March 13, 2025

Bhavana Tv

Its Your Channel

ಬಿ.ಎಸ್ಸಿ. ಹಾಗೂ ಬಿ.ಕಾಂ ೫ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ, ಉತ್ತಮಸಾಧನೆ ಮಾಡಿದ ಸಿದ್ಧಾರ್ಥ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು.

ಭಟ್ಕಳ: ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೦-೨೧ರ ಬಿ.ಎಸ್ಸಿ. ಹಾಗೂ ಬಿ.ಕಾಂ ೫ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಉತ್ತಮಸಾಧನೆ ಮಾಡಿದ್ದಾರೆ,

ಬಿ.ಎಸ್ಸಿ ಪರೀಕ್ಷೆಯಲ್ಲಿ ಸಹನಾ ಸತೀಶ ಶೆಟ್ಟಿ ಶೇ.೯೩, ಹೇಮಾ ಮಾಸ್ತಿ ನಾಯ್ಕ ಶೇ.೯೧, ನಮ್ರತಾ ನಾರಾಯಣ ನಾಯ್ಕ ಶೇ.೮೮% ಅಂಕಗಳನ್ನು ಪಡೆಯುವ ಮೂಲಕ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಬಿ.ಕಾಂ ಪರೀಕ್ಷೆಯಲ್ಲಿ ಪ್ರಗತಿ ಎನ್. ಹೆಬ್ಬಾರ ಶೇ.೯೬.೧೪, ಪರಮೇಶ್ವರಿ ಐ.ದೇವಾಡಿಗ ಶೇ.೯೨.೫೭ ಹಾಗೂ ಕವಿತಾ ಗೋವಿಂದ ಮೊಗೇರ ಶೇ.೯೧.೨೯ ಅಂಕಗಳನ್ನು ಪಡೆದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.

error: