March 12, 2025

Bhavana Tv

Its Your Channel

ದೇಶದ ಯುವಶಕ್ತಿ ವಾಕ್ಸಿನ್ ಕುರಿತು ಪ್ರಚಾರ ಮಾಡಬೇಕು – ಶಾಸಕ ಸುನೀಲ ನಾಯ್ಕ

ಭಟ್ಕಳ: ದೇಶದ ಯುವಶಕ್ತಿಗಳು ವಾಕ್ಸಿನ್ ಬಗ್ಗೆ ಎಲ್ಲೆಡೆ ಸಮರ್ಪಕವಾದ ಮಾಹಿತಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ಅವರು ಸೋಮವಾರದಂದು ಜಿಲ್ಲಾಢಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಇವರ ವತಿಯಿಂದ ಇಲ್ಲಿನ ದಿ ನ್ಯು ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನಲ್ಲಿ ೧೫-೧೮ ವರ್ಷದ ವಯಸ್ಸಿನವರಿಗೆ ಬ್ರಹತ್ ಕೋರೋನಾ ಲಸಿಕೆ ಅಭಿಯಾನ ಕಾರ್ಯಕ್ರಮ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

‘ದೇಶದಲ್ಲಿಯೇ ಇದು ಮಹತ್ವಪೂರ್ಣ ಕಾರ್ಯಕ್ರಮ ಆಗಿದ್ದು, ವಾಕ್ಸಿನ್ ಪಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯದ ಜೊತೆಗೆ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿ ವಾಕ್ಸಿನ್ ಪಡೆದುಕೊಳ್ಳುವುದು ಬಹುಮುಖ್ಯವಾಗಿದೆ. ಹಾಗೂ ಎಲ್ಲರ ಜವಾಬ್ದಾರಿ ಸಹ ಆಗಿದೆ ಎಂದ ಅವರು ಕೋವಿಡ್ ಜಗತ್ತನ್ನೇ ಜನರ ಜೀವನ ಸ್ಥಿತಿಯನ್ನೇ ಬದಲಾಯಿಸಿದೆ. ಆದರೆ ನಮ್ಮ ದೇಶದಲ್ಲಿ ಒಂದು ವರ್ಷದೊಳಗೆ ಕೋವಿಡ್ ನಿಯಂತ್ರಣಕ್ಕೆ ವಾಕ್ಸಿನ್ ಕಂಡು ಹಿಡಿದಿದ್ದಾರೆ. ಇದರ ಪರಿಣಾಮವಾಗಿ ನಮ್ಮ ದೇಶದಲ್ಲಿ ವಾಕ್ಸಿನ್ ಮೇಳ ವೇಗ ಪಡೆದುಕೊಂಡಿದೆ ಎಂದರು.

ಮಕ್ಕಳಲ್ಲಿ ಕೋವಿಡ್ ಪ್ರಮಾಣದ ಕಡಿಮೆಯಿದ್ದು, ಅವರಲ್ಲಿನ ಇಮ್ಯುನಿಟಿ ಪ್ರಮಾಣ ಹೆಚ್ಚಿರುವದ ಪರಿಣಾಮವಾಗಿ ಮಕ್ಕಳು ಕೋವಿಡ ಅಪಾಯಕಾರಿಯಿಂದ ತಪ್ಪಿದಂತಾಗಿದೆ. ಈ ನಿಟ್ಟಿನಲ್ಲಿ ಇಂದಿನ ಮಕ್ಕಳು ಕಾಲೇಜು ವಿದ್ಯಾರ್ಥಿಗಳು ವಾಕ್ಸಿನ್ ಬಗ್ಗೆ ಮನೆಯ ಹಿರಿಯರಿಗೆ, ಜನರಿಗೆ ವಾಕ್ಸಿನ್ ಪಡೆದುಕೊಳ್ಳುವ ಮಹತ್ವದ ಪ್ರಚಾರ ಮಾಡಬೇಕು. ಈಗಾಗಲೇ ಶೇ. ೮೦ ರಷ್ಟು ವಾಕ್ಸಿನ್ ತಾಲೂಕಿನಲ್ಲಿ ವಿತರಿಸಿದ್ದೇವೆ. ಆದರೆ ಕೆಲವರು ಸಾರ್ವಜನಿಕವಾಗಿ ವಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ನೀಡಿ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಇದನ್ನು ಇಂದಿನ ಯುವ ಶಕ್ತಿ ದೇಶ ಎದುರಿಸುತ್ತಿರುವ ಕೋವಿಡ್, ರೂಪಾಂತರ ತಳಿ ವಿರುದ್ದ ಹೋರಾಡಲು ಸಜ್ಜಾಗಬೇಕು ಎಂದ ಅವರು ಇನ್ನು ಸಹ ವಾಕ್ಸಿನ್ ಪಡೆಯದವರಿಗೆ ಕೋವಿಡ್ ಮರುಕಳಿಸಿದೆ. ಹೆಚ್ಚಿನ ಮುತುವರ್ಜಿ ವಹಿಸಿ
ದೇಶದ ಪ್ರಧಾನಿ ಮೋದಿ ಅವರು ಸಾಕಷ್ಟು ಪರಿಶ್ರಮದಿಂದ ವಾಕ್ಸಿನ್ ವಿತರಣೆಗೆ ಪ್ರಯತ್ನ ಪಡುತ್ತಿದ್ದು ಅದಕ್ಕೆ ನಮ್ಮೆಲ್ಲರ ಸಹಕಾರ ಇರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ರ ಸಹಾಯಕ ಆಯುಕ್ತೆ ಮಮತಾದೇವಿ ಜಿ. ಎಸ್. ಮಾತನಾಡಿ ‘ಸರಕಾರದ ಯೋಜನೆಯನ್ನು ಪಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಲಸಿಕಾ ಮೇಳವನ್ನು ಪ್ರಗತಿಪಥದಲ್ಲಿ ನಡೆಯುವತ್ತ ಭಟ್ಕಳ ತಾಲೂಕಾಢಳಿತ, ಆರೋಗ್ಯ ಇಲಾಖೆಯೊಂದಿಗೆ ಉಳಿದ ಇಲಾಖೆ ಸಹಕಾರದಿಂದ ಬಹುತೇಕವಾಗಿ ವಾಕ್ಸಿನ್ ವಿತರಿಸುವಲ್ಲಿ ಯಶಸ್ವಿಯಾಗಿದ್ದೇವೆ ಆದರೆ ಇಲಾಖೆಯ ಶ್ರಮಕ್ಕೆ ತಕ್ಕಂತೆ ವಾಕ್ಸಿನ್ ಪಡೆದುಕೊಳ್ಳುವುದರಲ್ಲಿ ಜನರು ಮುಂದೆ ಬರುತ್ತಿಲ್ಲವಾಗಿದ್ದು ಎಂಬ ಅಸಮಾಧಾನ ವ್ಯಕ್ತಪಡಿಸಿದ ಅವರು ಪ್ರಮುಖವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೂರ್ವಾಗ್ರಹ ಪೀಡಿತದಂತೆ ಸುದ್ದಿಗಳು ಬರುತ್ತಲಿವೆ ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಬೇಡಿ. ಅವುಗಳು ಸತ್ಯವಾಗಿರುವುದಿಲ್ಲ ಎಂದರು.

ಮಕ್ಕಳು ಪಾಲಕರಿಗೆ ವಾಕ್ಸಿನ್ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಬೇಕು. ವಾಕ್ಸಿನ್ ಪಡೆದು ಹಾನಿಯಾಗಿರುವ ಉದಾಹರಣೆ ಎಲ್ಲಿಯೂ ಸಹ ಇಲ್ಲ ಮತ್ತು ಕೆಲವು ಅಡ್ಡ ಪರಿಣಾಮಗಳನ್ನು ಎದುರಿಸಬೇಕೆಂಬ ಭಯವನ್ನು ಯಾರು ಇಟ್ಟುಕೊಳ್ಳುವುದು ಬೇಡ ಎಂದ ಅವರು ಈಗಾಗಲೇ ಕೋವಿಡ್ ನ ರೂಪಾಂತರ ವೈರಸ್ ಬಗ್ಗೆ ಭಯ ಬೇಡ ಕಾಳಜಿ, ಜಾಗ್ರತಿ ಅವಶ್ಯಕವಾಗಿದೆ. ವಾಕ್ಸಿನ್ ಬಗ್ಗೆ ಸಮಾಜದಲ್ಲಿ ಮೆಸೆಂಜರ್ ರೀತಿ ವಿಧ್ಯಾರ್ಥಿಗಳು ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ದ ಡಾ. ಸುರೇಶ ನಾಯಕ ಮಾತನಾಡಿ ‘ಕಾಲೇಜು ವಿದ್ಯಾರ್ಥಿಗಳಿಗೆ ವಾಕ್ಸಿನ್ ವಿತರಣೆ ಈ ಮೊದಲೇ ಆಗಬೇಕಿತ್ತು. ಕಾರಣ ದೇಶದ ಆಸ್ತಿ ಯುವ ಶಕ್ತಿಯಾಗಿದೆ. ಈಗ ಪ್ರತಿಯೊಂದು ಕಾಲೇಜಿನಲ್ಲಿ ವಾಕ್ಸಿನ್ ವಿತರಿಸುತ್ತಿರುವುದು ಉತ್ತಮ ಮಾರ್ಗವಾಗಿದೆ. ಒಂದು ವೇಳೆ ವಾಕ್ಸಿನ್ ತೆಗೆದುಕೊಳ್ಳದ್ದಿದ್ದರೆ ಪುನಃ ವಿದ್ಯಾರ್ಥಿಗಳ ಶಿಕ್ಷಣ ಹಿಂದೆ ಹೋಗಲಿದೆ ಹಾಗೂ ದೇಶ ಸ್ತಬ್ದ ವಾಗಲಿದೆ. ಆದ್ದರಿಂದ ಕಡ್ಡಾಯವಾಗಿ ಎಲ್ಲರು ವಾಕ್ಸಿನ್ ಪಡೆದುಕೊಳ್ಳಬೇಕು ಎಂದರು.

ಇದಕ್ಕೂ ಪೂರ್ವದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿ ಕೋವಿಡ್ ಶೀಲ್ಡ ಮತ್ತು ಕೋವಾಕ್ಸಿನ್ ನಡುವಿನ ವ್ಯತ್ಯಾಸ ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀ ಗುರು ಸುಧೀಂದ್ರ ಪಿಯು ಕಾಲೇಜು ಪ್ರಾಂಶುಪಾಲ ವಿರೇಂದ್ರ ಶ್ಯಾನಭಾಗ ಉಪಸ್ಥಿತರಿದ್ದು ಗಣ್ಯರನ್ನು ವಂದಿಸಿದರು. ನoತರ ೧೫ ರಿಂದ ೧೮ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳಿಗೆ ವಾಕ್ಸಿನ್ ನೀಡಲಾಯಿತು.

error: