March 13, 2025

Bhavana Tv

Its Your Channel

ಕೋಣಾರ್ ಕ್ರಾಸ್ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಪುನಿತ್ ರಾಜಕುಮಾರ್ ಕಟೌಟಗೆ ಕ್ಷೀರಾಭಿಷೇಕ ಮತ್ತು ಪುಷ್ಪಾರ್ಷನೆ

ಭಟ್ಕಳ ತಾಲೂಕಿನ ಕೋಣಾರ್ ಕ್ರಾಸ್ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಸರ್ಪನೆಕಟ್ಟೆ ಕೋಣಾರ್ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ೨೨ ಅಡಿ ಉದ್ದದ ಪುನಿತ್ ರಾಜಕುಮಾರ್ ಕಟೌಟಗೆ ಕ್ಷೀರಾಭಿಷೇಕ ಮತ್ತು ಪುಷ್ಪಾರ್ಷನೆ ಮಾಡಿ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.

ತಾಲೂಕಿನಾದ್ಯಂತ ಸಮಾಜ ಮುಖಿ ನಟ ಪುನಿತ್ ರಾಜ್ ಕುಮಾರ್ ಅವರ ದೇಹಾಂತ್ಯದ ಕಾರಣ ಸಂತಾಪಗಳು ಕೇಳಿಬರುತ್ತಿದ್ದು ರವಿವಾರವಾದ ಇಂದು ಕೊಣಾರ್ ಕ್ರಾಸ್ ಬಳಿಯಲ್ಲಿ ಪುನಿತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ರಿಕ್ಷಾ ಚಾಲಕ ಮಾಲಕ ಸಂಘದ ಜಿಲ್ಲಾಧ್ಯಕ್ಷರು ನಾಮಧಾರಿ ಸಂಘದ ಅಧ್ಯಕ್ಷರು ಆದ ಕ್ರಷ್ಣ ನಾಯ್ಕ ಆಸರಕೇರಿ ಮಾತನಾಡಿ ಸಮಾಜಕ್ಕೆ ಚಿತ್ರನಟ ಪುನಿತ್ ರಾಜಕುಮಾರ್ ಅವರ ಕೊಡುಗೆ ಅಭೂತಪೂರ್ವವಾಗಿದೆ ಇವರು ಬಡವರಿಗಾಗಿ ಅನಾಥರಿಗಾಗಿ ವೃದ್ದರಿಗೆ ಮಹಿಳೆಯರಿಗೆ ನೇರವಾಗಲು ಮುಂಚುಣಿಯಲ್ಲಿದ್ದರು ರಾಜಕುಮಾರ್ ಕುಟುಂಬ ಸಮಾಜಕ್ಕೆ ಅತ್ಯುತ್ತಮ ಕೊಡುಗೆಯನ್ನು ನಿಡಿದೆ ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಬದಲ್ಲಿ ರಿಕ್ಷಾ ಚಾಲಕ ಮಾಲಕ ಸಂಘದ ಲೊಕೇಶ ನಾಯ್ಕ, ನರಸಿಂಹ ನಾಯ್ಕ ನಾರಾಯಣ ನಾಯ್ಕ ವೆಂಕಟರಮಣ ನಾಯ್ಕ , ರಾಜೇಶ ನಾಯ್ಕ ಸುಕ್ರಪ್ಪ ನಾಯ್ಕ ತಿಮ್ಮಯ್ಯ ನಾಯ್ಕ ರವಿ ನಾಯ್ಕ ಸುಬ್ರಾಯ ನಾಯ್ಕ ಮಂಜುನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: