May 8, 2024

Bhavana Tv

Its Your Channel

ಮಂಗಳಗೌರಿ ಭಟ್ ೪೨ ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ

ಭಟ್ಕಳ ; ಕೋವಿಡ್-೧೯ ರಿಂದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿ, ಎಸ್.ಎಸ್.ಎಲ್.ಸಿ. ಮತು ಪ್ರಥಮ ಪಿ.ಯು.ಸಿ ಯ ಅಂಕಗಳ ಆಧಾರದ ಮೇಲೆ ನೀಡಿದ್ದ ದ್ವಿತೀಯ ಪಿ.ಯು. ಅಂಕಗಳನ್ನು ತಿರಸ್ಕರಿಸಿ ಪುನಹಃ ವಾರ್ಷಿಕ ಪರೀಕ್ಷೆ ಬರೆದ ಭಟ್ಕಳದ ದಿ.ನ್ಯೂ ಇಂಗ್ಲೀಷ ಪಿ.ಯು.ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಂಗಳಗೌರಿ ಭಟ್ ೪೨ ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಮಾರುಕೇರಿಯ ವಿಷ್ಣು ಭಟ್ ಮತ್ತು ಗೋಪಿಕಾ ಭಟ್ ದಂಪತಿಗಳ ಮಗಳಾದ ಮಂಗಳಗೌರಿ ಭಟ್ಕಳ ತಾಲೂಕಿನಲ್ಲಿ ಇಲಾಖೆ ನೀಡಿದ ಅಂಕಗಳನ್ನು ತಿರಸ್ಕರಿಸಿ ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿಯಾಗಿದ್ದು, ಮೊದಲು ಇಲಾಖೆ ನೀಡಿದ ೫೩೯ ಒಟ್ಟೂ ಅಂಕಗಳ ಬದಲಾಗಿ ೫೮೧ ಅಂಕಗಳನ್ನು ಪಡೆದು ಒಟ್ಟಾರೆ ೪೨ ಹೆಚ್ಚುವರಿ ಅಂಕಗಳೊAದಿಗೆ ಮಹಾವಿದ್ಯಾಲಯಕ್ಕೆ ಈ ಹಿಂದೆ ಪಡೆದ ತೃತೀಯ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಡ್ತಿ ಪಡೆದು ಅತ್ಯುತ್ತಮ ಸಾಧನೆ ಮೆರೆದಿರುತ್ತಾಳೆ. ವಿದ್ಯಾರ್ಥಿಯಾದವನು ಅಲ್ಪ ತೃಪ್ತನಾಗದೇ ಏನನ್ನೂ ಸಾಧಿಸುವ ಛಲ ಹೊಂದಿದವನಾಗಿರಬೇಕು ಎನ್ನುವುದಕ್ಕೆ ಮಂಗಳಗೌರಿ ಉತ್ತಮ ನಿದರ್ಶನವಾಗಿದ್ದಾಳೆ.

error: