March 13, 2025

Bhavana Tv

Its Your Channel

ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

ಭಟ್ಕಳ: ಮನೆಗೆ ಬಾಗಿಲು ಹೇಗೆ ಮುಖ್ಯವೊ ದೇಹಕ್ಕೆ ಬಾಯಿ ಅಷ್ಟೆ ಮುಖ್ಯ. ಬಾಯಿಯ ಸ್ವಚ್ಚತೆಯನ್ನು ಕಾಪಾಡಿಕೊಂಡು ಹೋದರೆ ದೇಹಕ್ಕೆ ಬರುವ ಅರ್ಧದಷ್ಟು ಖಾಯಿಲೆಗಳನ್ನು ಗುಣಪಡಿಸದಂತೆ ಎಂದು ಭಟ್ಕಳ ಹಿರಿಯ ದಂತ ವೈದ್ಯ ಡಾ. ಕೀರ್ತಿ ಶೆಟ್ಟಿ ಹೇಳಿದರು.

ಅವರು ಬುಧವಾರ ಭಟ್ಕಳದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕಾಸ್ಪತ್ರೆಯ ಸಹಯೋಗದಲ್ಲಿ ನಡೆದ ಎಲ್ಲರಿಗೂ ಆರೋಗ್ಯ, ಎಲ್ಲಡೆಯೂ ಆರೋಗ್ಯ ಅಭಿಯಾನದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 2ನಿಮಿಷದಲ್ಲಿ ಹಲ್ಲುಜ್ಜಬೇಕು. ಬಾಟಲ್ ಒಪನ್ ಮಾಡಲು, ಹಾಲಿನ ಕೊಟ್ಟೆ ಹರಿಯಲು ನಾವುಗಳು ಹಲ್ಲಿನ ಉಪಯೋಗ ಮಾಡಬಾರದು. ನಮ್ಮ ಒಂದು ತೊಟ್ಟು ಜೊಲ್ಲಿನಲ್ಲಿ 1.5ಕೋಟಿ ಕ್ರಿಮಿಗಳು ಇದ್ದು ಬಾಯಿಯ ಸ್ವಚ್ಚತೆಯ ಕಡೆ ಗಮನಹರಿಸಬೇಕು. 40ವರ್ಷ ದಾಟಿದ ಬಳಿಕ 6ತಿಂಗಳಿಗೊಮ್ಮೆಯಾದರು ದಂತ ವೈದ್ಯರನ್ನು ಭೇಟಿಯಾಗಬೇಕು. ಕ್ಯಾನ್ಸರ್ ಸೆರಿದಂತೆ ಮಾರಕ ರೋಗಗಳನ್ನು ಮೊದಲೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬಹುದು ಎಂದರು.
ಹಿರಿಯ ವೈದ್ಯರಾದ ಡಾ. ಸುರೇಶ ನಾಯಕ, ಡಾ. ಜಹೀರ, ಡಾ. ರವಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಸವಿತಾ ಕಾಮತ ಮಾತನಾಡಿದರು. ದಂತ ಶಿಬಿರದ ನೊಡೆಲ್ ಅಧಿಕಾರಿ ಡಾ. ವನಿತಾ ದೊರೆಸ್ವಾಮಿ, ಭಟ್ಕಳದ ದಂತ ವೈದ್ಯರಾದ ಕಮಲಾ ನಾಯಕ, ದೀಪಾ ಕಾಮತ, ಅನುರಾಧ ನಾಯ್ಕ, ಪರ್ಧಿನ್, ನಮೃತಾ ನಾಯ್ಕ, ಶ್ರುತಿ ನಾಯ್ಕ ಸೇರಿ ಇತರ ದಂತ ವೈದ್ಯರು ಇದ್ದರು. ನೂರಾರು ರೋಗಿಗಳು ಶಿಬಿರದ ಪ್ರಯೋಜನ ಪಡೆದರು. ಆಸ್ಪೆತ್ರೆಯ ಶೂಷ್ರಾಧಿಕಾರಿ ವಿಶ್ವನಾಥ ಪೂಜಾರಿ, ಸುಪ್ರಿತಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

error: