March 13, 2025

Bhavana Tv

Its Your Channel

ಶ್ರೀ ವೆಂಕಟ್ರಮಣ ದೇವಸ್ಥಾನದ ಸಭಾಭವನದಲ್ಲಿ ರಕ್ತದಾನ ಶಿಬಿರ

ಭಟ್ಕಳ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಘೋಷ ವಾಕ್ಯಗಳೊಂದಿಗೆ ೨೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ಭಾಗವಾಗಿ ಭಟ್ಕಳ ತಾಲೂಕಿನ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಸಭಾಭವನದಲ್ಲಿ ರಕ್ತದಾನ ಶಿಬಿರ ನೆರವೇರಿತು.

ಶಾಸಕ ಸುನೀಲ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ ಪ್ರಧಾನ ಮಂತ್ರಿಗಳ ಜನ್ಮ ದಿನಾಚರಣೆಯನ್ನು ಕಳೆದ ಸೆ. ೧೭ರಿಂದ ನರೇಂದ್ರ ಮೋದಿಯವರು ಸಕ್ರಿಯ ರಾಜಕಾರಣಕ್ಕೆ ಬಂದು ೨೦ ವರ್ಷ ಕಳೆದ ಹಿನ್ನೆಲೆಯಲ್ಲಿ ೨೦ ದಿನಗಳ ಕಾಲ ಆಚರಿಸಲಾಗುತ್ತಿದೆ. ಭಟ್ಕಳದಲ್ಲಿ ಆರೋಗ್ಯಕ್ಕೆ ಸಂಬoಧಿಸಿದoತೆ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ, ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಿದ್ದೇವೆ. ೭೧ ಜನರು ರಕ್ತದಾನ ಮಾಡುವ ಗುರಿ ಇದೆ ಎಂದರು.
ಈ ಸಂದರ್ಭದಲ್ಲಿ ಗೋವಿಂದ ನಾಯ್ಕ, ರಾಜೇಶ ನಾಯ್ಕ, ಎನ್.ಎಸ್.ಹೆಗಡೆ, ಆರ್.ಜಿ.ಹೆಗಡೆ, ರವಿ ನಾಯ್ಕ ಜಾಲಿ, ಮೋಹನ ನಾಯ್ಕ, ಭಾಸ್ಕರ ದೈಮನೆ, ಸುರೇಶ ನಾಯ್ಕ, ಸಂತೋಷ ನಾಯ್ಕ, ಶಿವಾನಿ ಶಾಂತರಾಮ್,ಶ್ರೀಕಾAತ ನಾಯ್ಕ, ಡಾ. ಸವಿತಾ ಕಾಮತ್, ಡಾ. ವೀಣಾ, ಡಾ. ಯಕ್ಷೇಶ ಕಿದಿಯೂರು, ಡಾ. ರವಿ, ಮಹೇಂದ್ರ ನಾಯ್ಕ, ಪಾಂಡು ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

error: