March 14, 2025

Bhavana Tv

Its Your Channel

ಕಬಡ್ಡಿ ಆಟಗಾರ ಮನೋಜ್ ನಾಯ್ಕ ಹೃದಯಾಘಾತದಿಂದ ಸಾವು: ಹಲವು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸಂತಾಪ

ಭಟ್ಕಳ: ಹೆಸರಾಂತ ಸ್ಪೋರ್ಟ್ಸ್ ಕ್ಲಬ್ ಎನಿಸಿರುವ ಪರಶುರಾಮ ಭಟ್ಕಳ ತಂಡದ ಕಬ್ಬಡ್ಡಿ ಆಟಗಾರನಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದ ಮನೋಜ ನಾಯ್ಕ ಹೃದಯಾಘಾತದಿಂದ ನಿಧನರಾಗಿದ್ದರೆ. ಜಿಲ್ಲೆಯ ಅತ್ಯುತ್ತಮ ಕಬಡ್ಡಿ ತಂಡಗಳಲ್ಲೊAದಾಗಿರುವ ಪರಶುರಾಮ ಭಟ್ಕಳದ ಕೀ ಪ್ಲೇಯರ್ ಆಗಿದ್ದ ಮನೋಜ ನಾಯ್ಕ ತಂಡ ಹತ್ತು ಹಲವಾರು ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ತನ್ನ ಆಟದಿಂದ ನೆರವಾಗಿದ್ದರು.

ಕಬಡ್ಡಿ ಆಟಗಾರನ ಆಕಸ್ಮಿಕ ಅಗಲಿಕೆಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ ಸಹಿತ ಹಲವು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಆಟದ ಜೊತೆ ಎದುರಾಳಿಯನ್ನು ಮಣಿಸುವ ತಂತ್ರಗಾರಿಕೆಯಲ್ಲಿಯೂ ಮುಂಚೂಣಿಯಲ್ಲಿದ್ದ ಪರಶುರಾಮ ತಂಡದೊoದಿಗೆ ಆಡುವಾಗ ಎದುರಾಳಿ ತಂಡದ ಅನೇಕ ಆಟಗಾರರು ಆಟವನ್ನೇ ತೊರೆಯುವಂತ ಗಂಭೀರ ಗಾಯಗೊಳ್ಳುವ ಹಲವು ಘಟನೆಗಳು ನಡೆದಿರುವುದು ಪರಶುರಾಮ ತಂಡ ಆಕ್ರಮಣಶೀಲತೆಗೆ ಉದಾಹರಣೆಯಾಗಿರುವ ಜೊತೆ ಎದುರಾಳಿ ಆಟಗಾರರ ಬೇಸರಕ್ಕೂ ಕಾರಣವಾಗುತ್ತಿತ್ತು.
ಆಡುವಾಗ ಗಾಯಗೊಳ್ಳುವುದು ಕ್ರೀಡೆಯ ಒಂದು ಭಾಗವಾಗಿರುವುದರಿಂದ ಯಾರೂ ಈ ರೀತಿಯ ಆಕ್ರಮಣಶೀಲ ಆಟವನ್ನು ವಿರೋಧಿಸುವ ಹಾಗಿರಲಿಲ್ಲ. ತನ್ನ ಆಕ್ರಮಣಕಾರಿ ಆಟದ ಜೊತೆ ತಂಡವನ್ನೂ ಆಕ್ರಮಣಕಾರಿಯಾಗಿ ಮುನ್ನಡೆಸುತ್ತಿದ್ದ ಮನೋಜ ನಾಯ್ಕ ಅಕಾಲಿಕ ಅಗಲಿಕೆ ಕಬಡ್ಡಿ ಆಟಗಾರರಲ್ಲಿ ದಿಗ್ಬ್ರಮೆ ಮೂಡಿಸಿದೆ.

error: