
ಭಟ್ಕಳ: ಐಸಿಸ್ ನಿಯತಕಾಲಿಕೆಯಲ್ಲಿ ಮುರುಡೇಶ್ವರ ಶಿವನ ಮೂರ್ತಿಯನ್ನು ವಿಕ್ರತಿಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಹಿನ್ನೆಲೆ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ನ.೨೨ ರಂದು ಸಾಮಾಜಿಕ ಜಾಲ ತಾಣದಲ್ಲಿ “ದಿ ವೈಸ್ ಆಫ್ ಹಿಂದ್” ಎಂಬ ಶೀರ್ಷಿಕೆಯಡಿ ಮುರುಡೇಶ್ವರ ಶಿವನ ಮೂರ್ತಿಯನ್ನು ಪೋಸ್ಟ್ ಮಾಡಿ ಶಿವನ ಮೂರ್ತಿಯ ಶಿರದ ಭಾಗವನ್ನು ಧ್ವಂಸ ಗೊಳಿಸಿ. ಅದರ ಮೇಲೆ ಧ್ವಜವನ್ನು ಹಾರಿಸಿ¹”IT IS TIME TO BREAK THE FALSE GODSಎಂಬ ಸುದ್ದಿ ಹರಿದಾಡಿದೆ.
“ದಿ ವೈಸ್ ಆಫ್ ಹಿಂದ್” ಪತ್ರಿಕೆಯು ಐಸಿಸ್ ಉಗ್ರ ಸಂಘಟನೆಯ ಪತ್ರಿಕೆಯಾಗಿದ್ದು, ಈ ಸಂಘಟನೆಯು ತನ್ನ ಪತ್ರಿಕೆಯ ಮುಖ ಪುಟದಲ್ಲಿ ಈ ರೀತಿ ಶಿವನ ಮೂರ್ತಿಯನ್ನು ವಿಕ್ರತಗೊಳಿಸಿ ಪ್ರಕಟಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿ ಬಿಟ್ಟಿರುವ ವಿಷಯ ಗಮನಕ್ಕೆ ಬಂದಿದ್ದು ಯಾರೋ ಆರೋಪಿತರು ಹಿಂದುಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಮುರುಡೇಶ್ವರದ ಶಿವನ ಮೂರ್ತಿಯ ಶಿರ ಭಾಗವನ್ನು ಧ್ವಂಸಗೊಳಿಸಿ ಅದರ ಮೇಲೆ ಧ್ವಜವನ್ನು ಹಾರಿಸಿ ಒಂದು ಸಮುದಾಯದ ಮತಿಯನ್ನು ಅಪಮಾನಗೊಳಿಸಿ ಉದ್ದೇಶ ಪೂರ್ವಕವಾಗಿ ದ್ವೇಷ ಭಾವದಿಂದ ಈ ರೀತಿಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಮತೀಯ ಭಾವನೆಗೆ ಆಘಾತ ಉಂಟು ಮಾಡಿದ್ದಾರೆ. ಈ ರೀತಿಯ ಮತೀಯ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ಚಿತ್ರ ಪ್ರಕಟಿಸಿರುವ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನರಲ್ ಮ್ಯಾನೇಜರ್ ಆಡಿಟ್ ಆರ್.ಎನ್.ಎಸ್ ಗ್ರೂಪ್ ಮುರುಡೇಶ್ವರ ಇವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ