December 21, 2024

Bhavana Tv

Its Your Channel

ರೋಟರಿ ಕ್ಲಬ್ ಭಟ್ಕಳರವರಿಂದ ತಾಲೂಕಾ ಆಸ್ಪತ್ರೆಗೆ ಥ್ರೆಡ್ ಮಿಲ್ ಟೆಸ್ಟಿಂಗ್ ಯಂತ್ರ ದೇಣಿಗೆ

ಭಟ್ಕಳ: ರೋಟರಿ ಕ್ಲಬ್ ಭಟ್ಕಳ ಇದರ ಸಹಯೋಗ ಹಾಗೂ ದಿ. ಲಕ್ಷ್ಮೀ ಮಹಾದೇವ ನಾಯ್ಕ ಇವರ ಸ್ಮರಣಾರ್ಥ ಗುರುವಾರ ಭಟ್ಕಳ ತಾಲೂಕಾ ಆಸ್ಪತ್ರೆಗೆ ಥ್ರೆಡ್ ಮಿಲ್ ಟೆಸ್ಟಿಂಗ್ ಯಂತ್ರವನ್ನು ದೇಣಿಗೆಯಾಗಿ ನೀಡಿದರು.

ರೋಟರಿ ಕ್ಲಬ್ ಭಟ್ಕಳ ಇದರ ಸಹಯೋಗ ಹಾಗೂ ದಿ. ಲಕ್ಷ್ಮೀ ಮಹಾದೇವ ನಾಯ್ಕ ಇವರ ಸ್ಮರಣಾರ್ಥ ಥ್ರೆಡ್ ಮಿಲ್ ಟೆಸ್ಟಿಂಗ್ ಯಂತ್ರವನ್ನು ರೋಟರಿ ಗವರ್ನರ್ ಗೌರೀಶ ದೋಂಡ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಟ್ಟರು.
ನಂತರ ಮಾತನಾಡಿದ ಅವರು ಭಟ್ಕಳದ ಸರ್ಕಾರಿ ಆಸ್ಪತ್ರೆಯು ಥ್ರೆಡ್‌ಮಿಲ್ ಟೆಸ್ಟಿಂಗ್ ಯಂತ್ರ ಹೊಂದಿದ ರಾಜ್ಯದ ಮೊದಲು ಸರ್ಕಾರಿ ಆಸ್ಪತ್ರೆಯಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಇರುವ ಸೌಲಭ್ಯ ಇಂದು ಭಟ್ಕಳ ಸರ್ಕಾರಿ ಆಸ್ಪತ್ರೆ ತಲುಪಲು ಸಹಕರಿಸಿದ ಭಟ್ಕಳ ರೋಟರಿ ಸದಸ್ಯರ ಕಾಳಜಿ ಶ್ಲಾಘನೀಯ ಎಂದರು.
ಡಾ. ಲಕ್ಷ್ಮೀಶ ನಾಯ್ಕ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಸಾಮಾನ್ಯವಾಗಿದ್ದು ಜನರು ಆತಂಕದಲ್ಲಿದ್ದಾರೆ. ಯಾವುದಾದರೂ ರೋಗಿಗಳ ಕುಟುಂಬದವರಲ್ಲಿ ಹೃದಯಾಘಾತದ ಹಿನ್ನಲೆ ಇದ್ದಲ್ಲಿ ಅಂತಹವರು ಇಲ್ಲಿ ಬಂದು ಪರೀಕ್ಷಿಸಿಕೊಳ್ಳಬಹುದು ಎಂದರು.
ಭವಿಷ್ಯದಲ್ಲಿ ಹೃದಯಾಘಾತವಾಗುವ ಸಂಭವವನ್ನು ಇದರಿಂದ ಮೊದಲೇ ಅರಿತು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. ರೋಟರಿ ಕ್ಲಬ್ ಭಟ್ಕಳ, ದಿ. ಲಕ್ಷ್ಮೀ ಮಹಾದೇವ ನಾಯ್ಕ ಇವರ ಸ್ಮರಣಾರ್ಥ ಟಿಎಮ್‌ಟಿ ಯಂತ್ರ ಭಟ್ಕಳ ಆಸ್ಪತ್ರೆ ಸೇರಿದ್ದು ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ತಾಲೂಕಾ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ರೋಟರಿ ಜಿಲ್ಲಾ ಗವರ್ನರ್ ಗೌರೀಶ ದೋಂಡ, ರೋಟರಿ ಅಸಿಸ್ಟಂಟ್ ಗವರ್ನರ್ ಡಾ. ಶಿವರಾಮ ಕೆ.ವಿ, ರೋಟರಿ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಸೆಕ್ರೆಟರಿ ಶ್ರೀನಿವಾಸ ಪಡಿಯಾರ ಮಾತನಾಡಿದರು.

ಕೋವಿಡ್ ೧೯ ಸಂದರ್ಭದಲ್ಲಿ ಸಾರ್ವಜನಿಕ ಸೇವೆ ಮಾಡಿದ ಸಮಾಜ ಸೇವಕರಾದ ಅಚ್ಯುತ್ ಕಾಮತ, ಮಂಜುನಾಥ ನಾಯ್ಕ ಮುಟ್ಟಳ್ಳಿ, ಕೆಇಬಿ ಇಂಜಿನೀಯರ್ ಶಿವಾನಂದ ನಾಯ್ಕ, ಮಾಜಿ ಯೋಧ ಶ್ರೀಕಾಂತ ನಾಯ್ಕ, ಇರ್ಷಾದ್, ಇವರನ್ನು ರೋಟರಿ ಜಿಲ್ಲಾ ಗವರ್ನರ್ ಡಾ. ಗೌರೀಶ ದೋಂಡ ಗೌರವಿಸಿದರು. ಡಾ. ಗೌರೀಶ ಪಡುಕೋಣೆ, ಪ್ರಶಾಂತ ಕಾಮತ, ಮುಸ್ತಾಖ ಬಾವಿಕಟ್ಟೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

error: