March 15, 2025

Bhavana Tv

Its Your Channel

ಸುಮಾರು ಒಂದೂವರೆ ವರ್ಷದ ಬಳಿಕ ರಾಜ್ಯದಲ್ಲಿ ಎಲ್‌ಕೆಜಿ, ಯುಕೆಜಿ ಭೌತಿಕ ತರಗತಿಗಳು ಆರಂಭ

ಭಟ್ಕಳ: ಸುಮಾರು ಒಂದೂವರೆ ವರ್ಷದ ಬಳಿಕ ರಾಜ್ಯದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಪೂರ್ವ ಪ್ರಾಥಮಿಕ ಭೌತಿಕ ತರಗತಿಗಳು ಹಾಗೂ ಅಂಗನವಾಡಿಗಳು ಸೋಮವಾರ ಆರಂಭವಾಯಿತು.

ಕೊರೊನಾ ಇಳಿಮುಖವಾಗುತ್ತಿರುವ ಕಾರಣ ರಾಜ್ಯದಲ್ಲಿ ೧ರಿಂದ ೧೦ರ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಈಗಾಗಲೇ ಆರಂಭವಾಗಿವೆ. ಅಂತೆಯೇ ತಾಲ್ಲೂಕಿನಾದ್ಯಂತಹ ಅಂಗನವಾಡಿ ಪ್ರಾರಂಭೋತ್ಸವ ಸಂಭ್ರಮವಾಗಿ ಆಚರಿಸಲಾಯಿತು. ಪ್ರಾರಂಭೋತ್ಸವದ ಅಂಗವಾಗಿ ಎಲ್ಲಾ ಅಂಗನವಾಡಿಗಳನ್ನು ಶನಿವಾರ ಸ್ಯಾನಿಟೈಸ್ ಮಾಡಿ ಸ್ವಚ್ಛತೆಗೊಳಿಸಲಾಗಿತ್ತು. ಶಾಲೆಗಳಿಗೆ ತಳಿರು ತೋರಣ ಕಟ್ಟಿ ಸಿಂಗಾರ ಮಾಡಲಾಗಿತ್ತು. ಸೋಮವಾರ ಬೆಳಿಗ್ಗೆ ಆಗಮಿಸಿದ ಮಕ್ಕಳಿಗೆ ಆರತಿ ಬೆಳಗಿ ಶಾಲೆಯ ಒಳಗೆ ಬರಮಾಡಿಕೊಳ್ಳಲಾಯಿತು. ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು. ಕೆಲವೊಂದು ಶಾಲೆಗಳಲ್ಲಿ ಮಕ್ಕಳನ್ನು ವಾದ್ಯದ ಮೂಲಕ ಕರೆತರಲಾಯಿತು.
ತಲಾಂದ ಗ್ರಾಮದ ಜೋಳದಮುಲ್ಲೆ ಹಾಗೂ ಮುಟ್ಟಳ್ಳಿಯ ಅಂಗನವಾಡಿ ಶಾಲೆಗಳಿಗೆ ತಹಶೀಲ್ದಾರ ರವೀಚಂದ್ರ ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಭಾರೆ ಸಿಡಿಪಿಓ ಸುಶೀಲಾ ಮೊಗೇರ ಅಧ್ಯಕ್ಷತೆಯಲ್ಲಿ ಹಲವು ಅಂಗನವಾಡಿ ಶಾಲೆಗಳಲ್ಲಿ ಪಾಲಕರ ಸಭೆ ನಡೆಸಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಲಾಯಿತು.

error: