May 4, 2024

Bhavana Tv

Its Your Channel

ಭಟ್ಕಳ ಹವ್ಯಕ ವಲಯೋತ್ಸವ ಕಾರ್ಯಕ್ರಮ

ಭಟ್ಕಳ: ಭಟ್ಕಳ ಹವ್ಯಕ ವಲಯೋತ್ಸವ ಕಾರ್ಯಕ್ರಮಗಳಲ್ಲಿ ವಲಯದ ಪ್ರಥಮ ಕಾರ್ಯಕ್ರಮ ಮಾತೆಯರ ಕುಂಕುಮಾರ್ಚನೆ, ಶಿವಮಾನಸ ಸ್ತೋತ್ರ ಸಾಮೂಹಿಕ ಪಾರಾಯಣದೊಂದಿಗೆ ಇಲ್ಲಿನ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಲಯದ ಅಧ್ಯಕ್ಷ ಶಂಭು ಎನ್. ಹೆಗಡೆ ಅವರು ದ್ವಜಾರೋಹಣ ನಡೆಸಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಶಂಖನಾದ, ಗುರುವಂದನೆಯೊAದಿಗೆ ಕಾರ್ಯಕ್ರಮ ಆರಂಭವಾಯಿತು.
ಸಭಾ ಕಾರ್ಯಕ್ರಮದಲ್ಲಿ ವಲಯದ ಉಪಾಧ್ಯಕ್ಷ ಬಾಲಕೃಷ್ಣ ಶಾಸ್ತ್ರಿ, ವಿಷ್ಣುಗುಪ್ತ ವಿಶ್ವವಿದ್ಯಾಲಯದ ಕಾರ್ಯದರ್ಶಿ ನೀಲಕಂಠ ಯಾಜಿ, ಮಂಡಲದ ಮಾತೃ ಪ್ರಧಾನೆ ರೇಷ್ಮಾ ಭಟ್ಟ, ವಲಯದ ಮಾತೃ ಪ್ರಧಾನೆ ರಾಧಾ ಹೆಗಡೆ, ವಲಯ ಕೋಶಾಧಿಕಾರಿ ಪ್ರಕಾಶ ಭಟ್ಟ ಉಪಸ್ಥಿತರಿದ್ದರು.
ನಂತರ ಗೋಪಾಲಕೃಷ್ಣ ಭಟ್ಟ ದೇರಂಪಾಡಿ ಅವರಿಂದ ಯೋಗ ಹಾಗೂ ಮುದ್ರೆಗಳು ಕುರಿತು ಪ್ರಾತ್ಯಕ್ಷತೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉಪನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ರೋಗಕ್ಕೆ ಯಾವ ರೀತಿಯಾಗಿ ಯೋಗ ಮಾಡಿದರೆ ಅದು ವಾಸಿಯಾಗುತ್ತದೆ ಎನ್ನುವ ಕುರಿತು ಅವರು ಮಾಹಿತಿ ನೀಡಿದರು. ನೆರೆದಿದ್ದ ಗುರುಭಕ್ತರು ಅನೇಕರು ಪ್ರಶ್ನೆಗಳನ್ನು ಕೇಳಿ ಅವರಿಂದ ಸೂಕ್ತ ಉತ್ತರವನ್ನು ಸಹ ಪಡೆದುಕೊಂಡರು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಲಯದ ಉಪಾಧ್ಯಕ್ಷ ಬಾಲಕೃಷ್ಣ ಶಾಸ್ತಿç ವಹಿಸಿದ್ದರು. ಗೋಪಾಲಕೃಷ್ಣ ಭಟ್ಟ ದೇರಂಪಾಡಿ ಅವರನ್ನು ವಲಯದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಪ್ರಕಾಶ ಎನ್. ಭಟ್ಟ ಸಾಲೆಮನೆ ಇವರು ಆತಿಥ್ಯವನ್ನು ನೀಡಿದರು. ವಲಯದ ಕೋಶಾಧಿಕಾರಿ ಪ್ರಕಾಶ ಭಟ್ಟ ಮುರ್ಡೇಶ್ವರ ಸ್ವಾಗತಿಸಿದರು. ಮಂಜುನಾಥ ಹೆಗಡೆ ಕಾರ್ಯಕ್ರಮ ನಿರೂಪಿಸಿ, ಶ್ರೀಮಠದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಂಘಟನಾ ಕಾರ್ಯದಶಿ ಎಂ.ಜಿ.ಹೆಗಡೆ ವಂದಿಸಿದರು.
ನಂತರ ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದ, ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

error: