March 14, 2025

Bhavana Tv

Its Your Channel

ಭಟ್ಕಳ ಸಾಲಗಾರರ ಸಂಘದ ವತಿಯಿಂದ ಪುನೀತ ರಾಜಕುಮಾರಗೆ ಶ್ರದ್ಧಾಂಜಲಿ

ಭಟ್ಕಳ ತಾಲೂಕಿನ ಸಾಲಗಾರರ ಸಂಘದ ವತಿಯಿಂದ ಶಂಶುದ್ದೀನ್ ಸರ್ಕಲ್ ಪಕ್ಕದಲ್ಲಿ ಚಿತ್ರ ನಟ ದಿವಂಗತ ಪುನೀತ ರಾಜಕುಮಾರ ಅವರಿಗೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಲಗಾರ ಸಂಘದ ಅಧ್ಯಕ್ಷರಾದ ಗಣಪತಿ ನಾಯ್ಕ ಜಾಲಿ ಅವರು ಮಾತನಾಡಿ ಪುನೀತ ರಾಜಕುಮಾರ ಅವರು ಸಮಾಜಕ್ಕಾಗಿ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಇವರು ಯುವ ಜನತೆಗೆ ಆದರ್ಶ ಪ್ರಾಯರಾಗಿದ್ದಾರೆ. ಇದರಿಂದ ನಾವು ತುಂಬಾ ಪ್ರೇರಣೆಯನ್ನು ಪಡೆದಿದ್ದು, ನಮ್ಮ ತಾಲೂಕಿನ ಕೊಣಾರ ಗ್ರಾಮದ ಬಡ ಕುಟುಂಬವೊAದು ಉಳಿಯಲು ಸೂರಿಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಕಾರಣ ನಮ್ಮ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘಟನೆ ಈ ಕುಟುಂಬಕ್ಕೆ ಸೂರನ್ನು ಒದಗಿಸುವುದು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವನ್ನು ನೀಡಲು ತೀರ್ಮಾನಿಸಿರುತ್ತೇವೆ. ಇಂತಹ ಸಮಾಜಮುಖಿ ಕೆಲಸಗಳನ್ನು ನಾವು ಹಿಂದಿನಿoದಲೂ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕ ಗಂಗಾಧರ ನಾಯ್ಕ, ಮಾತನಾಡಿ ಪುನೀತ ರಾಜಕುಮಾರ ಅವರು ಕೇವಲ ಚಿತ್ರ ನಟನಷ್ಟೇ ಅಲ್ಲ. ಅವರೊಬ್ಬರು ಸಮಾಜಮುಖಿಯಾಗಿದ್ದಾರೆ. ಅವರು ಸಮಾಜಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮ, ಮಹಿಳಾ ಶಿಕ್ಷಣ, ಹೀಗೆ ಅನೇಕ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಇವರ ಆದರ್ಶ ಇಂದಿನ ಯುವಜನತೆಗೆ ಪ್ರೇರಣೆಯನ್ನು ಒದಗಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಲಗಾರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರು ನಜೀರ ಕಾಶಿಮ್, ಉಪಾಧ್ಯಕ್ಷ ಸಂಜೀವ ನಾಯ್ಕ ಮುರ್ಡೇಶ್ವರ, ಪ್ರಧಾನ ಕಾರ್ಯದರ್ಶಿ ಸುರೇಶ ಪೂಜಾರಿ, ಸಂಘಟಕರಾದ ಶಂಕರ ನಾಯ್ಕ, ವೆಂಕ್ಟೇಶ ನಾಯ್ಕ ಚೌಥನಿ, ನಾಸೀರ, ಜೆಸಿಐ ಸಂಘಟನೆಯ ಜಬ್ಬರ್, ಮುಂತಾದವರು ಉಪಸ್ಥಿತರಿದ್ದರು.

error: