March 13, 2025

Bhavana Tv

Its Your Channel

ದೇಶದ ವಿವಿಧೆಡೆ ಸ್ಥಾಪಿಸಲಾದ ಪಿಎಸ್‌ಎ (ಪ್ರೆಸ್ಸರ್ ಸ್ವಿಂಗ್ ಎಡೋರ್ಬನ್) ಪ್ಲಾಂಟ್‌ಗಳನ್ನು ಉದ್ಘಾಟಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ

ಭಟ್ಕಳ: ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಎದುರಾದ ಆಮ್ಲಜನಕದ ಕೊರತೆ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಭಟ್ಕಳವೂ ಸೇರಿದಂತೆ ದೇಶದ ವಿವಿಧೆಡೆ ಸ್ಥಾಪಿಸಲಾದ ಪಿಎಸ್‌ಎ (ಪ್ರೆಸ್ಸರ್ ಸ್ವಿಂಗ್ ಎಡೋರ್ಬನ್) ಪ್ಲಾಂಟ್‌ಗಳನ್ನು ವರ್ಚ್ಯುವಲ್ ಸಭೆಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಉದ್ಘಾಟಿಸಿದರು.

ನಂತರ ಅವರು ಮಾತನಾಡಿದ ಮಹಾಮಾರಿಯಿಂದ ದೇಶದ ಪ್ರಗತಿಗೆ ತಡೆ ಎದುರಾದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸವಾಲುಗಳನ್ನು
ದಿಟ್ಟತನದಿಂದ ಎದುರಿಸಿತು. ದೇಶದ ವಿವಿಧೆಡೆ ೧೧೦ ಪಿಎಸ್‌ಎ ಪ್ಯಾಂಟ್‌ಗಳನ್ನು ಸ್ಥಾಪಿಸಲಾಗಿದ್ದು, ೯೦ ಪ್ಲಾಂಟ್‌ಗಳ ಅಳವಡಿಕೆ ಕಾರ್ಯ ಮುಗಿದಿದೆ. ಉಳಿದಂತೆ ೨೦ ಕಡೆಗಳಲ್ಲಿ ಪ್ಲಾಂಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಇಂದು ೬೨ ಪ್ಯಾಂಟ್‌ಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಕೊರೊನಾ ಕಾಲದಲ್ಲಿ ದೇಶದ ಜಿಡಿಪಿ ತಗ್ಗಿದ್ದು, ಇದೀಗ ಗಮನಾರ್ಹವಾಗಿ ಚೇತರಿಕೆ ಕಂಡಿದೆ. ದೇಶ ಪ್ರಗತಿ ಪಥದತ್ತ ಹೆಜ್ಜೆ ಹಾಕಿದೆ ಎಂದು ವಿವರಿಸಿದರು. ಕೇಂದ್ರ ಸಚಿವ ಗಿರಿರಾಜ ಸಿಂಗ್, ರಾಜ್ಯ ಸಚಿವ ರಾಮೇಶ್ವರ ತೇಲಿ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಭಟ್ಕಳದಲ್ಲಿ ಸಾಂಕೇತಿಕವಾಗಿ ರಿಬ್ಬನ್ ಕತ್ತರಿಸುವ ಮೂಲಕ ಸಹಾಯಕ ಆಯುಕ್ತೆ ಮಮತಾದೇವಿ ಪಿಎಸ್‌ಎ ಪ್ಲಾಂಟ್ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಕೋವಿಡ್ ೨ನೇ ಅಲೆಯ ಸಂದರ್ಭದಲ್ಲಿ ೧೦೦೦ಕ್ಕೂ ಹೆಚ್ಚು ರೋಗಿಗಳು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ೧೦೦ಕ್ಕೂ ಹೆಚ್ಚು ರೋಗಿಗಳಿಗೆ ತುರ್ತು ನಿಗಾಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿದೆ. ಆ ಸಂದರ್ಭದಲ್ಲಿ ಎದುರಾದ ಆಮ್ಲಜನಕ ಸಮಸ್ಯೆಯನ್ನು ನಿಭಾಯಿಸಲು ಬಹಳ ಪ್ರಯತ್ನ ಪಟ್ಟಿದ್ದೇವೆ. ಇದೀಗ ಒಎನ್‌ಜಿಸಿ ನೆರವಿನೊಂದಿಗೆ ಭಟ್ಕಳದಂತಹ ಪುಟ್ಟ ತಾಲೂಕಿನಲ್ಲಿ ಪಿಎಸ್‌ಎ ಪ್ಲಾಂಟ್ ಸ್ಥಾಪನೆಯಾಗಿರುವುದು ಸಂತಸದ ತಂದಿದೆ ಎಂದು ವಿವರಿಸಿದರು. ಓಎನ್‌ಜಿಸಿ ಪ್ರತಿನಿಧಿ ದಕ್ಷಿಣಮೂರ್ತಿ,ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಸತೀಶ ಉಪಸ್ಥಿತರಿದ್ದರು.

error: