March 12, 2025

Bhavana Tv

Its Your Channel

ಜೇನುಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

ಭಟ್ಕಳ : ಕೃಷಿಯೊಂದಿಗೆ ಜೇನು ಸಾಕಾಣಿಕೆ ಮತ್ತು ಮೌಲ್ಯವರ್ಧಿತ ಕೃಷಿಯು ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ಜೇವನಾಧಾರವಾಗಿದೆ. ಸಣ್ಣ ಭೂಮಿಯಲ್ಲೇ ಉತ್ತಮ ಬೆಳೆ ಬೆಳೆಯಲು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ತಜ್ಞ ಗಣಪತಿ ಭಟ್ ಎಲೆಮಾಳ ತಿಳಿಸಿದರು.

ಅವರು ಸರಕಾರಿ ಪ್ರೌಢಶಾಲೆ ಕುಂಟವಾಣಿಯಲ್ಲಿ ಜಗದೀಶ್ ಚಂದ್ರ ಬೋಸ್ ಇಕೋ ಕ್ಲಬ್ ಮತ್ತು ಸರ್ ಸಿ. ವಿ. ರಾಮನ್ ವಿಜ್ಞಾನ ಸಂಘ ಇವುಗಳ ಆಶ್ರಯದಲ್ಲಿ ನಡೆದ ಜೇನುಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಈ ವಿಷಯ ತಿಳಿಸಿದರು. ಹಾಗೆಯೇ ಜೇನು ಸಾಕಾಣಿಕೆಯ ವಿವಿಧ ಹಂತಗಳನ್ನು ಮತ್ತು ಜೇನುಗೂಡಿನ ವಿಭಾಗಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ಮುಖ್ಯೋಪಾಧ್ಯಾಯರಾದ ಡಾ. ಸುರೇಶ ತಾಂಡೇಲ ಸ್ವಾಗತಿಸಿ, ಶಿಕ್ಷಕಿ ವಿಮಲಾ ಮೊಗೇರ ವಂದಿಸಿದರು. ಇಕೋ ಕ್ಲಬ್ ಹಾಗೂ ವಿಜ್ಞಾನ ಸಂಘದ ಸಂಚಾಲಕರಾದ ಶಶಿಕಲಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

error: