March 14, 2025

Bhavana Tv

Its Your Channel

ನೇವಿ ಹಾಗೂ ಕೋಸ್ಟ ಸೆಕ್ಯುರಿಟಿ ಪೊಲೀಸ್ ಅವರು ಜಂಟಿಯಾಗಿ ಭಟ್ಕಳ ಬಂದರನಲ್ಲಿ ಮೀನುಗಾರರ ಸಭೆ

ಭಟ್ಕಳ: ನೇವಿ ಹಾಗೂ ಕೋಸ್ಟ ಸೆಕ್ಯುರಿಟಿ ಪೊಲೀಸ್ ಅವರು ಜಂಟಿಯಾಗಿ ಭಟ್ಕಳ ಬಂದರದಲ್ಲಿ ಮೀನುಗಾರರ ಸಭೆಯನ್ನು ನಡೆಸಿ ಮೀನುಗಾರರು ಕೈಗೊಳ್ಳಬೇಕಾದ ಅನೇಕ ಮುಂಜಾಗೃತಾ ಕ್ರಮಗಳ ಕುರಿತು ತಿಳಿಸಿ ಹೇಳಿದರು.

ನೇವಿಯ ಹಡಗು ಐ.ಎನ್.ಎಸ್. ಕೋಸ್ವಾರಿ ಮೂಲಕ ಬಂದಿದ್ದ ನೇವಿ ಅಧಿಕಾರಿಗಳಾದ ಲೆಫ್ಟಿನೆಂಟ್ ವಿಜಯ ಕುಮಾರ್ ಹಾಗೂ ವಿಜಯಕುಮಾರ್ ಪಿ.ಒ. ಹಾಗೂ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್‌ನ ಪಿ.ಎಸ್.ಐ. ಅಣ್ಣಪ್ಪ ಮೊಗೇರ ಹಾಗೂ ಕೀರ್ತಿಕುಮಾರ್, ಮತ್ತು ರಮೇಶ್ ಖಾರ್ವಿ ಮುಂತಾದವರು ಸಭೆಯಲ್ಲಿದ್ದರು.
ಸಭೆಯಲ್ಲಿ ಮೀನುಗಾರರಿಗೆ ಮೀನುಗಾರಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಸಂಶಯಾತ್ಮಕ ಬೋಟುಗಳನ್ನು ಕಂಡರೆ, ಸಮುದ್ರದಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳನ್ನು ಕಂಡರೆ, ತಕ್ಷಣ ತಿಳಿಸುವಂತೆಯೂ ಹಾಗೂ ಸಮುದ್ರದ ಮೂಲಕ ಭಯೋತ್ಪಾದಕರು ಭಾರತಕ್ಕೆ ನುಸುಳುವ ಸಾಧ್ಯತೆ ಇದ್ದು ಅಂತಹ ಯಾವುದೇ ಚಟುವಟಿಕೆಗಳನ್ನು ಕಂಡರೆ ತಿಳಿಸುವಂತೆಯೂ ತಿಳಿಸಲಾಯಿತು. ಸಭೆಯಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮೀನುಗಾರರು ಭಾಗವಹಿಸಿದ್ದರು.

error: