May 4, 2024

Bhavana Tv

Its Your Channel

ಯಶಸ್ವಿಯಾಗಿ ನಡೆದ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ.

ಟ್ಕಳ:- ಸ್ಪಂದನ ಚ್ಯಾರಿಟೇಬಲ್ ಟ್ರಸ್ಟ ಭಟ್ಕಳ, ಜಟಗೇಶ್ವರ ಸ್ಪೋರ್ಟ್ಸ ಕ್ಲಬ್ ಸಭಾತಿ, ಪ್ರಾರ್ಥನಾ ಪ್ರತಿಷ್ಠಾನ ಭಟ್ಕಳ, ಹಾಗೂ ಆನಂದಾಶ್ರಮ ಪ.ಪೂ.ಕಾಲೇಜು,ಭಟ್ಕಳ ಇವರ ಸಹಯೋಗದಲ್ಲಿ ಪದವಿ, ಸ್ನಾತಕೋತ್ತರ, ಬ.ಎಡ್, ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉತ್ತರ ಕನ್ನಡ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯು ಇಲ್ಲಿನ ಅಳ್ವೆಕೋಡಿ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದುರ್ಗಾಪರಮೇಶ್ವರಿ ದೇವಾಲಯದ ಧರ್ಮದರ್ಶಿ ನಾರಾಯಣ ದೈಮನೆ ಮಾತನಾಡಿ ಜಗನ್ಮಾತೆಯ ಸನ್ನಿಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪೋಷಿಸುವ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ. ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸಲು ಜಿಲ್ಲೆಯ ಬೇರೆ ಬೇರೆ ಕಾಲೇಜುಗಳಿಂದ ಆಗಮಿಸಿದ ಕಾಲೇಜುವಿದ್ಯಾರ್ಥಿಗಳಿಗೆ ದುರ್ಗಾಪರಮೇಶ್ವರಿಯ ಅನುಗ್ರಹ ಸದಾ ಇರಲಿ ಎಚಿದು ಹಾರೈಸಿದರು.ೆÆಳ್ಳಬೇಕು ಹಾಗೆಯೇ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಚಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪಂದನ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ ವಿಧ್ಯಾರ್ಥಿಗಳ ಪ್ರತಿಭೇಗಳನ್ನು ಪೋಷಿಸುವ ಉದ್ದೇಶದಿಂದ ಆಯೋಜಿಸಿದ ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ವಿವಿಧ ಕಾಲೇಜುಗಳಿಂದ ೨೨ ತಂಢಗಳು ಆಗಮಿಸಿರುವುದು ನಿಜಕ್ಕೂ ಸಂತಸದ ಸಂಗತಿ. ವಿದ್ಯಾರ್ಥಿಗಳು ಇಂಥ ಅವಕಾಶವನ್ನುಬಳಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳಬೇಕೆಂದು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಧರ ಶೇಟ್, ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ, ಸ್ಪಂದನ ಸಂಸ್ಥೆಯ ಸದಸ್ಯ ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಜಟಗೇಶ್ವರ ಸ್ಪೋರ್ಟ್ಸ ಕ್ಲಬ್ ನ ಅಧ್ಯಕ್ಷ ನಾಗೇಶ ನಾಯ್ಕ, ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ಬಿ.ಮಡಿವಾಳ ರಸಪ್ರಶ್ನೆ ಕಾರ್ಯಕ್ರಮದ ಸಂಯೋಜಕ ಶ್ರೀಧರ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮಗಳಲ್ಲಿ ಜಿಲ್ಲೆಗಳಿಂದ ೨೨ ತಂಡಗಳು ಭಾಗವಹಿಸಿದ್ದು ಇತಿಹಾಸ, ಸಂವಿಧಾನ, ಪ್ರಚಲಿತ ಘಟನೆಗಳು, ಭೂಗೋಳ,ಸಾಮಾನ್ಯ ವಿಜ್ಞಾನ, ರಾಮಾಯಣ ಮಹಾಭಾರತ, ನಾಡು ನುಡಿ ಸಂಸ್ಸೃತಿಯ ಕುರಿತು ಸುಮಾರು ಹತ್ತಕ್ಕೂ ಹೆಚ್ಚಿನ ವಿವಿಧ ಸುತ್ತುಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತೀವ ಉತ್ಸಾಹದಿಂದ ಪಾಲ್ಗೊಂಡರು. ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೋಪಾಲ ವೈದ್ಯ ಮತ್ತು ಭರತ್ ಮೊಗೇರ ತಂಡ ಪ್ರಥಮ ಸ್ಥಾನ ಪಡೆದು ೧೦ಸಾವಿರ ನಗದು ಹಾಗೂ ಟ್ರೋಫಿಯನ್ನು ಗೆದ್ದುಕೊಂಡಿತು. ಭಟ್ಕಳದ ಅಂಜುಮನ್ ಪದವಿ ಕಾಲೇಜಿನ ಶ್ರೇಯಸ್ ನಾಯಕ ಮತ್ತು ಪೂಜಾನಾಯ್ಕ ದ್ವಿತೀಯ ಸ್ಥಾನ ಪಡೆದು ೬೦೦೦/- ನಗದು ಟ್ರೋಫಿಗೆದ್ದರೆ ಇದೇ ಕಾಲೇಜಿನ ರೋಹಿತ್ ನಾಯ್ಕ ಮತ್ತು ರೂಪಾ ನಾಯ್ಕ ೪ಸಾವಿರ ನಗದು , ಟ್ರೋಫಿಯನ್ನು ಗೆದ್ದುಕೊಂಡಿತು. ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು. ಸಾಯಂಕಾಲ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಸ್ಪಂದನ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ, ಸದಸ್ಯ ಪಾಂಡುರAಗ ನಾಯ್ಕ, ಪ್ರಭಾಕರ ನಾಯ್ಕ ಶಿರಾಲಿ ಉಪಸ್ಥಿತರಿದ್ದರು. ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀಧರ ನಾಯ್ಕ ಹಾಗೂ ಶಿಕ್ಷಕ ಪೆಟ್ರಿಕ್ ಟೆಲ್ಲಿಸ್ ನಿರ್ವಹಿಸಿದರು. ದಯ ನಾಯ್ಕ, ಆನಂದ ನಾಯ್ಕ ತಟ್ಟಿಹಕಕಲ್, ಮಂಜುನಾಥ ನಾಯ್ಕ ಮತ್ತು ಶ್ರೀಧರ ನಾಯ್ಕ ಸಹಕರಿಸಿದರು. ಕಾರ್ಯಕ್ರವiದ ಕೊನೆಯಲ್ಲಿ ರಸಪ್ರಶ್ನೆ ಸ್ಪರ್ಧೇಯ ಕುರಿತು ತಮ್ ಅಭಿಪ್ರಾಯವನ್ನು ಹಂಚಿಕೊoಡು ವ್ಯವಸ್ಥಿತವಾಗಿ ಆಯೋಜಿಸಿದ ಸಂಘಟನೆಗಳಿಗೆ ತಮ್ಮ ಕ್ರತಜ್ಞತೆಗಳನ್ನು ಸಲ್ಲಿಸಿದರು.

error: