March 12, 2025

Bhavana Tv

Its Your Channel

ಪತ್ರಕರ್ತ ಅರ್ಜುನ ಮಲ್ಯ ಹಲ್ಲೆ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ

ಭಟ್ಕಳ: ಪತ್ರಕರ್ತ ಅರ್ಜುನ್ ಮಲ್ಯರ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬoಧಿಸಿದoತೆ ಭಟ್ಕಳ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.
ಬಂಧಿತರನ್ನು ಮುರುಡೇಶ್ವರ ಮೂಲದ ಭಾಸ್ಕರ ನಾಯ್ಕ (೨೭) ಹಾಗೂ ಮಂಜುನಾಥ ನಾಯ್ಕ (೨೬) ಎಂದು ಗುರುತಿಸಲಾಗಿದೆ. ಈ ಕೇಸಿನ ಮುಖ್ಯ ಆರೋಪಿ ಈಗಾಗಲೇ ಜೈಲಿನಲ್ಲಿರುವ ರಿಕ್ರಿಯೇಶನ ಕ್ಲಬ್‌ನ ಮಾಲಕ ಮಾದೇವ ನಾಯ್ಕನ ಸಂಗಡಿಗರು ಎನ್ನಲಾಗಿದೆ. ಬಂಧಿತ ಮಾದೇವ ನಾಯ್ಕನ ಸೂಚನೆಯ ಮೇರೆಗೆ ಇವರು ಈ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯ ವೇಳೆಗೆ ಮಾಹಿತಿ ದೊರೆತಿದೆ. ಪತ್ರಕರ್ತ ಅರ್ಜುಲ್ ಮಲ್ಯನ ಚಲನವಲನಗಳ ಬಗ್ಗೆ ಹಲ್ಲೆಕೋರರಿಗೆ ಮಾಹಿತಿ ರವಾನಿಸಿದ್ದ ವ್ಯಕ್ತಿಯೂ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಅರ್ಜುಲ್ ಮಲ್ಯ ಹಲ್ಲೆಗೆ ಸಂಬoಧಿಸಿದoತೆ ಪೊಲೀಸರು ಮುಖ್ಯ ಆರೋಪಿ ರಿಕ್ರಿಯೇಷನ್ಸ್ ಕ್ಲಬ್‌ನ ಮಾಲಕ ಮಾದೇವ ನಾಯ್ಕನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಮಾದೇವ ನಾಯ್ಕನ ಹಿಂದೆ ಯರ‍್ಯಾರು ಈ ಕೇಸಿನಲ್ಲಿ ಸಂಚು ನಡೆಸಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಹೊರಬೀಳಬೇಕಾಗಿದೆ.

error: