

ಭಟ್ಕಳ ತಾಲ್ಲೂಕಿನ ಬೆಳ್ಕೆಯಲ್ಲಿ ಶನಿವಾರ ಹೆದ್ದಾರಿಗೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸಲು ಹೋದ ಕಾರೊಂದು ನಿಯಂತ್ರಣ ತಪ್ಪಿ ಆಟೋರಿಕ್ಷಾಗೆ ಗುದಿದ್ದ ಪರಿಣಾಮ ಕಾರಿನಲ್ಲಿದ್ದ ೪ ಜನರು ಗಂಭೀರ ಗಾಯಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ನಿವಾಸಿಗಳಾದ ಪ್ರಾತೇಶ ಮೊಗವೀರ(೧೮), ರಾಮಚಂದ್ರ ಶೇಟ್ (೧೭), ಭರತ್ ಜೋಗಿ(೧೯) ಹಾಗೂ ನೂತನ ಮಡಿವಾಳ (೧೯) ಗಾಯಗೊಂಡವರು. ಇವರು ಕುಂದಾಪುರದಿದ ಹೊನ್ನಾವರಕ್ಕೆ ಮಾರುತಿ ರಿಡ್ಜ ಕಾರಿನಲ್ಲಿ ಪ್ರಯಾಣಿಸುತಿದ್ದರು. ಕಾರು ರಿಕ್ಷಾಕ್ಕೆ ಗುದ್ದಿದ ಪರಿಣಾಮ ರಿಕ್ಷಾ ಹತ್ತೀರದ
ಬೊಲೆರೋ ಪಿಕಪ್ ಗೆ ಗುದ್ದಿ ರಿಕ್ಷಾ ಬೊಲೆರೋ ಜಖಂಗೊಡಿದೆ. ಅದೃಷ್ಠವಶಾತ್ ರಿಕ್ಷಾ ಹಾಗೂ ಬೊಲೆರೋ ದಲ್ಲಿ ಯಾರು ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್. ಐ, ರತ್ನ ಕೆ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈ ಗೊಂಡಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ