March 14, 2025

Bhavana Tv

Its Your Channel

ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಮಹೀಂದ್ರ ಟೆಂಪೋ ಪಲ್ಟಿ; ೫ ಕ್ಕೂ ಅಧಿಕ ಮಂದಿ ಗಾಯ

ಭಟ್ಕಳ: ತಮಿಳುನಾಡಿನಿಂದ ಹೊರಟು ಕೊಲ್ಲೂರು ದರ್ಶನ ಮುಗಿಸಿ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಮಹೀಂದ್ರ ಟೆಂಪೋ ಪಲ್ಟಿಯಾದ ಪರಿಣಾಮ ಟೆಂಪೋದಲ್ಲಿದ್ದವರ ಪೈಕಿ ೫ ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಶನಿವಾರ ಭಟ್ಕಳದ ಸರ್ಪನಕಟ್ಟೆಯ ಹುಲಿದೇವರ ಮನೆ ಸಮೀಪ ನಡೆದಿದೆ.

ರಾಜೇಂದ್ರ ಬಾಬು ೬೯ ವರ್ಷ, ಧನಲಕ್ಷ್ಮೀ೫೫ ವರ್ಷ ದೀಪಿಕಾ ೩೫ ವರ್ಷ ಮತ್ತು ೧/೫ ವರ್ಷದ ಮಗು ನೀಲೇಶ ಇವರು ಗಂಭೀರ ಗಾಯಗೊಂಡರು ಆಗಿದ್ದು ಹಾಗೂ ಇನ್ನೂ ಉಳಿದು ಅವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ,ಗಾಯಗೊಂಡ ಅವರನ್ನು ಸರ್ಕಾರಿ ಆಸ್ಪತ್ರೆಗೆ ಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸೂಚಿಸಲಾಗಿದೆ.
ಹೆದ್ದಾರಿ ಕಾಮಗಾರಿ ಅವಾಂತರವೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಆಪಾದಿಸಿದ ಸಾರ್ವಜನಿಕರು ದಿನಕ್ಕೊಂದು ಕಡೆಗೆ ಸೂಚನಾ ಫಲಕ ಬದಲಾಯಿಸುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಟೆಂಪೋ ಪಲ್ಟಿಯಾದ ತಕ್ಷಣ ಜಮಾಯಿಸಿದ ಹಲವಾರು ಮಂದಿ ಗಾಯಗೊಂಡವರನ್ನು ಹೊರಗೆ ತೆಗೆಯಲು ಹಾಗೂ ಆಸ್ಪತ್ರೆ ಸೇರಿಸಲು ಸಹಕರಿಸಿದರು.

error: