
ಭಟ್ಕಳ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಬದ್ರಿಯಾ ಕಾಲೋನಿಯು ಕಳೆದ ಅನೇಕ ವರ್ಷಗಳಿಂದ ಪಂಚಾಯತ ಅಧಿಕಾರಿಗಳ ನಿಷ್ಕಾಳಜಿಯಿಂದ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಪಂಚಾಯತಿ ನಮಗೆ ಸೌಕರ್ಯ ಒದಗಿಸಬೇಕೆಂದು ಅಲ್- ಬದರ್ ವೆಲ್ವೇರ್ ಅಸೋಸಿಯೇಷನ್ ಅಧ್ಯಕ್ಷ ಸರ್ಫರಾಜ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೫ ವರ್ಷದಿಂದ ಈ ವಾರ್ಡ್ನ ಪ್ರಮುಖ ರಸ್ತೆಯಾದ ಬದ್ರಿಯಾ ಕಾಲೋನಿಯಿಂದ ಕೋಳಿ ಫಾರ್ಮ್ ರಸ್ತೆಯ ನಿರ್ಮಾಣದ ಬಗ್ಗೆ ಪಂಚಾಯತಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಆದರು ಸಹ ಯಾವುದೇ ಕಾರ್ಯ ಮಾಡಿಲ್ಲ. ಕಳೆದ ಹಲವಾರು ವರ್ಷದಿಂದ ತಗ್ಗರಗೋಡ ಸುತ್ತಮುತ್ತಲಿನ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗುತ್ತಿದ್ದು, ನಮ್ಮ ಅಸೋಸಿಯೇಷನ್ ಈ ಸಮಸ್ಯೆ ಬಗ್ಗೆ ಕಾಳಜಿ ವಹಿಸುತ್ತಾ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.
ಜಾಲಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿದ ಬಳಿಕ ಬದ್ರಿಯಾ ಕಾಲೋನಿಯ ಅಭಿವೃದ್ಧಿಗೆ, ಗ್ರಾಮದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರಿನ ಪೂರೈಕೆ, ಬೀದಿದೀಪದ ನಿರ್ವಹಣೆ ಇಲ್ಲದೇ ವಾರ್ಡ್ ಜನರು ಸರಕಾರದ ಸೌಲಭ್ಯ ವಂಚಿತರಾಗುತ್ತಿದ್ದೇವೆ. ನಾವು ಪಂಚಾಯತಗೆ ಸಮರ್ಪಕವಾಗಿ ತೆರಿಗೆ ಕಟ್ಟುತ್ತಿದ್ದು ಆದರೆ ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಮಾತ್ರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಬಳೆ ಗ್ರಾಮಸ್ಥ ಮಹ್ಮಮುದ್ ಮಾತನಾಡಿ, ಹೆಬಳೆ ಗ್ರಾಮದ ತಬ್ರೇಜ್ ಕೋಳಿ ಫಾರ್ಮ್ ಮಾರ್ಗದ ರಸ್ತೆಯಿಂದ ಖಾಸಿಂಜಿ ಅವರ ಮನೆವರೆಗೆ ಕಳೆದ ವರ್ಷ ಡಾಂಬರೀಕರಣ ಮಾಡಲಾಗಿತ್ತು. ಈ ವರ್ಷದ ಮಳೆಯಿಂದಾಗಿ ರಸ್ತೆಯ ಡಾಂಬರು ಕಿತ್ತು ಹೋಗಿದೆ. ಚರಂಡಿ ಕಾಮಗಾರಿಯಿಂದ ರಸ್ತೆ ಹದಗೆಟ್ಟಿದ್ದು, ಇದರಿಂದ ಈ ಮಾರ್ಗದಲ್ಲಿ ಓಡಾಡುವ ಜನರಿಗೆ ರಸ್ತೆ ಸಂಚಾರ ಮಾಡಲು ಕಷ್ಟಕರವಾಗಿದೆ. ಆದ್ದರಿಂದ ಗ್ರಾಪಂ ಚುನಾವಣೆಯಲ್ಲಿ ವಾರ್ಡ್ಗೆ ಸೂಕ್ತ ಅಭ್ಯರ್ಥಿಯನ್ನು ಚುನಾಯಿಸಿದ್ದೇವೆ. ಈ ಭಾಗದ ಬೀದಿದೀಪ ಸಮಸ್ಯೆ ನಿವಾರಣೆಯಾಗಿದ್ದು, ಆದರೆ ಅರ್ದಬರ್ಧ ಚರಂಡಿ ಕಾಮಗಾರಿಯಿಂದ ಮಳೆಗಾಲದಲ್ಲಿ ಚರಂಡಿ ಹಾಗೂ ಮಳೆ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ಪರಿಣಾಮ ಗ್ರಾಮಸ್ಥರ ಪರಿಸ್ಥಿತಿ ಕಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಸೋಶಿಯೇಸನ್ ಕಾರ್ಯದರ್ಶಿ ಮೌಲಾನಾ ತೌಪಿಕ್, ಸದಸ್ಯರಾದ ಅಬ್ದುಲ್ ರಜಾಕ್, ಬಾಷಾ, ಹಜರತ್ ಅಲಿ, ಜುಬೇರ್ ಮಸೀದಿ ಅಧ್ಯಕ್ಷ ಮಹ್ಮಮುದ್,ಗ್ರಾಮಸ್ಥರು ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ