March 12, 2025

Bhavana Tv

Its Your Channel

ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಭಜನಾ ಮಂಗಲೋತ್ಸವ ಕಾರ್ಯಕ್ರಮ

ಭಟ್ಕಳ: ವರ್ಷಂಪ್ರತಿಯoತೆ ಭಟ್ಕಳದ ಸುಪ್ರಸಿದ್ಧ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ, ಆಸರಕೇರಿಯ ೨೪ ದಿನಗಳ ಕಾರ್ತಿಕ ಭಜನೆ ಯು ದಿನಾಂಕ ೦೫-೧೧-೨೦೨೧ ರಿಂದ ಪ್ರಾರಂಭವಾಗಿ ದಿನಾಂಕ ೨೮-೧೧-೨೦೨೧ ರಂದು ಮಂಗಲೋತ್ಸವ ದೊಂದಿಗೆ ಮುಕ್ತಾಯಗೊಂಡಿರುತ್ತದೆ.

ಶ್ರೀ ವೆಂಕಟೇಶ್ವರ ಯುವಕ ಸಂಘ ಹಾಗೂ ಆಸರಕೇರಿ ಭಜನಾ ಮಂಡಳಿ ಇವರ ನೇತೃತ್ವದಲ್ಲಿ ದಿನಾಂಕ ೨೮ ರಂದು ಭಜನೆಯ ಮಂಗಲೋತ್ಸವ ಪ್ರತಿ ಬಾರಿಗಿಂತ ಈ ಬಾರಿ ವಿಜೃಂಭಣೆಯಿAದ ನಡೆಸಲ್ಪಟ್ಟಿತು.

ಸಂಜೆ ೭-೦೦ ಗಂಟೆಗೆ ಹೊರಟ ಭಜನಾ ಮೆರವಣಿಗೆ ಭಟ್ಕಳ ನಗರ ಭಾಗದ ಸೋನಾರಕೇರಿ ಮಾರ್ಗದ ಮೂಲಕ, ಪೋಲಿಸ್ ಸ್ಟೇಷನ್ ರೋಡ, ಮೂಲಕ ಭಟ್ಕಳ ರಾಜಾಂಗಣದ ಅಂಗಡಿ ಮಳಿಗೆಗಳ ದೀಪಕ್ಕೆ ಭಜನಾ ಕುಣಿತ ಮಾಡಿ, ಆ ನಂತರ ಶ್ರೀ ಕಳಿ ಹನುಮಂತ ದೇವಸ್ಥಾನ ಮಾರ್ಗವಾಗಿ ಗದಗಿಯ ಶ್ರೀಧರ ಪದ್ಮಾವತಿ ದೇವಸ್ಥಾನ ತಲುಪಿ ಅಲ್ಲಿಂದ ವಡೇರ ಮಠ ಮಾರ್ಗವಾಗಿ ಮಣ್ಕುಳಿಯನ್ನು ತಲುಪಿ ಅಲ್ಲಿಂದ ಪುನಃ ವಿವಿ ರೋಡ್ ಮಾರ್ಗವಾಗಿ ನಾಗಯಕ್ಷೇ ದೇವಸ್ಥಾನದ ಮೂಲಕ ಮುಂದುವರೆದು ನೆಹರು ರೋಡ್ ಮೂಲಕ ಚೆನ್ನಪಟ್ಟಣ ಹನುಮಂತ ದೇವಸ್ಥಾನ ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾರ್ಗವಾಗಿ ಆಸರೇರಿಯನ್ನು ತಲುಪಿ, ಮಡಿವಾಳ ಕೇರಿಯ ಶ್ರೀ ಮಹಾಸತಿ ದೇವಸ್ಥಾನಕ್ಕೆ ತೆರಳಿ ಪುನಃ ಆಸರಕೇರಿಯ ಮಾರ್ಗವಾಗಿ ರಾತ್ರಿ ೧೧ ಗಂಟೆಗೆ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ತಲುಪಿತು.

ಆ ನಂತರ, ವಿವಿಧ ಗ್ರಾಮಗಳಿಂದ ಬಂದAತಹ ೯ ಭಜನಾ ತಂಡಗಳಿಗೆ ಭಜನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರತಿ ತಂಡಕ್ಕೆ ೧೫ ನಿಮಿಷ ಸಮಯವಕಾಶ ನೀಡಲಾಗಿ, ರಾತ್ರಿ ೨ ಗಂಟೆಯವರೆಗೆ ಭಜನಾ ಸ್ಪರ್ಧೆ ನಡೆದು, ೨ ಗಂಟೆಗೆ ಶ್ರೀ ದೇವರ ಮಹಾಪೂಜೆ ನಡೆದು ಭಜನೆಗೆ ಮಂಗಲ ಹಾಡಲಾಯಿತು.

ಆ ನಂತರ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ತಂಡಗಳನ್ನು ಗುರುತಿಸಿ ನೀಡಿದ ತೀರ್ಪಿನ ಮೇಲೆ ಪ್ರಥಮ ಬಹುಮಾನ ಶ್ರೀ ಯಕ್ಷದೇವತೆ ಭಜನಾ ತಂಡ ಹಾರ್ಶಿಕಾನ್, ದ್ವಿತೀಯ ಬಹುಮಾನ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡ, ಕಾನಮದ್ಲು ಹಾಗೂ ತೃತೀಯ ಬಹುಮಾನ ಶ್ರೀ ರಾಮ ಭಜನಾ ತಂಡ ಸೋಮೇಶ್ವರ ಪಡೆದುಕೊಂಡಿತು.

ಪ್ರಥಮ ಬಹುಮಾನದ ಮೊತ್ತ ರೂ ೫೦೦೦ ವ್ಯವಸಾಯ ಸಹಕಾರಿ ಸಂಘ, ಭಟ್ಕಳ, ದ್ವಿತೀಯ ಬಹುಮಾನದ ಮೊತ್ತ ರೂ. ೪೦೦೦ ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘ ಹಾಗೂ ದ್ವಿತೀಯ ಬಹುಮಾನದ ಮೊತ್ತ ರೂ ೩೦೦೦ ಶ್ರೀ ಸೀತಾರಾಮ್ ಪತ್ತಿನ ಸಂಘ ಇವರು ನೀಡಿ ಸಹಕರಿಸಿರುತ್ತಾರೆ.

ಭಾಗವಹಿಸಿದ ಪ್ರತಿಯೊಂದು ಭಜನಾ ತಂಡಕ್ಕೂ ನೆನಪಿನ ಕಾಣಿಕೆ ಹಾಗೂ ದೇವರ ಪ್ರಸಾದವನ್ನು ನೀಡಿ ಗೌರವಿಸಲಾಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ, ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೃಷ್ಣ ನಾಯ್ಕ, ಆಸರಕೇರಿ ಭಜನಾ ಮಂಡಳಿಯ ಪ್ರಮುಖರಾದ ಶ್ರೀ ಶ್ರೀಧರ ನಾಯ್ಕ, ಶ್ರೀ ವೆಂಕಟೇಶ್ವರ ಯುವಕ ಸಂಘ, ಆಸರಕೇರಿ ಇದರ ಅಧ್ಯಕ್ಷರಾದ ಶ್ರೀಕಾಂತ ನಾಯ್ಕ, ವ್ಯವಸಾಯ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪರಮೇಶ್ವರ ನಾಯ್ಕ, ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗೋವಿಂದ ನಾಯ್ಕ, ಸೀತಾರಾಮ ಪತ್ತಿನ ಸಂಘದ ಅಧ್ಯಕ್ಷರಾದ ವಿಠ್ಠಲ್ ನಾಯ್ಕ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಪ್ರಮುಖರಾದ ಶ್ರೀಧರ ನಾಯ್ಕ ಭಜನಾ ಕಾರ್ಯಕ್ರಮದ ಪ್ರಾಸ್ತಾವಿಕ ಮಾತಾಡಿದರು. ಸಮಾಜದ ಅಧ್ಯಕ್ಷರಾದ ಕೃಷ್ಣ ನಾಯ್ಕ ಭಜನಾ ಕಾರ್ಯಕ್ರಮದ ಆಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಮಾತನಾಡಿದರು. ನಿರ್ಣಾಯಕವಾದ ಭಾಸ್ಕರ ನಾಯ್ಕ ನಿರ್ಣಾಯಕರ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷರಾದ ಶ್ರೀಕಾಂತ ನಾಯ್ಕ ಅವರು ಅಚ್ಚುಕಟ್ಟಾದ ಹಾಗೂ ಶಿಸ್ತುಬದ್ದವಾದ ಭಜನಾ ಕಾರ್ಯಕ್ರಮದ ಸಂಪೂರ್ಣ ಯಶಸ್ವಿ ಆಯೋಜನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ದಾನಿಗಳಿಗೆ, ಸೇವಾಕರ್ತರಿಗೆ, ಭಜಕರಿಗೆ ಹಾಗೂ ಪ್ರತಿನಿತ್ಯ ದೀಪ ಬೆಳಗಿದ ಮನೆಯವರಿಗೆ ಹಾಗೂ ಅಂಗಡಿಕಾರರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ, ಇತ್ತಿಚೆಗೆ ನಿಧನರಾದ ಆಸರಕೇರಿ ಭಜನಾ ಮಂಡಳಿಯ ಹಿರಿಯರಾದ ದಿವಂಗತ ಶ್ರೀ ಈರಪ್ಪ ನಾಯ್ಕ ಇವರನ್ನು ಸ್ಮರಿಸಿ, ಅವರ ಕುಟುಂಬ ವರ್ಗದವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಭಜನಾ ಮಂಗಲೋತ್ಸವದಲ್ಲಿ ನಾಮಧಾರಿ ಸಮಾಜದ ಉಪಾಧ್ಯಕ್ಷರಾದ ಭವಾನಿಶಂಕರ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಮಾಸ್ತಿ ನಾಯ್ಕ, ಎಲ್ಲಾ ನಾಮಧಾರಿ ಕೂಟದ ಹಾಲಿ ಸದಸ್ಯರು ಹಾಗೂ ಮಾಜಿ ಸದಸ್ಯರು, ಸಮಾಜದ ಹಿರಿಯರು, ವಿವಿಧ ಗ್ರಾಮದ ಸದಸ್ಯರು, ಮಹಿಳೆಯರು ಹಾಗೂ ಆಸರಕೇರಿಯ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

ಆಸರಕೇರಿ ಯುವಕ ಸಂಘದ ಸದಸ್ಯರು ಎಲ್ಲಾ ರೀತಿಯಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು. ಬಂದAತಹ ಎಲ್ಲಾ ಭಕ್ತಾಧಿಗಳಿಗೆ ಶ್ರೀ ದೇವರ ಪ್ರಸಾದ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಿರ್ಣಾಯಕರಾಗಿ ಭಾಸ್ಕರ ನಾಯ್ಕ, ಗಂಗಾಧರ ನಾಯ್ಕ, ನಾರಾಯಣ ನಾಯ್ಕ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಪಾಂಡುರAಗ ನಾಯ್ಕ, ಯುವಕ ಸಂಘದ ಕಾರ್ಯದರ್ಶಿ ರಾಜು ನಾಯ್ಕ ಹಾಗೂ ಜಗದೀಶ ನಾಯ್ಕ ನಿರ್ವಹಿಸಿದರು.

error: