
ಭಟ್ಕಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರ ಪರಿಷತ್ತನ್ನಾಗಿ ಮಾಡುವುದರೊಂದಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಧನಸಂಗ್ರಹಿಸಿಡುವುದು ನನ್ನ ಸ್ಪರ್ಧೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಪತ್ರಿಕಾ ಸಂಪಾದಕ, ಸಾಹಿತಿ ಕೃಷ್ಣಮೂರ್ತಿ ಹೆಬ್ಬಾರ ಹೇಳಿದರು.
ಅವರು ಭಟ್ಕಳ ಖಾಸಗೀ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಯಾವುದೇ ಒಂದು ಹುದ್ದೆಯನ್ನು ಹೊಂದುವವರಿಗೆ ಸ್ವತಂತ್ರವಾದ ಚಿಂತನೆ, ಗುರಿ ಇರಬೇಕು. ನಾನು ಹಲವಾರು ಗುರಿಗಳನ್ನು ಮುಂದಿಟ್ಟುಕೊAಡು ಚುನಾವಣೆಗೆ ಸ್ಪರ್ಧಿಸುತ್ತಿದ್ದು ಗುರಿ ಸಾಧನೆಗೆ ಜಿಲ್ಲೆಯ ಸಾಹಿತ್ಯ ಪ್ರಿಯರ ಸಹಕಾರವನ್ನು ಬಯಸುತ್ತಿದ್ದೇನೆ.
ಜಿಲ್ಲೆಯಲ್ಲಿ ಪತ್ರಿಕೆಯ ಮೂಲಕ ನೂರಾರು ಸಾಹಿತಿಗಳನ್ನು ಪರಿಚಯಿಸಿದ್ದೇನೆ. ಜಿಲ್ಲೆಯಲ್ಲಿ ೧೩ ಲಕ್ಷ ಜನಸಂಖ್ಯೆ ಇದ್ದರೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇವಲ ೪೫೦೦ ಸದಸ್ಯರಿದ್ದಾರೆ, ಕನಿಷ್ಟ ತಾಲೂಕಿನಲ್ಲಿ ೧೦೦೦ ಸದಸ್ಯರನ್ನಾಗಿ ಮಾಡುವುದು ನನ್ನ ಉದ್ದೇಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲಾ ಸಮಾಜದವರ ಪರಿಷತ್ತನ್ನಾಗಿ ಮಾಡುವುದಲ್ಲದೇ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಹೆಚ್ಚು ಒತ್ತು ನೀಡುತ್ತೇನೆ. ಅಧಿಕಾರ, ಗುಂಪುಗಾರಿಕೆ, ಜಾತಿಯ ಆಧಾರದ ಮೇಲೆ ನಾನು ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನನಗೆ ಯಾವುದೇ ವಯಕ್ತಿಕ ಹಿತಾಸಕ್ತಿಯೂ ಇಲ್ಲ ಎಂದು ಹೇಳಿದರು. ಒಬ್ಬ ಸಾಹಿತ್ಯ ಪ್ರೇಮಿಯಾಗಿ ಸ್ಪರ್ಧೆ ಮಾಡಿದ್ದು, ಸದಸ್ಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಲ್ಲಿ ಗೊಂದಲದ ಗೂಡಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತಷ್ಟು ಗಟ್ಟಿಗೊಳಿಸಿ ಎಲ್ಲರ ಪರಿಷತ್ತನ್ನಾಗಿ ಮಾಡುತ್ತೇನೆ ಎಂದು ಹೇಳಿದರಲ್ಲದೇ ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಸಾಹಿತಿಗಳ ಹೆಸರು ಸೂಚಿಸವಂತಾಗಬೇಕು. ಕನಿಷ್ಟ ಸರದಿಯ ಪ್ರಕಾರವಾದರೂ ಹೆಸರು ಸೂಚಿಸಲ್ಪಟ್ಟಲ್ಲಿ ಮುಂದೊoದು ದಿನ ನಮ್ಮ ಜಿಲ್ಲೆಯ ಸಾಹಿತಿಯೋರ್ವರು ಅಖಿಲ ಭಾರತ ಸಾಹಿತ್ಯ ಸಮ್ಮೇಳದನ ಅಧ್ಯಕ್ಷರಾಗಲು ಅವಕಾಶ ದೊರೆಯುವ ಕುರಿತು ಪ್ರಯತ್ನಿಸುತ್ತೇನೆಂದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ