
ಭಟ್ಕಳ ನಗರ ಮಧ್ಯದ ನೀರಿನ ಸೆಲೆ ಕೋಕ್ತಿಕೆರೆಯ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಕೋಕ್ತಿ ಕೆರೆ ಅಭಿವೃದ್ಧಿ ಸಮಿತಿಯವರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೋಕ್ತಿಕೆರೆ ಪುರಾತನವಾಗಿದ್ದು, ಗೊಂಡಸಮಾಜದ ದೇವಸ್ಥಾನದ ಪ್ರಾಂಗಣದಲ್ಲಿ ಇದೆ. ಇತಿಹಾಸ ಪ್ರಸಿದ್ಧ ಕೋಕ್ತಿಕೆರೆಯು ಅತಿಯಾದ ನಗರೀಕರಣದಿಂದಾಗಿ ಸುತ್ತಲಿನ ಬಹುಭಾಗ ಒತ್ತುವರಿಯಾಗಿ ಕಿರಿದಾಗಿದೆ. ಹಲವು ವರ್ಷಗಳಿಂದ ಕೆರೆಯ ನಿರ್ವಹಣೆ ಇಲ್ಲದೇ ಅಗಾಧ ಪ್ರಮಾಣದ ಹೂಳು ತುಂಬಿ ನೀರಿನ ಶೇಖರಣೆ ಸಾಮರ್ಥ್ಯ ಕುಗ್ಗಿ ಹೋಗಿದೆ. ಇದರಿಂದ ಸುತ್ತಮುತ್ತಲಿನಲ್ಲಿ ಅಂತರ್ಜಲದ ಪ್ರಮಾಣ ಕಡಿಮೆಯಾಗಿ ಹಲವಾರು ಬಾವಿಗಳು ಬತ್ತಿ ಹೋಗಿವೆ. ಇಲ್ಲಿ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ ೨೦೧೪ರ ಎಲ್ಲ ಸೂಚನೆಗಳನ್ನು ಗಾಳಿಗೆ ತೂರಲಾಗಿದೆ. ಈಗಾಗಲೇ ಕೆರೆಯ ಒಳಹರಿವು ಹಾಗೂ ಹೊರಹರಿವುಗಳನ್ನು ಮುಚ್ಚಲಾಗಿದೆ.ಕೋಕ್ತಿನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಉಪಯೋಗಿಸಲ್ಪಟ್ಟ ಕಲುಷಿತ ನೀರು ಕೆರೆಗೆ ಸೇರ್ಪಡೆಗೊಳ್ಳುತ್ತಿದೆ. ಬಹುತೇಕ ಕೆರೆ ದಂಡೆಯ ಪ್ರದೇಶ ಅತಿಕ್ರಮಣವಾಗಿದ್ದು, ಇತ್ತೀಚೆಗೆ ಪುರಸಭೆ ಕೆರೆಯ ದಂಡೆ ಪ್ರದೇಶ ಉಪಯೋಗಿಸಿ ರಸ್ತೆ ನಿರ್ಮಾಣ ಮನೆಯ ಭಗ್ನಾವಶೇಷ, ಘನತ್ಯಾಜ್ಯ, ಆಸ್ಪತ್ರೆಯ ತ್ಯಾಜ್ಯ ಮೀಟರ್ ನಿರ್ಬಂಧಿತ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲು ನಿರ್ಬಂಧವಿದ್ದರೂ, ಕೆರೆ ಒತ್ತುವರಿ ಜೊತೆಗೆ ಕಟ್ಟಡಗಳು ನಿರ್ಮಾಣವಾಗಿವೆ. ಈ ಕಟ್ಟಡಗಳಿಂದ ಉತ್ಪತ್ತಿಯಾಗುವ ಕಲುಷಿತ ನೀರು ಹೊರ ಹೋಗುವ ಕಲುಷಿತ ನೀರು ಕೆರೆಯನ್ನು ಸೇರುವ ದಿನಗಳು ದೂರವಿಲ್ಲ.
ಈಗಾಗಲೇ ಹಲವಾರು ಕಡೆ ಮನೆಯ ಕಲುಷಿತ ನೀರು ಕೆರೆಗೆ ಸೇರುತ್ತಿದೆ. ಕೆರೆಗೆ ತಾಗಿಯೇ ಇನ್ನೂ ಅನೇಕ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಮುಂದೆ ಕೆರೆಗೆ ಭಾರೀ ಪ್ರಮಾಣದಲ್ಲಿ ಕಲುಷಿತ ನೀರು ಹರಿಯುವುದರಲ್ಲಿ ಸಂಶಯವಿಲ್ಲ. ಇದರಿಂದ ಈ ಕೋಕ್ತಿನಗರ ಭಾಗದಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ಉಂಟಾಗಬಹುದಾಗಿದೆ. ಹಾಹಾಕಾರ ಕೆರೆಯಲ್ಲಿ ಹೂಳು ತುಂಬಿರುವುದು ಮತ್ತು ಕೊಳಕು ನೀರು ಸೇರಿರುವುದರಿಂದ ಪರಿಸರ ಹಾಳಾಗುತ್ತಿದೆ. ದೇಶ ವಿದೇಶಗಳಿಂದ ಕೆರೆಯ ಪರಿಸರಕ್ಕೆ ವಲಸೆ ಬರುವ ಅನೇಕ ಪಕ್ಷಿಗಳ ಸಂಖ್ಯೆ ಕೂಡ ದಿನೇ ದಿನೇ ಕ್ಷೀಣಿಸುತ್ತಿದೆ. ಕೋಕ್ತಿ ಕೆರೆಯ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಿದರೆ ತಾಲೂಕಿನ ಪ್ರಮುಖ ವಾಯುವಿಹಾರ ಮತ್ತು ಪ್ರವಾಸಿ ತಾಣವಾಗಲಿದೆ. ಆದಷ್ಟು ಶೀಘ್ರದಲ್ಲಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಮನವಿಯನ್ನು ಸಹಾಯಕ ಆಯುಕ್ತ ಮಮತಾದೇವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ ನಾಯ್ಕ, ಪಾಂಡುರAಗ ನಾಯ್ಕ,ಪಾಂಡು ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ