May 16, 2024

Bhavana Tv

Its Your Channel

ತಾಲೂಕಾ ಮಟ್ಟದ ಭಗವದ್ಗೀತಾ ಸ್ಪರ್ಧೆ

ಭಟ್ಕಳ ; ಸ್ವರ್ಣವಲ್ಲೀಯ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನವು ಹಮ್ಮಿಕೊಂಡ ಭಗವದ್ಗೀತಾ ಅಭಿಯಾನದ ಅಂಗವಾಗಿ ಆಯೋಜಿಸಿರುವ ಭಟ್ಕಳ ತಾಲೂಕಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳು ದಿ ೪.೧೨.೨೦೨೧ ರಂದು ಭಟ್ಕಳದ ಶ್ರೀ ನಾಗಯಕ್ಷೇ ದೇವಸ್ಥಾನದಲ್ಲಿ ಜರುಗಿದವು.

ಭಾಷಣ ಸ್ಪರ್ಧೆಯಲ್ಲಿ ಶ್ರೀವಲಿ ಪ್ರೌಢಶಾಲೆಯ ಹರ್ಶಿತಾ ನಾಯ್ಕ ಹಾಗೂ ಪವಿತ್ರಾ ನಾಯ್ಕ, ಗೀತ ಕಂಠಪಾಠ ಸ್ಪರ್ಧೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸೈಂಟ್ ಥಾಮಸ್ ಶಾಲೆಯ ಶ್ರೀಶಾ ಶೇಟ್, ಪ್ರೀತಮ ನಾಯ್ಕ, ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾಭಾರತಿ ಶಾಲೆಯ ಅನಂತ ಹೆಬ್ಬಾರ, ಶ್ರೀವಲಿ ಪ್ರೌಢಶಾಲೆಯ ಸಂಜನಾ ನಾಯ್ಕ, ಪಿಯುಸಿ ವಿಭಾಗದಲ್ಲಿ ದಿ.ನ್ಯೂ ಇಂಗ್ಲೀಷ ಪಿಯು ಕಾಲೇಜಿನ ಪ್ರಶಾಂತಿ ಹೆಬ್ಬಾರ, ದೀಕ್ಷಾ ನಾಯ್ಕ ರವರು ತಾಲೂಕಾ ಮಟ್ಟದಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡರು. ನಿರ್ಣಾಯಕರಾಗಿ ಶಿವಶಾಂತಿಕಾ ಪ್ರೌಢಶಾಲೆಯ ಸಂಸ್ಕçತ ಶಿಕ್ಷಕರಾದ ಶ್ರೀನಿವಾಸ ಉಪಾಧ್ಯಾಯ, ಶ್ರೀ ಗುರು ಸುಧೀಂದ್ರ ಕಾಲೇಜಿನ ಕನ್ನಡ ಉಪನ್ಯಾಸಕರಾದ ಆನಂದ ದೇವಾಡಿಗ, ಸಮಾಜ ಸೇವಕರಾದ ಬಿ.ಕೆ.ಪೈ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಮದಾಸ ಪ್ರಭುಗಳು “ಭಗವದ್ಗೀತೆಯು ನಮ್ಮ ಜೀವನದ ಎಲ್ಲಾ ಪ್ರಶ್ನೆಗಳಿಗೆ – ಕಷ್ಟಗಳಿಗೆ ಪರಿಹಾರ ನೀಡುವ ಗ್ರಂಥವಾಗಿದೆ. ಪ್ರತಿಮನೆಯಲ್ಲಿ ಪ್ರತಿದಿನ ಇದರ ಪಠಣವಾಗಬೇಕು” ಎಂದರು. ಸಂಯೋಜಕರಾದ ಗಣಪತಿ ಶಿರೂರ, ಶ್ರೀನಾಥ ಪೈ, ವಿಘ್ಷೇಶ ಉದಯ ಪ್ರಭು ಹಾಗೂ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

error: