March 14, 2025

Bhavana Tv

Its Your Channel

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರಿಗೆ ಭಟ್ಕಳ ನಾಮಧಾರಿ ಗುರುಮಠದಲ್ಲಿ ಶ್ರದ್ದಾಂಜಲಿ ಸಭೆ

ಭಟ್ಕಳ : ಹಠಾತ್ ಅಗುಲುವಿಕೆ ಇಂದ ಇಡೀ ರಾಜ್ಯದ ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ತಳ್ಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಟ್ಕಳ ನಾಮಧಾರಿ ಗುರುಮಠದಲ್ಲಿ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ವತಿಯಿಂದ ಶದ್ದಾಂಜಲಿ ಸಭೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಮಧಾರಿ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಅಪ್ಪುವನ್ನು ಹಠಾತ್ ನಿರ್ಗಮನ ನಮಗೆ ಒಡ ಹುಟ್ಟಿದ ಸಹೋದರನನ್ನೇ ಕಳೆದು ಕೊಂಡನAತಹ ಶೂನ್ಯ ಭಾವ ಆವರಿಸಿದಂತಾಗಿದೆ ಇಂತಹ ಹೃದಯವಂತ ಮಾನವೀಯ ಮಹಾ ಚೇತನಾ ಮರೆಯಾಗಿದ್ದು ಆ ನೋವನ್ನು ವ್ಯಕ್ತಪಡಿಸಲು ಯಾವ ಪದಗಳಿಗೂ ಅಸಾಧ್ಯ ಇವರ ಸಮಾಜದ ಸೇವೆ ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದು ಮಾತನಾಡಿದ ಮಾಜಿ ಶಾಸಕ ಜೆ.ಡಿ.ನಾಯ್ಕ ಚಿಕ್ಕ ವಯಸ್ಸಿನಲ್ಲಿಯೆ ಸಾಕಷ್ಟು ಸಾಧನೆ ಮಾಡಿ ರಾಷ್ಟçಮಟ್ಟಸ ಪ್ರಸಸ್ತಿ ಪಡೆದ ಪುನಿತ್ ರಾಜಕುಮಾರ ಅಕಾಲಿಕ ಮೃತ್ಯು ಹೊಂದಿದ್ದಾರೆ. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸಭೆಯಲ್ಲಿದ್ದ ಪ್ರಮುಖರಾದ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ವೆಂಕಟೇಶ ನಾಯ್ಕ ತಲಗೋಡು, ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ, ಡಾ. ಪುನೀರ್ ರಾಜಕುಮಾರರ ಸೇವೆಯನ್ನು ಕೊಂಡಾಡಿದರು.
ಸಭೆಯಲ್ಲಿ ಮೃತರ ಗೌರವಾರ್ಥ ಒಂದ ನಿಮಿಷ ಮೌನಾಚರಣೆ ನಡೆಸಲಾಯಿತು.ಸಭೆಯಲ್ಲಿ ಪ್ರಮುಖರಾದ ಭವಾನಿಶಂಕರ ನಾಯ್ಕ, ಎಂ.ಕೆ.ನಾಯ್ಕ, ಶಿವರಾಮ ನಾಯ್ಕ, ಗಿರೀಶ ನಾಯ್ಕ,ಶ್ರೀಧರ ನಾಯ್ಕ,ಗಣೇಶ ನಾಯ್ಕ , ಮಹೇಶ ನಾಯ್ಕ, ಪ್ರಕಾಶ ನಾಯ್ಕ, ಜಿಮ್ ವೆಂಕಟೇಶ, ಪಾಂಡುರಗ ನಾಯ್ಕ, ಮತ್ತಿತರರು ಇದ್ದರು.

error: