
ಭಟ್ಕಳ: ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ತಹಶೀಲ್ದಾರಾದ ಪ್ರದೀಪ ಹಿರೇಮಠ ಇವರ ಮೇಲೆ ಕೆಲಸದ ಸಮಯದಲ್ಲಿ ಹಲ್ಲೆ ಮಾಡಿದ್ದು ಖಂಡಿಸಿ ,ಹಲ್ಲೆಕೊರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳ ತಾಲೂಕಿನ ನೌಕರರ. ವತಿಯಿಂದ ಭಟ್ಕಳ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ಸಂಘದ ಅಧ್ಯಕ್ಷ ಮೋಹನ್ ನಾಯ್ಕ ಮಾತನಾಡಿ ಕರ್ತವ್ಯದ ಮೇಲಿರುವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನಾರ್ಹ ಇದನ್ನು ನಾವು ಖಂಡಿಸುತ್ತಿದೆವೆ ಈ ಘಟನೆ ಸರಕಾರಿ ನೌಕರರ ಮನೊಬಲವನ್ನು ಕುಗ್ಗಿಸುತ್ತದೆ ಆದ್ದರಿಂದ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗ ಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಟ್ಕಳ ತಾಲೂಕ ಸರಕಾರಿ ನೌಕರರ ಸಂಘದ ಪ್ರಕಾಶ್ ಶಿರಾಲಿ, ಗಣೇಶ, ಸುನೀಲ್ ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ