December 22, 2024

Bhavana Tv

Its Your Channel

ಜಾಲಿ ಪಟ್ಟಣ ಪಂಚಾಯತ ಚುನಾವಣೆ : 20 ವಾರ್ಡಗಳಿಗೆ 55 ನಾಮಪತ್ರ ಸಲ್ಲಿಕೆ

ಭಟ್ಕಳ: ಡಿ. 27 ರ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಚುನಾವಣೆಯ ಹಿನ್ನೆಲೆ ಬುಧವಾರದಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಒಟ್ಟು 20 ವಾರ್ಡಗಳ ಪೈಕಿ 55 ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣೆ ಕಣವೂ ರಂಗೇರಿದೆ.

ವಾರ್ಡ ನಂಬರ 7, 13, 15, 16, 17 ರಲ್ಲಿ ತಲಾ 1, ವಾರ್ಡ ನಂಬರ 3, 4, 5, 8, 11, 14, 20 ರಲ್ಲಿ ತಲಾ 2, ವಾರ್ಡ ನಂಬರ 2, 12, 18, 19 ರಲ್ಲಿ ತಲಾ 3, ವಾರ್ಡ ನಂಬರ 6, 10 ರಲ್ಲಿ ತಲಾ 4, ವಾರ್ಡ ನಂಬರ 9 ರಲ್ಲಿ 7 ಹಾಗೂ ವಾರ್ಡ ನಂಬರ 1 ರಲ್ಲಿ 9 ಮಂದಿ ನಾಮಪತ್ರ ಸಲ್ಲಿಕೆ ಮಾಡಿರುವ ಮೂಲಕ ಒಟ್ಟು 55 ನಾಮಪತ್ರ ಸಲ್ಲಿಕೆಯಾಗಿದೆ.

ಈ ಪೈಕಿ ಕಾಂಗ್ರೆಸನಿAದ ವಾರ್ಡ ನಂಬರ 1 ರಲ್ಲಿ 2 ನಾಮಪತ್ರ, 2,3,4,8,9, 10 ಮತ್ತು 11 ರಲ್ಲಿ ತಲಾ 1 ನಾಮಪತ್ರ ಸಲ್ಲಿಕೆಯಾಗಿದ್ದರೆ, ಬಿಜೆಪಿಯಿಂದ ವಾರ್ಡ ನಂಬರ 2, 3, 4, 8,9, 10 ಮತ್ತು 11 ರಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಇನ್ನು ಪಕ್ಷೇತ್ತರ ಅಭ್ಯರ್ಥಿಯಾಗಿ ವಾರ್ಡ ನಂಬರ 2,7, 13, 15, 16 ಮತ್ತು 17ರಲ್ಲಿ ತಲಾ ಓರ್ವರು, ವಾರ್ಡ ನಂಬರ 5, 10, 14 ಮತ್ತು 20 ರಲ್ಲಿ ತಲಾ ಒಬ್ಬರು, ವಾರ್ಡ ನಂಬರ 12, 18 ಮತ್ತು 19 ರಲ್ಲಿ ತಲಾ ಮೂವರು, ವಾರ್ಡ ನಂಬರ 6ರಲ್ಲಿ ನಾಲ್ಕು ಮಂದಿ, ವಾರ್ಡ ನಂಬರ 9 ರಲ್ಲಿ 5 ಮಂದಿ, ವಾರ್ಡ ನಂಬರ 1 ರಲ್ಲಿ 7 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿ ರಾಷ್ಟಿçÃಯ ಪಕ್ಷದ ಅಭ್ಯರ್ಥಿಗಳಿಗೆ ಟಕ್ಕರ ಕೊಡಲು ಸಜ್ಜಾಗಿದ್ದಾರೆ.

ಡಿ. 16 (ಗುರುವಾರದಂದು) ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದ್ದು, ಡಿ. 18 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಇನ್ನು ಡಿ. 27 ರಂದು ಚುನಾವಣೆಯೂ ನಿಗದಿಯಾಗಿದೆ.

ಪಕ್ಷೇತ್ತರರೇ ಹೆಚ್ಚು:
ಈ ಬಾರಿ ಚುನಾವಣೆಯಲ್ಲಿ ರಾಷ್ಟಿçÃಯ ಪಕ್ಷಗಳ ಅಭ್ಯರ್ಥಿಗಳ ಒಲವಿಗಿಂತ ಪಕ್ಷೇತ್ತರ ಅಭ್ಯರ್ಥಿಗಳ ಆಸಕ್ತಿಯೇ ಹೆಚ್ಚಿದ್ದು, ಚುನಾವಣೆ ರಂಗು ಜೋರಾಗಿದೆ. ಇನ್ನೊಂದು ಕಡೆ ಪ್ರತಿ ಬಾರಿಯಂತೆ ಈ ಬಾರಿಯೂ ತಂಜೀA ಮಧ್ಯಸ್ಥಿಕೆಯಿರುವ ಮಾತುಗಳು ಕೇಳಿ ಬಂದಿದೆ.

ಈ ಚುನಾವಣೆಯಲ್ಲಿ ತಂಜೀA ಮುಖಂಡರ ಬೆಂಬಲ, ಸಹಕಾರ ಪಡೆದುಕೊಳ್ಳುವ ಕಾರಣ ಹೆಚ್ಚಿನ ಅಭ್ಯರ್ಥಿಗಳು ತಂಜೀA ಬೆಂಬಲ ಪಡೆಯಲು ಕಸರತ್ತು ಪಡೆಯುತ್ತಿದೆ. ಈ ಬಾರಿ ಮೇಲ್ನೋಟಕ್ಕೆ 12ಕ್ಕೂ ಅಧಿಕ ವಾರ್ಡಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯ ಮೂಲಕ ನೇಮಕಗೊಳ್ಳುವ ಅವಕಾಶ ಕಂಡು ಬರುತ್ತಿದೆ.

ಭಟ್ಕಳ ಪುರಸಭೆಯಂತೆ ಜಾಲಿ ಪಟ್ಟಣ ಪಂಚಾಯತನಲ್ಲಿಯೂ ಕೂಡ ತಂಜೀA ಪಾರುಪತ್ಯ ಸಾಧಿಸುವುದು ಖಡಾಖಂಡಿತವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಪಕ್ಷೇತ್ತರ ಅಭ್ಯರ್ಥಿಗಳ ಆಸಕ್ತಿ ಹೆಚ್ಚಿರುವುದು ಚುನಾವಣೆಯು ಯಾರ ಪರವಾಗಲಿದೆ ಎಂಬ ಅಂದಾಜು ಈಗಾಗಲೇ ಎಲ್ಲೆಡೆ ಕೇಳಿ ಬರುತ್ತಿದೆ.

ಒಟ್ಟು 20 ವಾರ್ಡಗಳಲ್ಲಿ ಕಾಂಗ್ರೆಸ್ 9, ಬಿಜೆಪಿ 7 ಹಾಗೂ 39 ಮಂದಿ ಪಕ್ಷೇತ್ತರರ ಅಭ್ಯರ್ಥಿಗಳು ಚುನಾವಣೆಯ ಸರದಿಯಲ್ಲಿ ನಿಂತಿದ್ದು ನಾಮಪತ್ರ ಪರಿಶೀಲನೆ ಹಾಗೂ ಹಿಂಪಡೆಯುವ ಪ್ರಕ್ರಿಯೆ ಬಳಿಕ ನೈಜ ಚಿತ್ರಣ ತಿಳಿದು ಬರಲಿದೆ.

error: