May 18, 2024

Bhavana Tv

Its Your Channel

ನಾಳೆ ಬೃಹತ್ ನೇತ್ರದಾನ ವಾಗ್ದಾನ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ

ಭಟ್ಕಳ: ಸ್ಪಂದನ ಚ್ಯಾರಿಟೇಬಲ್ ಟ್ರಸ್ಟ ಭಟ್ಕಳ, ಪ್ರಸಾದ ಸೂಪರ್ ಸ್ಪೆಶಾಲಿಟಿ ನೇತ್ರಾಲಯ ಉಡುಪಿ, ತಾಲೂಕಾ ಆಸ್ಪತ್ರೆ ಭಟ್ಕಳ ಮತ್ತು ಭಟ್ಕಳ ತಾಲೂಕಿನ ೩೩ ವಿವಿಧ ಸಮಾಜಮುಖಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬ್ರಹತ್ ನೇತ್ರದಾನ ವಾಗ್ದಾನ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಹೇಳಿದರು.

ಅವರು ಶುಕ್ರವಾರ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಭಟ್ಕಳ ತಾಲೂಕಾಸ್ಪತ್ರೆಯ ಆವರಣದಲ್ಲಿ ಇದೇ ಬರುವ ನಾಳೆ ಮುಂಜಾನೆ ೯.೩೦ಕ್ಕೆ ಆರಂಭವಾಗಿ ಮದ್ಯಾಹ್ನ ೨ ಗಂಟೆಯ ತನಕ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕರಾದ ಸುನೀಲ್ ನಾಯ್ಕ ಉದ್ಘಾಟಿಸಲಿದ್ದು ಸ್ಪಂದನ ಸಂಸ್ಥೆಯ ಅಧ್ಯಕ್ಷರಾದ ರಾಘವೇಂಧ್ರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಸಾದ ನೇತ್ರಾಲಯದ ನೇತ್ರ ತಜ್ಞೆ ಡಾ. ಗುಣಶ್ರೀ, ತಾಲೂಕಾ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ವಿಶೇಷ ಆಹ್ವಾನಿತರಾಗಿ ನೇತ್ರ ತಜ್ಞ ಡಾ.ಹರ್ಷಿತ್ ಹೆಗ್ಡೆ ಉಪಸ್ಥಿತರಿರಲಿದ್ದಾರೆ. ಶಿಬಿರದಲ್ಲಿ ನೇತ್ರತಪಾಸಣೆ, ಅಗತ್ಯವುಳ್ಳವರಿಗೆ ಉಚಿತ ಕಣ್ಣಿನ ಪೊರೆ ಶಸ್ತç ಚಿಕಿತ್ಸೆ, ರಿಯಾಯತಿ ದರದಲ್ಲಿ ಕನ್ನಡಕ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ನೇತ್ರದಾನಕ್ಕೆ ನೊಂದಣಿ ಕಾರ್ಯಕ್ರಮವೂ ನಡೆಯಲಿದ್ದು ಈಗಾಗಲೇ ಭಟ್ಕಳ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಮೂಲಕ ಸಾವಿರಾರು ಜನರು ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ರಮವು ತಾಲೂಕಿನ ಎಲ್ಲ ಸಾರ್ವಜನಿಕರ ಗಮನ ಸೆಳೆದಿದ್ದು ಭಟ್ಕಳ ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿ ಇಷ್ಟೊಂದು ಬ್ರಹತ್ ಪ್ರಮಾಣದಲ್ಲಿ ನೇತ್ರದಾನದ ಅಭಿಯಾನಕ್ಕೆ ಚಾಲನೆ ದೊರೆತಂತಾಗಿದೆ. ನೇತ್ರದಾನ ವಾಗ್ದಾನದ ಅಭಿಯಾನಕ್ಕೆ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳು, ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್, ಕ್ರೀಡಾ ತರಬೇತುದಾರ ಕಾಶೀನಾಥ್ ನಾಯ್ಕ, ಕಿರುತೆರೆ ನಟ ಸುರೇಶ ರೈ, ಚಂದುಗೌಡ, ಹಿನ್ನೆಲೆ ಗಾಯಕಿ ಶಮಿತಾಮಲ್ನಾಡ್, ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕರಾದ ಮಂಕಾಳು ವೈದ್ಯ, ಜೆ.ಡಿ.ನಾಯ್ಕ, ವೈದ್ಯರು, ಗಾಯಕರು, ಕಿರುತೆರೆ ಕಲಾವಿದರು, ನಿರೂಪಕರು ಸಮಾಜದ ಗಣ್ಯರು ವಿಡಿಯೋ ಸಂದೇಶದ ಮೂಲಕ ನೇತ್ರದಾನ ಮಾಡುವಂತೆ ವಿನಂತಿಸುತ್ತಿದ್ದಾರೆ. ಅಂಧ ವಿದ್ಯಾರ್ಥಿ ಶಾಯಲ್ ಗೋಮ್ಸ ನೇತ್ರದಾನಕ್ಕೆ ವಿನಂತಿಸಿರುವ ವಿಡೀಯೋ ಎಲ್ಲರ ಗಮನ ಸೆಳೆದಿದೆ.
ಈಗಾಗಲೇ ಸಂಘಟಕರು ತಾಲೂಕಿನಾದ್ಯಂತ ವಿವಿಧ ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ನೇತ್ರದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ಮುಂದಾಗಬೇಕು. ಮರಣದ ನಂತರ ಇನ್ನೊಬ್ಬರ ಬಾಳಿಗೆ ಬೆಳಕಾಗಲು ನೇತ್ರದಾನದ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಕೋರಿದರು.
ಡಾ. ಸವಿತಾ ಕಾಮತ ಮಾತನಾಡಿ ನೇತ್ರದಾನ ಅರಿಯುವ ಬಗ್ಗೆ ವಿವರಿಸಿದರು ಈ ಸಂದರ್ಭದಲ್ಲಿ ಗಂಗಾಧರ ನಾಯ್ಕ, ಶ್ರೀಕಾಂತ ನಾಯ್ಕ, ಭವಾನಿಶಂಕರ ನಾಯ್ಕ, ಪಾಂಡುರAಗ ನಾಯ್ಕ, ರಾಜೇಶ ನಾಯ್ಕ ಸೇರಿ ಇತರರು ಇದ್ದರು.

error: