March 12, 2025

Bhavana Tv

Its Your Channel

ಭಟ್ಕಳ ಸರಕಾರಿ ಆಸ್ಪತ್ರೆಯ ನೂತನ ೧೦೮ ಅಂಬುಲೆನ್ಸ್ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ

ಭಟ್ಕಳ: ಭಟ್ಕಳ ಸರಕಾರಿ ಆಸ್ಪತ್ರೆ ಸೇವೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅತ್ಯಾಧುನಿಕ ಸೌಲಭ್ಯವುಳ್ಳ ನೂತನ ೧೦೮ ವಾಹನವನ್ನು ಶಾಸಕ ಸುನೀಲ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಭಟ್ಕಳ ಸರಕಾರಿ ಆಸ್ಪತ್ರೆ ರಾಜ್ಯಕ್ಕೆ ಮಾದರಿಯಾಗಿದೆ. ಮಕ್ಕಳು, ಸ್ತ್ರೀರೋಗ ತಜ್ಞರು ಸೇರಿದಂತೆ ಅಗತ್ಯ ಇರುವ ಎಲ್ಲ ವೈದ್ಯರ ಸೇವೆಗಳೂ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯ ಇದ್ದು, ಆಸ್ಪತ್ರೆಯನ್ನು ಇನ್ನೂ ಎತ್ತರಕ್ಕೆ ಏರಿಸಲು ಪ್ರಯತ್ನ ಮುಂದುವರೆದಿದೆ. ಭಟ್ಕಳದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿವರಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ್ ಮಾತನಾಡಿ, ನೂತನವಾಗಿ ನಿಯೋಜನೆಗೊಂಡಿರುವ ೧೦೮ ವಾಹನದಲ್ಲಿ ಕಾರ್ಡಿಯೇಕ್ ಮೊನಿಟರ್, ವೆಂಟಿಲೇಟರ್, ಆಮ್ಲಜನಕ ಪೂರೈಕೆ ಸೌಲಭ್ಯವನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಈ ವಾಹನದಿಂದ ಹೆಚ್ಚಿನ ನೆರವು ಸಿಗಲಿದೆ ಎಂದು ವಿವರಿಸಿದರು. ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ, ದಿನೇಶ ನಾಯ್ಕ, ರಾಜೇಶ ನಾಯ್ಕ, ಯುವಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ರಾಮಚಂದ್ರ ನಾಯ್ಕ ಬೆಂಗ್ರೆ, ಮಂಜುನಾಥ ನಾಯ್ಕ ಶಿರಾಲಿ, ಸಂತೋಷ ನಾಯ್ಕ, ಪಾಂಡು ನಾಯ್ಕ ಆಸರಕೇರಿ ಮೊದಲಾದವರು ಉಪಸ್ಥಿತರಿದ್ದರು.

error: