March 12, 2025

Bhavana Tv

Its Your Channel

ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ನಟ ದಿಗಂತ

ಭಟ್ಕಳ : ಸ್ಯಾಂಡಲವುಡ್ ತಾರೆ ದಿಗಂತ ಆಳಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡ ಮೂಲಕ ಗಮನ ಸೆಳೆದಿದ್ದಾರೆ.

ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ ನಡೆಸುವ ನೇತ್ರಾಣಿ ದ್ವೀಪ ಸಮೀಪ ೧೮ ಅಡಿ ಆಳ ಸಮುದ್ರದಲ್ಲಿ ದಿಗಂತ ಸ್ಕೂಬಾ ಡೈವಿಂಗ್ ಮಾಡಿ ಅಪರೂಪದ ಮೀನುಗಳನ್ನ ಕಂಡು ಖುಷಿ ಪಟ್ಡಿದ್ದಾರೆ.

ನೇತ್ರಾಣಿ ಅಡ್ವೆಂಚರ್‌ನ ಅನೀಶ್ ಅವರ ಸಹಕಾರದಲ್ಲಿ ಎರಡು ಬಾರೀ ಡೈವ್ ಮಾಡಿದ ದಿಗಂತ ಮೊದಲ ಡೈವ್ನಲ್ಲಿ ೪೮ ನಿಮಿಷ ಮತ್ತು ಎರಡನೇ ಡೈವ್ನಲ್ಲಿ ೫೩ ನಿಮಿಷಗಳ ಕಾಲ ಸಮುದ್ರದೊಳಗೆ ಮೀನಿನಂತೆ ಈಜಿದ್ದಾರೆ. ಅಲ್ಲದೇ ಅಪರೂಪದ ಜೀವ ವೈವಿಧ್ಯಗಳನ್ನ ಕಂಡು ಪುಳಕಿತರಾಗಿದ್ದಾರೆ.

ನೇತ್ರಾಣಿ ದ್ವೀಪ ಪ್ರದೇಶದಲ್ಲಿ ಈ ಹಿಂದೆ ಪವರ್ ಸ್ಟಾರ್ ಪುನೀತರಾಜಕುಮಾರ, ಮುಂಗಾರು ಮಳೆಯ ಗಣೇಶ್ ಸ್ಕೂಬಾ ಡೈವ್ ಮಾಡಿದ್ದರು. ಇದೀಗ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ಚಿತ್ರನಟರ ಸಾಲಿಗೆ ದಿಗಂತ ಸೇರ್ಪಡೆಯಾಗಿದ್ದಾರೆ.

error: