

ಭಟ್ಕಳ: ತೆಂಗಿನಗುoಡಿ ಭಟ್ಕಳ ಮಾರ್ಗವಾಗಿ ಪ್ರಯಾಣಿಸುವ ಆಟೋ ಚಾಲಕರು ಸರತಿ ಸಾಲನ್ನು ಬಿಟ್ಟು, ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಟೆಂಪೋ, ಬಸ್ಸುಗಳಂತೆ ಪ್ರಯಾಣಿಕರನ್ನು ಹತ್ತಿಳಿಸಿಕೊಂಡು ಶೇರಿಂಗ್ ಬಾಡಿಗೆ ಹೊಡೆಯುತ್ತಿದ್ದಾರೆ. ಆದರೆ ಸರತಿ ಸಾಲಿನಲ್ಲಿ ನಿಲ್ಲುವ ಆಟೋಗಳಿಗೆ ಶೇರಿಂಗ್ ಬಾಡಿಗೆ ಪಡೆಯಲು ಅವಕಾಶ ನೀಡುತ್ತಿಲ್ಲ ಎಂದು ಆಪಾದಿಸಿ ಕೆಲ ಆಟೋ ಚಾಲಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಭಟ್ಕಳ ತಾಲೂಕಿನಲ್ಲಿ ಆಟೋ ಚಾಲಕರಿಗೆ ಬಾಡಿಗೆ ಬರ ಎದುರಾಗಿರುವುದರ ನಡುವೆ. ಭಟ್ಕಳದಲ್ಲಿ ಯೂನಿಯನ್ ಇದ್ದರೂ, ತೆಂಗಿನಗುAಡಿ ಭಟ್ಕಳ ಮಾರ್ಗವಾಗಿ ಓಡಾಡುವ ಕೆಲವು ಆಟೋಗಳು ಯೂನಿಯನ್ ನಿಯಮವನ್ನು ಪಾಲಿಸುತ್ತಿಲ್ಲ. ತೆಂಗಿನಗುAಡಿ ಕ್ರಾಸ್‌ನಲ್ಲಿ ರಿಕ್ಷಾ ನಿಲ್ದಾಣ ಇದ್ದರೂ, ೧೦ಮೀ. ದೂರದಲ್ಲಿ ಆಟೋ ನಿಲ್ಲಿಸಿ ಮದೀನಾ ಕಾಲೋನಿ, ಶಿರಾಲಿ, ಅಲ್ವೇಕೋಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರನ್ನು ಹತ್ತಿಸಿಕೊಂಡು ಶೇರಿಂಗ್ ಬಾಡಿಗೆ ಪಡೆಯಲಾಗುತ್ತಿದೆ. ಆದರೆ ಉಳಿದವರಿಗೆ ಶೇರಿಂಗ್ ಬಾಡಿಗೆ ಆಧಾರದಲ್ಲಿ ರಿಕ್ಷಾ ಓಡಿಸಲು ಅವಕಾಶ ಕೊಡುತ್ತಿಲ್ಲ. ಇದರಿಂದ ಆಟೋ ನಿಲ್ದಾಣದಲ್ಲಿ ನಿಲ್ಲುವ ರಿಕ್ಷಾಗಳಿಗೆ ಬಾಡಿಗೆ ಸಿಗದಂತಾಗಿದೆ. ಈ ಕುರಿತು ತಹಸೀಲ್ದಾರರು ಪರಿಶೀಲನೆ ನಡೆಸಿ, ಭಟ್ಕಳ ತೆಂಗಿನಗುAಡಿ ಮಾರ್ಗವಾಗಿ ಓಡಾಡುವ ಆಟೋಗಳಿಗೆ ಶೇರಿಂಗ್ ಆಧಾರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶ ನೀಡಬಾರದು ಅಥವಾ ಎಲ್ಲರಿಗೂ ಭಟ್ಕಳ ತೆಂಗಿನಗುAಡಿ ಮಾರ್ಗವಾಗಿ ಮುಕ್ತವಾಗಿ ಆಟೋ ಓಡಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಹಶೀಲ್ದಾರ ಎಸ್.ರವಿಚಂದ್ರ ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಾದ ಶೇಕ್ ಅಬ್ದುಲ್ಲಾ ಹಮೀದ್, ಇಸ್ಟೈಲ್ ಶೇಕ್, ಮಹ್ಮದ್ ಸಾದೀಕ್ ಗಾಡಿ, ಬಿಲಾಲ್ ಶಾಬಂದಿ ಮೊದಲಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ