March 12, 2025

Bhavana Tv

Its Your Channel

ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದ ಅಮಾನವೀಯ ಘಟನೆ

ಭಟ್ಕಳ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಎರಡು ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಬೆಳಕೆ ಸಮೀಪ ನಡೆದಿದೆ.
ಭಟ್ಕಳ ತಾಲೂಕಿನ ಗಡಿ ಭಾಗದಲ್ಲಿರುವ ಶಿರೂರು ಟೋಲಗೆ ಸೇರಿದ ೧೦೩೩ ವಾಹನದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎರಡು ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದ ದ್ರಶ್ಯದ ವಿಡಿಯೋ
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕೃತ್ಯಕ್ಕೆ ತಾಲ್ಲೂಕಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಐ.ಆರ್.ಬಿ. ಕಂಪನಿಯ ಬೇಜವಾಬ್ದಾರಿತನದ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಸೋಮವಾರದಂದು ಟೋಲ್ ಗೇಟ್ ಬಳಿ ಹಿಂದೂ ಸಂಘಟನೆ ಅವರಿಂದ ೧೦ ಗಂಟೆಗೆ ಪ್ರತಿಭಟಿಸಲಿದ್ದೇವೆಂಬ ಎಚ್ಚರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಕೃತ್ಯವು ಸಮಸ್ತ ಹಿಂದು ಸಮಾಜ ಖಂಡಿಸಿದ್ದಾರೆ.

error: