March 12, 2025

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆ ಸುನ್ನಿ ಯುವಜನ ಸಂಘ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಸುನ್ನಿ ಯುವಜನ ಸಂಘ-(ಎಸ್ ವೈ ಎಸ್)ಇವರ ವತಿಯಿಂದ ಆಧ್ಯಾತ್ಮಿಕ ನೇತಾರ “ಅಶೈಖ್ ಮುಹಿಯ್ಯದ್ದೀನ್ ಅಬ್ದುಲ್ ಖಾದಿರ್ ಜೀಲಾನಿ” ರವರ ಅನುಸ್ಮರಣೆ ಪ್ರಯುಕ್ತ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ರೋಗಿಗಳಿಗೆ ಮಂಗಳವಾರ ಹಣ್ಣು ಹಂಪಲು ವಿತರಿಸಲಾಯಿತು.

ನಂತರ ಮೌಲಾನಾ ಶಂಸುದ್ದೀನ್ ಅಹ್ಸನಿ ಭಟ್ಕಳ ಇವರು ಮಾತನಾಡಿ ಜಿಲ್ಲೆಯಲ್ಲಿ ನೂತನವಾಗಿ ಆರಂಭವಾದ ಸಂಘವು ಮೊದಲನೆ ಭಾಗವಾಗಿ ಅಶೈಖ್ ಜೀಲಾನಿ” ರವರ ಅನುಸ್ಮರಣೆ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ನೀಡಿದೇವೆ ಮತ್ತು ಮುಂದಿನ ದಿನದಲ್ಲಿ ಹತ್ತು ಹಲವು ಕಾರ್ಯವನ್ನು ಹಮ್ಮಿ ಕೊಂಡಿದ್ದು ಅದರಲ್ಲಿ ನಿರ್ಗತಿಕರಿಗೆ
ನಿರಾಶ್ರಿತರಿಗೆ,ಅತೀ ಬಡ ಕುಟುಂಬವೊAದಕ್ಕೆ ಮನೆ ನಿರ್ಮಾಣ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಅದರಲ್ಲಿ ಯಾರಾದರೂ ಬಡ ಕುಟುಂಬ ಇದಲ್ಲಿ ನಮ್ಮ ಸಂಘಟನೆ ಮುಖ್ಯಸ್ಥರನ್ನು ಸಂಪರ್ಕಿಸಿ ನಂತರ ಅದರಲ್ಲಿ ಪರಿಶೀಲನೆ ಮಾಡಿ ಮನೆ ನಿರ್ಮಾಣ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್.ವೈ ಎಸ್ ಜಿಲ್ಲಾ ಅಧ್ಯಕ್ಷ ಕೆಎಂ ಶರೀಫ್,ಸರ್ಕಾರಿ ಆಸ್ಪತ್ರೆಯ ಡಾ:ಸತೀಶ್, ಎಸ್.ವೈ,ಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಡಾ ಮೊಹಮ್ಮದ್ ಯಾಹ್ಯಾ ಸದಸ್ಯರಾಧ ಜೀಲಾನಿ,ಎ.ಕೆ ಅಬ್ದುಲ್, ಡಯಾಲಿಸಿಸ್ ಭಾಗದ ಸಿಬ್ಬಂದಿ ಭಾಸ್ಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: