
ಭಟ್ಕಳ ಪಟ್ಟಣದ ಡಾ. ಚಿತ್ತರಂಜನ್ ಸರ್ಕಲ್‌ನಲ್ಲಿ ಹಾಗೂ ಮೂಡಭಟ್ಕಳಕ್ಕೆ ಸಂಪರ್ಕ ಕಲ್ಪಿಸಲು ಅಂಡರ್ ಪಾಸ್ ನಿರ್ಮಾಣ ಮಾಡಿಕೊಡಬೇಕು ಎಂದು ನಾಗರೀಕರು ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಭಟ್ಕಳ ನಗರದ ಚೋಳೇಶ್ವರ ದೇವಸ್ಥಾನ, ಹೆಣ್ಣು ಮಕ್ಕಳ ಶಾಲೆ, ಗಂಡು ಮಕ್ಕಳ ಶಾಲೆ, ಹನುಮಂತ ದೇವಸ್ಥಾನ ಅಲ್ಲದೇ ಪೇಟೆಗೆ ಬರುವುದಕ್ಕೆ ಇದೊಂದೇ ದಾರಿಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಅಂಡರ್ ಪಾಸ್ ನಿರ್ಮಾಣ ಮಾಡಿಕೊಡುವಂತೆ ಕೋರಿದ್ದರೂ ಸಹ ಇನ್ನೂ ತನಕ ನಮ್ಮ ಮನವಿಗೆ ಯಾವುದೇ ಸ್ಪಂದನೆ ನೀಡಿಲ್ಲ. ಒಂದು ವೇಳೆ ಅಂಡರ್ ಪಾಸ್ ನೀಡದೇ ಇದ್ದಲ್ಲಿ ದಿನ ನಿತ್ಯ ಸಾವಿರಾರು ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಇಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿಕೊಡುವಂತೆ ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಐ ಆರ್ ಬಿ ಅಧಿಕಾರಿಗಳಿಗೆ ಹೇಳಬೇಕು ಎಂದು ನಾಗರೀಕರು ಪಟ್ಟು ಹಿಡಿದರು. ಇದಕ್ಕುತ್ತರಿಸಿದ ಸಂಸದ ಅನಂತಕುಮಾರ್ ಹೆಗಡೆ ಸಮಸ್ಯೆಯ ಗಂಭೀರತೆಯ ಅರಿವಿದೆ. ಹೆದ್ದಾರಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳೂ ಹಾಗೂ ಐ.ಆರ್.ಬಿ. ಅಧಿಕಾರಿಗಳ ಸಭೆಯೊಂದನ್ನು ಕರೆದು ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿ ಅಂಡರ್ ಪಾಸ್ ನಿರ್ಮಾಣ ಮಾಡಿಕೊಡಲು ಪ್ರಯತ್ನಿಸುವುದಾಗಿ ಭರವಸೆಯನ್ನು ನೀಡಿದರು.
ರೈಲ್ವೇ ವಿಸ್ತರಣೆಗೆ ಮನವಿ:
ಯಶವಂತಪುರದಿAದ ಮಂಗಳೂರಿಗೆ ದಿನದ ಎಕ್ಸ್ಪ್ರೆಸ್ ರೈಲು ಓಡುತ್ತಿದ್ದು ಅದನ್ನು ಕಾರವಾರದ ತನಕ ವಿಸ್ತರಿಸಲು ಸೂಚನೆ ನೀಡುವಂತೆ ಇದೇ ಸಂದರ್ಭದಲ್ಲಿ ಸಂಸದರನ್ನು ಕೋರಲಾಯಿತು. ತಕ್ಷಣ ಕೊಂಕಣ ರೈಲ್ವೆ ಆಡಳಿತ ನಿರ್ದೇಶಕರನ್ನು ದೂರವಾಣಿಯಲ್ಲಿ ಸಂಪರ್ಕ ಮಾಡಿದ ಸಂಸದರು ಯಶ್ವಂತಪುರ-ಮAಗಳೂರು ನಂ.೧೬೫೭೫/೧೬೫೭೬ ವಾರದಲ್ಲಿ ನಾಲ್ಕು ದಿನ ಓಡುತ್ತಿದ್ದು ಅದನ್ನು ಕಾರವಾರದ ತನಕ ವಿಸ್ತರಿಸಿದರೆ ಜಿಲ್ಲೆಯ ಜನರಿಗೆ ಅನುಕೂಲವಾಗುವುದು ಎಂದರು ಹೇಳಿದರು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಆಡಳಿತ ನಿರ್ದೇಶಕರು ಕೋವಿಡ್ ಇರುವುದರಿಂದ ಆದಾಯ ಕಡಿಮೆ ಇದೆ, ಕೊವಿಡ್ ನಿಯಮಾವಳಿಗಳು ಸಡಿಲಿಕೆಯಾದ ನಂತರ ಈ ಕುರಿತು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ನರೇಂದ್ರ ನಾಯಕ, ವೆಂಕಟೇಶ ನಾಯ್ಡ ಮುಟ್ಟಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶೇಷಗಿರಿ ನಾಯ್ಕ, ಶಂಕರ ಶೆಟ್ಟಿ, ಶ್ರೀಕಾಂತ ನಾಯ್ಕ, ವಾಮನ ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ