

ಭಟ್ಕಳ: ಕಳೆದ ೩೦ ವರ್ಷಗಳಿಂದ ಹಿರಿಯ ಒಡನಾಡಿಯಾಗಿ ಸಾಹಿತಿಗಳ ಅವರಿಂದ ಅನುಭವ ಪಡೆದು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತಿದ್ದೇನೆ ಎಂದು ಸಾಹಿತ್ಯ, ಪತ್ರಕರ್ತ ,ಯಲ್ಲಾಪುರದ ವೇಣು ಗೋಪಾಲ ಮದ್ಗುಣಿ ಹೇಳಿದರು.
ಅವರು ನಗರದ ಖಾಸಗಿ ಹೊಟೆಲ್ ನಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ನಾನು ಕಳೆದ ೫ ವರ್ಷಗಳಿಂದ ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ, ಕನ್ನಡದ ಸೇವೆಯನ್ನು ಮಾಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾವಿರಕ್ಕೂ ಹೆಚ್ಚು ಜನರನ್ನು ಹುರಿದುಂಬಿಸಿ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ,ಕನ್ನಡದ ಸೇವೆಯಲ್ಲಿ ತೊಡಗುವಂತೆ ಮಾಡಿದ ಕನ್ನಡ ಸಾಹಿತ್ಯ ಶ್ರೇಯಸ್ಸು ನನ್ನದಾಗಿದೆ. ನಾನು ಎಲ್ಲ ವರ್ಗದ ಜನರೊಡನೆ ಬೆರೆತು ಎಲ್ಲಾ ಗೌರವ ಸದಸ್ಯರ ಸೇವೆಯನ್ನು ಸಾಹಿತ್ಯಾಸಕ್ತರ ಮಾಡಿದ್ದ ವಿಶ್ವಾಸಗಳಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಶ್ರಮಿಸುತ್ತ,
ಕನ್ನಡದ ಕೆಲಸಗಳನ್ನು ಅತ್ಯಂತ ಪ್ರೀತಿಯಿಂದ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ, ಬದ್ಧತೆಯಿಂದ ನಿರ್ವಹಿಸಿದ್ದೇನೆ. ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದರೆ ಇದೆ ರೀತಿಯ ಕೆಲಸ ಮುಂದುವರಿಸುತ್ತೇನೆ ಎಂದರಲ್ಲದೆ, ಎಲ್ಲ ಸಾಹಿತ್ಯ ಬಂಧುಗಳು ಈ ಬಾರಿ ನನಗೆ ಮತ ಹಾಕಿ ಕನ್ನಡ ಮಾತೆಯ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.
ಪತ್ರಕರ್ತನ ಮೆಲೆ ಹಲ್ಲೆ ಖಂಡನಾರ್ಹ
ಭಟ್ಕಳದಲ್ಲಿ ಇತ್ತೀಚಿಗೆ ಪತ್ರಕರ್ತನ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೇಣುಗೋಪಾಲ ಮದ್ಗುಣಿ ತೀವ್ರವಾಗಿ ಖಂಡಿಸಿದ್ದು, ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ