March 12, 2025

Bhavana Tv

Its Your Channel

ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮ ಪಂಚಾಯತ್ ಗ್ರಾಮಸಭೆ

ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮ ಪಂಚಾಯತ್ ಗ್ರಾಮಸಭೆ ಶಿರಕೂರ ಹಿರಿಯ ಪ್ರಾಥಮಿಕ ಶಾಲೆ ಆವಾರದಲ್ಲಿ ಜರುಗಿತು.

ಪ್ರಾರಂಭದಲ್ಲಿ ಧ್ವನಿ ವರ್ಧಕ ಆನ್ ಆಗದೆ ಇದ್ದುದ್ದರಿಂದ ಗದ್ದಲಕ್ಕೆ ಕಾರಣವಾಯಿತು. ೨೦ ನಿಮಿಷಗಳ ಕಾಲ ಧ್ವನಿವರ್ಧ ಸರಿಯಾಗದ್ದರಿಂದ ಸಭೆಯ ಸಮಯ ವ್ಯರ್ಥವಾಯಿತು. ನಾವು ಕೆಪ್ಪರಿದ್ದೇವೆ,ನಮಗೆ ಧ್ವನಿ ಕೆಳುವುದಿಲ್ಲ ಎಂದು ಗ್ರಾಮ ಪಂಚಾಯತದವರನ್ನು ಕಾಲೆಳೆದು,ಮದ್ಯರಾತ್ರಿ ಆದರು ಅಡ್ಡಿಲ್ಲ,ಮೈಕ್ ಆನ್ ಆಗದ ಹೊರತು ಸಭೆ ಮುಂದುವರೆಸಬೇಡಿ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಹೇಳಿ ಕೆಲಕಾಲ ಕೊಲಾಹಲವೇ ಸೃಷ್ಟಿಯಾಯಿತು. ಕೊನೆಗೂ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ವೇದಿಕೆಯಿಂದಿಳಿದು ಮೈಕ್ ಸೆಟ್ ಸರಿ ಮಾಡುವ ಮೂಲಕ ಸಭೆಗೆ ಅಧಿಕೃತ ಚಾಲನೆ ನೀಡುವಂತಾಯಿತು.

ಹೆಸ್ಕಾಂ,ಆರೋಗ್ಯ,ಅರಣ್ಯ ,ಕೃಷಿ,ಕಂದಾಯ,ಪಶು ಪಾಲನಾ ಮತ್ತು ವೈದ್ಯಕೀಯ ಸೇವೆ,ಶಿಶು ಅಭಿವೃದ್ಧಿ ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿರುವ ಸರ್ಕಾರದ ವಿವಿಧ ಜನಪರ ಯೋಜನೆಗಳ ಬಗ್ಗೆ ತಿಳಿಸಿದರು. ಗ್ರಾಮಸ್ಥರು ಕೆಲಕಾಲ ತಾಳ್ಮೆಯಿಂದ ಗ್ರಾಮಸಭೆ ಆಲಿಸಿದರು. ನಂತರ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯತ ಜನಪ್ರತಿನಿಧಿಗಳ,ಪಿಡಿಓಗಳ ತರಾಟೆಗೆ ತೆಗೆದುಕೊಂಡರು.

ಕೃಷಿ ಇಲಾಖೆ ಚರ್ಚೆಯಲ್ಲಿ ತಾಡಪತ್ರೆ ವಿಚಾರ ಚರ್ಚೆಗೆ ಕಾರಣವಾಯಿತು. ಒಮ್ಮೆ ಪಡೆದವರಿಗೆ ಪುನಃ ತಾಡಪತ್ರೆ ಸಿಗುತ್ತಿದೆ ಎಂದು ಆರೋಪಿಸಿದರು. ನಮ್ಮ ಲಿಸ್ಟ್ ನಲ್ಲಿ ಯಾರಿಗು ಒಮ್ಮೆ ಪಡೆದವರಿಗೆ ನೀಡಿಲ್ಲ,ದಾಖಲೆ ಸಮೇತ ನೀಡುತ್ತೇವೆ ಎಂದು ಆರಂಭದಲ್ಲಿ ಹೇಳಿದಾಗ ರೈತರಿಗೆ ನೀಡುದಿಲ್ಲ ಎಂದು ಆರೋಪಿಸಿದರು. ಅದು ಎಮ್ ಎಲ್ ಎಯವರ ಆಯ್ಕೆಯಾಗಿರುತ್ತದೆ ಎಂದು ಅಧಿಕಾರಿಗಳು ಜಾರಿಕೊಂಡರು.

ಆರೋಗ್ಯ ಇಲಾಖೆ ಚರ್ಚೆಯಲ್ಲಿ ಗ್ರಾಮಸ್ಥ ಪ್ರಭುದೇವ ಮಾತನಾಡಿ ಸಂಶಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಸಿಬ್ಬಂದಿಗಳ ಕೊರತೆ ಇದೆ.ಈ ಬಗ್ಗೆ ಡಿಸಿ ಹಾಗೂ ಡಿಎಚ್ ಓ ಅವರಿಗೂ ಮನವಿ ಸಲ್ಲಿಸಿದ್ದೇವೆ.ಇದುವರೆಗೂ ಸ್ಪಂದನೆ ಇಲ್ಲ.ಕೂಡಲೇ ಸಿಬ್ಬಂದಿ ನೇಮಕವಾಗಬೇಕು ಎಂದು ಆಗ್ರಹಿಸಿದರು.

ಹೆಸ್ಕಾಂ ಇಲಾಖೆ ಚರ್ಚೆಯಲ್ಲಿ ಗ್ರಾಮಸ್ಥರು ಮಾತನಾಡಿ ವಿದ್ಯುತ್ ಕಂಬ ಮುರಿದು ಬಿದ್ದರೆ ಕಿಲೋಮೀಟರ್ ಗಟ್ಟಲೆ ನಾವೇ ಕಂಬ ಹೊತ್ತು ಸಾಗಬೇಕು. ಇಲಾಖೆಯವರು ಕಂಬ ತಲುಪಿಸುವ ವ್ಯವಸ್ಥೆ ಮಾಡುವುದಿಲ್ಲ ಎಂದರು. ಅಲ್ಲದೆ ಬೆಳಗಿನಜಾವ ಹೆಚ್ಚಿನ ವಿದ್ಯುತ್ ವ್ಯತ್ಯಯವಾಗುವುದು ಬಹಳ ಸಮಸ್ಯೆ ಉಂಟು ಮಾಡುತ್ತಿದೆ. ವಿದ್ಯುತ್ ಬಿಲ್ ನಲ್ಲಿ ವಿದ್ಯುತ್ ಬಳಕೆಗಿಂತ ಹೆಚ್ಚಿನ ಬಿಲ್ ಬರುತ್ತಿರುವುದು ಏಕೆ?ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಮೊದಲು ಈ ತೆರನಾದ ಸಮಸ್ಯೆ ಆಗುತ್ತಿತ್ತು.ಇತ್ತಿಚಿಗೆ ಮಿಟರ್ ರಿಡಿಂಗ್ ಫೋಟೋ ಸಿಸ್ಟಮ್ ಇರುವುದರಿಂದ ಈ ಸಮಸ್ಯೆ ಕಂಡುಬAದಿಲ್ಲ. ಒಂದೊಮ್ಮೆ ಬಿಲ್ ಮೇಲೆ ದರ ವ್ಯತ್ಯಾಸವಾದಲ್ಲಿ ಇಲಾಖಾ ಕಚೇರಿಗೆ ತಂದು ಸರಿಪಡಿಸಿಕೊಳ್ಳಿ ಎಂದರು.

ಅರಣ್ಯ ಇಲಾಖೆ ಚರ್ಚೆಯಲ್ಲಿ ಗ್ರಾಮದ ರೈತರು ನಮ್ಮ ತೋಟಗಳಿಗೆ ಕಾಡುಪ್ರಾಣಿಗಳು ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ. ಪ್ರಾಣಿಗಳ ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಿ. ಇಲ್ಲವಾದಲ್ಲಿ ನಮಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ಅರಣ್ಯ ಇಲಾಖೆ ಚರ್ಚೆಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಭ್ರಷ್ಟಚಾರ ನಡೆದಿದ್ದು,ಪಿಡಿಒ ಅವರಿಂದಲೇ ಹೆಚ್ಚಿನ ಲೋಪವಾಗಿದೆ. ಈ ಬಗ್ಗೆ ಸಿಇಒ ಅವರಿಗೆ ದೂರು ನೀಡಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಆಗ್ರಹಿಸಿದರು.

ವೇದಿಕೆಯಲ್ಲಿ ನೊಡಲ್ ಅಧಿಕಾರಿ ರಾಘವೇಂದ್ರ,ಗ್ರಾ.ಪAಚಾಯತ ಅಧ್ಯಕ್ಷೆ ಮಂಗಲಾ ನಾಯ್ಕ,ಉಪಾಧ್ಯಕ್ಷ ಅಜಂಖಾನ್,ಸದಸ್ಯರಾದ ಕಾಂಚನಾ ನಾಯ್ಕ,ಮಹಮದ್ ಪೈಜಲ್,ಫಿಲೋಮಿನಾ ಮಿರಾಂದ,ಗAಗೆ ಹಳ್ಳೇರ್, ಸಾವಿತ್ರಿ ಹಳ್ಳೇರ್, ಪಿಡಿಒ ಕಲ್ಲಪ್ಪ ಉಪಸ್ಥಿತರಿದ್ದರು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: