May 15, 2024

Bhavana Tv

Its Your Channel

ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ಬೃಹತ್ ತಿಮಿಂಗಿಲ

ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದಲ್ಲಿ ಬೃಹತ್ ತಿಮಿಂಗಿಲ ಕಾಣಿಸಿಕೊಳ್ಳುವ ಮೂಲಕ ಮೀನುಗಾರರನ್ನು ಆತಂಕಕ್ಕೆ ಈಡು ಮಾಡಿದೆ.

ಭಟ್ಕಳ ಬಂದರಿನಿAದ ಬೋಟುಗಳು ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಬೋಟೊಂದರ ಸಮೀಪವೇ ತಿಮಿಂಗಿಲ ತನ್ನ ಬಾಲದಿಂದ ಮೇಲೆದ್ದು ಐದಾರು ಬಾರಿ ನೀರಿಗೆ ಅಪ್ಪಳಿಸಿದ್ದು ಬೋಟಿನವರು ನೋಡಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಮೀನುಗಾರರು ಚಿಕ್ಕ ದೋಣಿಗಳಲ್ಲಿ ಮೀನುಗಾರಿಕೆಗೆ ಹೋಗುವುದಕ್ಕೆ ಭಯ ಪಡುವಂತಾಗಿದೆ. ಕಳೆದ ಎರಡು ಮೂರು ದಿನಗಳಿಂದ ವಿಡಿಯೋ ವೈರಲ್ ಆಗಿದ್ದು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೊಂದರೆಯಾಲಿದೆಯೇ ಎನ್ನುವ ಕುರಿತು ತಜ್ಞರು ಮಾಹಿತಿ ನೀಡಬೇಕಾಗಿದೆ.

ತಿಮಿಂಗಿಲಗಳು ಆಳ ಸಮುದ್ರದಲ್ಲಿ ಇರುತ್ತವೆ. ಅವುಗಳು ಸಮುದ್ರದಲ್ಲಿ ಹತ್ತಿರಕ್ಕೆ ಬರುವುದು ಹಾಗೂ ಮೇಲಕ್ಕೆ ಬರುವುದು ತೀರಾ ಅಪರೂಪ. ಹಾಲಿ ಹವಾಮಾನದಲ್ಲಿ ವ್ಯತ್ಯಾಸವಾಗಿದ್ದರಿಂದ ಆಳ ಸಮುದ್ರದಲ್ಲಿ ವಿಪರೀತ ಶೀತ ವಾತಾವಾರಣ ಕಾರಣಕ್ಕಾಗಿ ಅವುಗಳು ಸಮುದ್ರದಲ್ಲಿ ತೀರಕ್ಕೆ ಹಾಗೂ ಮೇಲಕ್ಕೆ ಬಂದಿರುವ ಸಾಧ್ಯತೆ ಇದೆ. ಅವುಗಳಿಂದ ಡೀಪ್ ಸೀ ಬೋಟುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ಫೈಬರ್ ಬೋಟುಗಳಲ್ಲಿ ಮೀನುಗಾರಿಕೆ ಮಾಡುವವರು ಸ್ವಲ್ಪ ಜಾಗೃತಿಯನ್ನು ವಹಿಸಬೇಕಾಗಿದೆ ಎಂದು ಮಲ್ಪೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಹೇಳಿದ್ದಾರೆ.

error: