸಭಾಭವನ ಇದರ ನಡುವೆ ಚರಂಡಿಯ ನೀರು ಸರೋವರದಂತೆ ತುಂಬುತ್ತಾ ಇದ್ದರೂ ಪುರಸಭೆ ಮಾತ್ರ ದಿವ್ಯ ನಿರ್ಲಕ್ಷ ತೋರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಟ್ಕಳ ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯ ಚರಂಡಿಯಿAದ ಚಿಲುಮೆಯಂತೆ ಹೊಲಸು ನೀರು ಉಕ್ಕುತ್ತಿದೆ. ಈಗಾಗಲೆ ಸಂಬAಧಿಸಿದ ಅಧಿಕಾರಿಗಳಿಗೆ ಇದನ್ನು ಸರಿಪಡಿಸುವಂತೆ ಸ್ಥಳೀಯರು ಮನವಿಯನ್ನು ಮಾಡಿದ್ದಾರೆ. ಆದರೂ ಅಧಿಕಾರಿಗಳು ಈ ಕುರಿತು ಗಮನಹರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಹೊಲಸು ನೀರಿನ ನಡುವೆ ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದ ಗೋಶಾಲೆ ಇದೆ. ಇಲ್ಲಿ ಮೇಯಲು ಬಿಟ್ಟ ಹಸುಗಳು ಕೊಳಚೆ ನೀರಿನ್ನು ದಾಟಬೇಕು. ಇದರಿಂದ ಗೋಶಾಲೆ ಮಾಲಿಕರಿಗೆ ಇದೊಂದು ತಲೆನೋವು ತಂದಿಟ್ಟಿದೆ. ಇನ್ನೊಂದೆಡೆ ಶ್ರೀ ನಾಗಯಕ್ಷೇ ಧರ್ಮಾರ್ಥ ಸಭಾಭವನವಿದೆ. ಅಲ್ಲೂ ಪ್ರತಿದಿನ ನೂರಾರು ಸಂಖ್ಯೆಯ ಭಕ್ತಾಧಿಗಳು ಬರುತ್ತಾರೆ. ಅವರೆಲ್ಲಾ ಈ ಹೊಲಸು ನೀರು ಮೆಟ್ಟಿ ಹೋಗಬೇಕು. ಚಿಕ್ಕ ಮಕ್ಕಳಂತು ಹೊಲಸು ನೀರು ಎಂದು ತಿಳಿಯದೆ ಅದರಲ್ಲೆ ಆಟವಾಡುತ್ತಾರೆ. ಭಾನುವಾರ ಇಲ್ಲಿನ ಶ್ರೀ ನಾಗಯಕ್ಷೇ ಸಭಾಭವನದಲ್ಲಿ ೧೫೦೦ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಿ ಆಗಮಿಸಿದ ಸಾವಿರಾರು ಜನರು ಪುರಸಭೆಯ ನಿರ್ಲಕ್ಷöದ ಕುರಿತು ಆಕ್ರೋಶ ವ್ಯಕ್ತಪಡಿಸಿ ಸರಾಗವಾಗಿ ಚರಂಡಿಯ ಹೊಲಸು ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ರಾಧಿಕಾ ಎಸ್.ಎನ್. ಮಾತನಾಡಿ ಇಲ್ಲಿನ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಸಂಬಧಿಸಿದ ತಾಂತ್ರಿಕ ಇಲಾಖೆಯ ಅಧಿಕಾರಿಗಳೊಂದಿಗೆ ಕೂಡಲೆ ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸುತ್ತೆನೆ. ಅವಶ್ಯವಾಗಿ ಸಮಸ್ಯೆಯನ್ನು ಪರಿಹರಿಸಲಾಗುವದು ಎಂದಿದ್ದಾರೆ.

error: