May 18, 2024

Bhavana Tv

Its Your Channel

ಜಾಲಿ ಪಟ್ಟಣ ಪಂಚಾಯತಿಯ 13 ಸ್ಥಾನಕ್ಕೆ ಇಂದು ಮತದಾನ; 7 ಸ್ಥಾನಗಳಿಗೆ ಅವಿರೋಧ ಆಯ್ಕೆ

ಭಟ್ಕಳ ಜಾಲಿ ಪಟ್ಟಣ ಪಂಚಾಯತಿಯ 13 ಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ಮತದಾನ ನಡೆಯಲಿದ್ದು ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಿಂದ ಮತಗಟ್ಟೆಗಳಿಗೆ ಅಗತ್ಯದ ಪರಿಕರಗಳನ್ನು ಹೊತ್ತು ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ತೆರಳಿದರು.

ಜಾಲಿ ಪಟ್ಟಣ ಪಂಚಾಯತಗೆ ಒಟ್ಟೂ 20 ಸ್ಥಾನಗಳು ಇದ್ದು ಇವುಗಳಲ್ಲಿ ಈಗಾಗಲೇ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಬಾಕಿ ಇರುವ 13 ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದ್ದು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.
ಚುನಾವಣೆ ನಡೆಯುವ 13 ಸ್ಥಾನಗಳಿಗೆ ಒಟ್ಟೂ 35 ಅಭ್ಯರ್ಥಿಗಳು ಕಣದಲ್ಲಿದ್ದು ಅವರಲ್ಲಿ ಬಿಜೆಪಿ 7ರಲ್ಲಿ, ಕಾಂಗ್ರೆಸ್ 8ರಲ್ಲಿ ಸ್ಪರ್ಧೆ ಮಾಡಿದ್ದರೆ, ಉಳಿದವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಒಂದನೇ ವಾರ್ಡಿನಲ್ಲಿ 4, ಎರಡನೇ ವಾರ್ಡಿನಲ್ಲಿ 2, ಮೂರನೇ ವಾರ್ಡಿನಲ್ಲಿ 2, ನಾಲ್ಕನೇ ವಾರ್ಡಿನಲ್ಲಿ 2, ಆರನೇ ವಾರ್ಡಿನಲ್ಲಿ 3, ಎಂಟನೇ ವಾರ್ಡಿನಲ್ಲಿ 2, ಒಂಬತ್ತನೇ ವಾರ್ಡಿನಲ್ಲಿ 6, ಹತ್ತನೇ ವಾರ್ಡಿನಲ್ಲಿ 3, ಹನ್ನೊಂದನೇ ವಾರ್ಡಿನಲ್ಲಿ 2, ಹದಿನಾಲ್ಕನೇ ವಾರ್ಡಿನಲ್ಲಿ 2, ಹದಿನೆಂಟನೇ ವಾರ್ಡಿನಲ್ಲಿ 2, ಹತ್ತೊಂಬತ್ತನೇ ವಾರ್ಡಿನಲ್ಲಿ 3, ಇಪ್ಪತ್ತನೇ ವಾರ್ಡಿನಲ್ಲಿ 2 ಹೀಗೆ ಒಟ್ಟೂ 35 ಜನರು ಆಯ್ಕೆ ಬಯಸಿ ಸ್ಪರ್ಧೆಯಲ್ಲಿದ್ದಾರೆ.
ವಾರ್ಡ ನಂ. 5, 7, 12, 13, 15, 16, 17ರಲ್ಲಿ ಆಯ್ಕೆಗಾಗಿ ಒಂದೊAದೇ ನಾಮ ಪತ್ರಗಳು ಸಲ್ಲಿಕೆಯಾಗಿದ್ದರಿಂದ ಅವರ ನಾಮ ಪತ್ರ ಕ್ರಮಬದ್ಧವಾಗಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಘೋಷಣೆಯೊಂದೇ ಬಾಕಿ ಇದೆ.
ಜಾಲಿ ಪಟ್ಟಣ ಪಂಚಾಯತನ 13 ವಾರ್ಡುಗಳಲ್ಲಿ ಒಟ್ಟೂ 10,189 (5110 ಪುರುಷರು, 5079 ಮಹಿಳೆಯರು) ಮತದಾರರಿದ್ದಾರೆ. 13 ಮತಗಟ್ಟೆಗಳನ್ನು ಮಾಡಲಾಗಿದ್ದು, ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸರು ಸೇರಿದಂತೆ ಒಟ್ಟೂ 100ಕ್ಕೂ ಅಧಿಕ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ. ಸೆಕ್ಟರ್ ಹಾಗೂ ನೋಡಲ್ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಭಾನುವಾರ ಪಟ್ಟಣದ ಗುರುಸುಧೀಂದ್ರ ಕಾಲೇಜಿನಿಂದ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ರವಿಚಂದ್ರ, ಚುನಾವಣಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ನಾಗರಾಜ ನಾಯ್ಕ ಮತ್ತಿತರರಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ಜಾಲಿ ಪಟ್ಟಣ ಪಂಚಾಯತನ 13 ಮತಗಟ್ಟೆಗಳಲ್ಲಿಯೂ ಬಿಗು ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ.

error: