May 6, 2024

Bhavana Tv

Its Your Channel

ಗ್ರಾಮ ಲೆಕ್ಕಿಗನ ಮೇಲೆ ಹಲ್ಲೆ ಖಂಡಿಸಿ ಸಹಾಯಕ ಆಯುಕ್ತರಿಗೆ ಮನವಿ: ಆರೋಪಿಯ ಬಂಧನಕ್ಕೆ ಆಗ್ರಹ

ಭಟ್ಕಳ: ಭಟ್ಕಳ: ಗ್ರಾಮ ಲೆಕ್ಕಾಧಿಕಾರಿ ಮಾವಳ್ಳಿ-೨ ಹಾಗೂ ಕಂದಾಯ ನಿರೀಕ್ಷಕರು ಮಾವಳ್ಳಿರವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಭಟ್ಕಳ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಭಟ್ಕಳ ಉಪವಿಭಾಗಾಧಿಕಾರಿಗಳು ಹಾಗೂ ತಹಶಿಲ್ದಾರರರಿಗೆ ಮನವಿ ಸಲ್ಲಿಸಿದೆ.
ಸಂಘದ ಸದಸ್ಯರು ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಭಟ್ಕಳ ತಾಲೂಕಿನ ಮಾವಳ್ಳಿ-೨ ಗ್ರಾಮದ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚರಣ ಗೌಡ ಹಾಗೂ ಮಾವಳ್ಳಿ ಹೋಬಳಿಯ ಕಂದಾಯ ನಿರೀಕ್ಷಕ ಶ್ರೀನಿವಾಸ ಆರ್ ಮಾಸ್ತಿ ಇವರ ಮೇಲೆ ಹಲ್ಲೆ ಮಾಡಿದ್ದು, ಈ ಸಂಬoಧ ಮುರುಡೇಶ್ವರ ಠಾಣೆಯಲ್ಲಿ ಪೋಲೀಸ್ ದೂರು ದಾಖಲಿಸಿದ್ದೇವೆ.
ಸದರಿ ಘಟನೆಯು ಸರ್ಕಾರಿ ನೌಕರರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಲು ಹಾಗೂ ನೌಕರರಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ಉಂಟು ಮಾಡಲು ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ಕಂಡುಬoದಿರುತ್ತದೆ. ಈ ಘಟನೆಯನ್ನು ತಾಲೂಕಿನ ಗ್ರಾಮ ಲೆಕ್ಕಿಗರ ಸಂಘವು ತೀವ್ರವಾಗಿ ಖಂಡಿಸುತ್ತದೆ.
ಮುರ್ಡೇಶ್ವರ ದೇವಸ್ಥಾನವು ವಿಶ್ವ ಪ್ರಸಿದ್ಧಿ ಪ್ರವಾಸಿ ತಾಣವಾಗಿರುವುದರಿಂದ ಗಣ್ಯ ವ್ಯಕ್ತಿಗಳು, ಹಾಗೂ ಮೇಲಾಧಿಕಾರಿಗಳು ಆಗಾಗ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಅವರ ಶಿಷ್ಟಾಚಾರ ನಿರ್ವಹಿಸಲು ದಿನದ ೨೪-೭ ವೇಳೆಗೆ ಕರ್ತವ್ಯದಲ್ಲಿರಬೇಕಾಗಿರುತ್ತದೆ. ಈ ಮೇಲಿನ ಘಟನೆಯಿಂದಾಗಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸಲು ಹಿಂಜರಿಕೆ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿರುತ್ತದೆ. ಈ ಪ್ರಕರಣಕ್ಕೆ ಸಂಬoಧಿಸಿದoತೆ ಪ್ರಕರಣದ ಆರೋಪಿಯನ್ನು ಕೂಡಲೇ ಬಂಧಿಸಿ ಪ್ರಕರಣಕ್ಕೆ ಸಂಬoಧಪಟ್ಟoತೆ ನಿಷ್ಪಕ್ಷಪಾತವಾಗಿ ತನಿಖೆ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಈ ಮೂಲಕ ಕೋರುತ್ತೇವೆ. ಹಾಗೂ ಸದರ ಅಪಾದಿತ ವ್ಯಕ್ತಿಯು ಸಿಬ್ಬಂದಿಗಳ ಮೇಲೆ ಜೀವ ಬೆದರಿಕೆ ಹಾಕಿರುವುದರಿಂದ, ಸಿಬ್ಬಂದಿಗಳ ಕರ್ತವ್ಯದ ಕೇಂದ್ರ ಸ್ಥಾನದಲ್ಲಿ ನಿರ್ಬಿತವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುವಂತೆ ಈ ಮೂಲಕ ಕೋರುತ್ತೇವೆ. ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಶ್ರೀನಿವಾಸ, ಗ್ರಾಮ ಲೆಕ್ಕಿಗರ ಸಂಘದ ಪ್ರಮುಖರಾದ ಚಾಂದ್ ಬಾಷಾ, ಚರಣ ಗೌಡ, ಕೆ.ಶಂಭು, ಲತಾ ನಾಯ್ಕ, ವಿಜೇತಾ ಶ್ಯಾನಭಾಗ, ವೀಣಾ ನಾಯ್ಕ, ಕವಿತಾ ಗೌಡ, ದೀಪ್ತಿ, ವಿಶ್ವನಾಥ ಗಾಂವಕರ, ಗಣೇಶ ಕುಲಾಲ್, ದಿವ್ಯಾ ರೇವಣಕರ ಮೊದಲಾದವರು ಉಪಸ್ಥಿತರಿದ್ದರು.

error: