May 6, 2024

Bhavana Tv

Its Your Channel

ಭಟ್ಕಳ ಸಮುದ್ರ ತೀರದ ೨೦ ಗ್ರಾಮಗಳು ಸಿಆರ್‌ಝಡ್ ವ್ಯಾಪ್ತಿಗೆ

ಭಟ್ಕಳ : ಕೇಂದ್ರದ ಅಧಿಸೂಚನೆಯಡಿ ರಾಜ್ಯ ಸರ್ಕಾರ ಕಡಲತೀರ ವಲಯ ನಿರ್ವಹಣಾ ಯೋಜನೆ ರೂಪಿಸಿ ಕರಡು ಅಧಿಸೂಚನೆ ಹೊರಡಿಸಿದ್ದು, ಇದರನ್ವಯ ಭಟ್ಕಳ ತಾಲೂಕಿನ ೨೦ ಸಮುದ್ರ ತೀರದ ಗ್ರಾಮಗಳು ಸಿಆರ್‌ಝಡ್ ವ್ಯಾಪ್ತಿಗೆ ಒಳಪಡಲಿವೆ. ಭವಿಷ್ಯದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕಡಲ ತೀರ ಬಳಕೆಯಾಗಲಿದೆ ಎನ್ನಲಾಗಿದೆ. ತಾಲೂಕಿನ ಬೈಲೂರು, ಬೇಂಗ, ಕಾಯ್ಕಿಣಿ, ಬಸ್ತಿ, ಮಾವಳ್ಳಿ, ಶಿರಾಲಿ, ಬೆಳಕೆ, ಬೆಳ್ಳಿ, ಗೊರಟೆ, ಹಡೀನ್, ಹೆಬಳೆ, ಜಾಲಿ, ಕರಿಕಲ್, ಮಾವಿನಕುರ್ವೆ, ಮುಂಡಳ್ಳಿ, ಸೂಸಗಡಿ, ತಗ್ಗರಗೋಡು, ತಲಗೋಡು, ವೆಂಕಟಾಮರ ಭಾಗದಲ್ಲಿನ ಕಡಲ ತೀರಗಳನ್ನು ಸಿಆರ್‌ಝಡ್ ವ್ಯಾಪ್ತಿಗೆ ಒಳಪಡಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

error: