March 13, 2025

Bhavana Tv

Its Your Channel

ಮುರುಡೇಶ್ವರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಮುರುಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವOತೆ ಮನವಿ

ಭಟ್ಕಳ: ಸಾರಾಯಿ ನಶೆಯಲ್ಲಿದ್ದ ಅಪರಿಚಿತ ವ್ಯಕ್ತಿಯೋರ್ವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ಮೃತ ವ್ಯಕ್ತಿಯು ೪೦-೪೫ ವರ್ಷ ಪ್ರಾಯದವರು ಎಂದು ಅಂದಾಜಿಸಲಾಗಿದ್ದು, ಮುರುಡೇಶ್ವರ ಭದ್ರಾಂಭಿಕೇಶ್ವರ ವಸತಿಗೃಹದ ಹೊರಗೆ ನಿಂತಿದ್ದ ಕಾರಿನ ಕನ್ನಡಿಗೆ ತಾಗಿ ನಿಂತಿರುವಾಗಲೇ ಕುಸಿದು ಬಿದ್ದಿದ್ದಾನೆ. ಮೃತರು ಕನ್ನಡ ಹಾಗೂ ಕೊಂಕಣಿ ಮಿಶ್ರಿತ ಭಾಷೆಯಲ್ಲಿ ಮಾತನಾಡಿಕೊಂಡಿದ್ದು, ತಿಳಿ ಕಂದು ಬಣ್ಣದ ಅರ್ಧ ತೋಳಿನ ಅಂಗಿ, ಕೆಂಪು ಚುಕ್ಕಿ ಇರುವ ನೀಲಿ ಬಣ್ಣದ ಚಡ್ಡಿ ಧರಿಸಿದ್ದಾರೆ. ಮೃತರ ಬಗ್ಗೆ ಮಾಹಿತಿ ಇದ್ದವರು ಕೂಡಲೇ ಮುರುಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: