May 19, 2024

Bhavana Tv

Its Your Channel

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸಾರ್ವಜನಿಕರ ವಿರೋಧ

ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾ. ಪಂ. ವ್ಯಾಪ್ತಿಯ ಬೆಳ್ನಿ ಡೊಂಗರಪಳ್ಳಿ ಹಾಗೂ ಬಂದರ ರಸ್ತೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧಿಸಿ ಸೋಮವಾರದಂದು ಮಾವಿನಕುರ್ವೆ ಗ್ರಾಮ ಪಂಚಾಯತಗೆ ತೆರಳಿ ಅಧ್ಯಕ್ಷ ಉಪಾಧ್ಯಕ್ಷ ಪಿಡಿಓಗಳಿಗೆ ಘಟಕ ಸ್ಥಾಪನೆ ಮಾಡದಂತೆ ಎಚ್ಚರಿಕೆ ನೀಡಿದ ನೂರಾರು ಸಾರ್ವಜನಿಕರು ಮನವಿ ಸಲ್ಲಿಸಿದರು.

ಈ ಭಾಗದ ಮಾವಿನಕುರ್ವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ನಿ, ಡೊಂಗರಪಳ್ಳಿ, ಬಂದರ ರಸ್ತೆ ಮಾರ್ಗವಾಗಿ ರಾಜ್ಯ ಹೆದ್ದಾರಿಯ ಸಮೀಪದಲ್ಲಿ ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಪ್ರಮುಖವಾಗಿ ಈ ಭಾಗದಲ್ಲಿ ನೂರಾರು ಮನೆಗಳು, ಪುರಾತನ ದರ್ಗಾ, ದೇವಸ್ಥಾನ ಇದ್ದು ರೈತರ ಜಮೀನು ಕೂಡಾ ಇದ್ದು, ಹೀಗಿರುವಲ್ಲಿ ಮಾವಿನಕುರ್ವೆ ಗ್ರಾಮ ಪಂಚಾಯತ್ ಈ ಭಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಮೀನು ಮಂಜೂರಿ ಮಾಡಲಾಗಿದೆ ಎನ್ನುವುದು ತಿಳಿದು ಬಂದಿದ್ದು ಇದಕ್ಕೆ ಗ್ರಾಮಸ್ಥರ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರದಂದು ಗ್ರಾಮಸ್ಥರು ಪಂಚಾಯತಗೆ ತೆರಳಿ ಘಟಕ ನಿರ್ಮಾಣಕ್ಕೆ ಒತ್ತಡ ಹಾಕಿದರು. ಈ ಮಧ್ಯೆ ಹಾಲಿ ಹಾಗೂ ಮಾಜಿ ಪಂಚಾಯತ್ ಸದಸ್ಯರ ಕಮಿಟಿಯ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.

ಘನ ತ್ಯಾಜ್ಯ ವಿಲೇವಾರಿ ಘಟಕದ ಕೆಲಸ ಮುಂದುವರಿದರೆ ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗುವುದು ತಕ್ಷಣ ಕೆಲಸ ನಿಲ್ಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದು, ಈ ರೀತಿಯಾಗಿ ಏನಾದರು ಸಾರ್ವಜನಿಕರ ವಿರೋಧದ ನಡುವೆಯೂ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಲಸ ಮುಂದುವರಿದರೆ ಮುಂದಾಗುವ ಪರಿಣಾಮಕ್ಕೆ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತ್ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯತಿ ಕಾರ್ಯದರ್ಶಿ ‘ಈ ಜಾಗವು ಅರಣ್ಯ ಇಲಾಖೆ ಜಾಗಕ್ಕೆ ಸಂಬAಧಿಸಿದಲ್ಲವಾಗಿದ್ದು, ಇದು ಗ್ರಾಮ ಪಂಚಾಯತಗೆ ಸೇರಿದ ಸರಕಾರಿ ಜಾಗವಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿಗದಿತ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸಾರ್ವಜನಿಕರು ಸಹಕರಿಸಬೇಕು. ಹಾಗೂ ಮನವಿಯ ಬಗ್ಗೆ ಪಂಚಾಯತ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದರು.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ ಮಾತನಾಡಿ ‘ಯಾವುದೇ ಜನವಸತಿ ಪ್ರದೇಶದಲ್ಲಿ ಊರಿನ ಕಸ, ತ್ಯಾಜ್ಯ ಹಾಕುವುದಕ್ಕೆ ಸರಕಾರವಿರಲಿ, ಜಿಲ್ಲಾಡಳೀತವಿರಲಿ ಯಾವುದೇ ನೈತಿಕ ಹಕ್ಕು ಇಲ್ಲ. ಅಲ್ಲದೇ ಜನರ ಮಧ್ಯದಲ್ಲಿ ಕಸ ಹಾಕಲು ಪರಿಸರ ಮಾಲಿನ್ಯ ಇಲಾಖೆಯವರು ಕೂಡಾ ಒಪ್ಪತಕ್ಕದ್ದಲ್ಲ. ಕಾರಣ ಸಾರ್ವಜನಿಕರ ಅನೂಕೂಲದ ನಿಟ್ಟಿನಲ್ಲಿ ತಕ್ಷಣ ವಿಲೇವಾರಿ ಘಟಕಕ್ಕೆ ಕೆಲಸ ನಿಲ್ಲಿಸಬೇಕು ಎಂದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಾಸ ನಾಯ್ಕ ಮಾತನಾಡಿ ಜಿಲ್ಲಾಧಿಕಾರಿಯ ಸೂಚನೆಯನ್ನು ಉಲ್ಲಂಘನೆ ಮಾಡಲು ಸಾಧ್ಯವಿಲ್ಲವಾಗಿದ್ದು, ಗ್ರಾಮಸ್ಥರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲಿದ್ದೇವೆ. ಆದರೆ ನಿಗದಿ ಪಡಿಸಿದ ಜಾಗ ತ್ಯಾಜ್ಯ ವಿಲೇವಾರಿಗೆ ಸೂಕ್ತ ಎಂಬ ಅಭಿಪ್ರಾಯ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ದೇವಸ್ಥಾನದ ಅಧ್ಯಕ್ಷ ಹಾಗೂ ನಾಮಧಾರಿ ಸಮಾಜದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಮಾಜಿ ಪಂಚಾಯತ ಸದಸ್ಯ ಗಂಗಾಧರ ದೇವಾಡಿಗ, ಗ್ರಾಮಸ್ಥರಾದ ಮಂಜುನಾಥ ನಾಯ್ಕ, ರವಿ ನಾಯ್ಕ, ಮಹ್ಮದ್ ಗೋಸ್, ರವೀಂದ್ರ ನಾಯ್ಕ, ಡೊಡ್ಡಯ್ಯ ದೇವಾಡಿಗ, ಮಂಜುನಾಥ ನಾಯ್ಕ, ಈಶ್ವರ ನಾಯ್ಕ, ಸಿದ್ದು ನಾಯ್ಕ, ಸಚಿನ್ ದೇವಾಡಿಗ, ಹೇಮಾ ನಾಯ್ಕ, ವನಿತಾ ನಾಯ್ಕ, ಶಾರದಾ ನಾಯ್ಕ, ಅಮೀನಾ, ಷಕೀಲಾ, ಪರ್ವೀನ್, ಬೀಬಿ ಹಾಜಿರಾ, ನಸೀಮ್ ಬಾನು, ಸಾಮಿಯ, ನವೀದ್, ಸಾಜಿದ್, ಇಮ್ತಿಯಾಜ್ ರಿಯಾಜ್, ಪರ್ವೇಜ್ ಮುಂತಾದವರು ಉಪಸ್ಥಿತರಿದ್ದರು.

error: