
ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ಮಾವಳ್ಳಿ- ೧, ೨ ಹಾಗೂ ಕಾಯ್ಕಿಣಿ ಗ್ರಾಮ ಪ೦ಚಾಯತಿ ವ್ಯಾಪ್ತಿಯ ಬಹುಬೇಡಿಕೆಯ ರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.
ತಾಲೂಕಿನ ಮಾವಳ್ಳಿ- ೨ ಪಂಚಾಯತದ ಪೆಟ್ರೋಲ್ ಬಂಕ್ ಎದುರುಗಡೆಯಿ೦ದ ತುಕಾರಾಮ್ ಮನೆಯವರೆಗೆ ೧೫ ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಗುಮ್ಮನಹಣ್ಣು ಆರ್. ಎನ್.ಶೆಟ್ಟಿಯವರ ಜಾಗದಿಂದ ವಸಂತ ನಾಯ್ಕ ಮನೆಯವರೆಗೆ ೧೦ ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಗುಮ್ಮನಹಕ್ಲುವಿನಲ್ಲಿ ಕೆಲ ತಿಂಗಳ ಹಿಂದೆ ೨೪ ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದು, ಈಗ ಈ ಟ್ಯಾಂಕ್‌ನಿAದ ೧೦೩ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ- ಯ ಪೈಪ್‌ಲೈನ್ ಮತ್ತು ನಳ ಅಳವಡಿಕೆಗೆ ೧೪ ಲಕ್ಷ ರೂಪಾಯಿ ಅನುದಾನವನ್ನು ಒದಗಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಕಾಯ್ಕಿಣಿ ಪ೦ಚಾಯತ್ ನಿರ್ಮಾಣಕ್ಕೆ ಸುನೀಲ ನಾಯ್ಕ ದುರ್ಗಾಂಬ ದೇವಸ್ಥಾನದಿಂದ ಕುಂಬಾರಕೇರಿಯವರೆಗೆ ೧೫ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ, ಮಾವಳ್ಳಿ- ೧ ಪಂಚಾಯತದ ಕೊನಾರಕೇರಿ- ಹಡಾಳ ರಸ್ತೆ ಭಾಗದಲ್ಲಿ ೨೦ ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ, ಮಾವಳ್ಳಿ- ೨ ಗ್ರಾಮದ ಹಡಾಳ ಗೊಂಡರ ಕೇರಿಯಲ್ಲಿ ೨೫ ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ನಿರ್ಮಾಣ, ಕಾಯ್ಕಿಣಿ ಪಂಚಾಯತ್ ಕೋಟದಮಕ್ಕಿ ಪಿತ್ರಾಕ್ಷ ಆಚಾರಿ ಮನೆಯವರೆಗೆ ೧೦ ಲಕ್ಷ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಸುನೀಲ್ ನಾಯ್ಕ ಚಾಲನೆ ನೀಡಿದರು.
ಇನ್ನು ತಾಲೂಕಿನ ಕಾಯ್ಕಿಣಿ ಪಂಚಾಯತ್ ಮಡಕೇರಿ ರಸ್ತೆ ಮತ್ತು ಕಿರು ಸೇತುವೆ ನಿರ್ಮಾಣಕ್ಕೆ ೩೫ ಲಕ್ಷ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಕಳೆದ ವರ್ಷ ಈ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಊರಿನವರಿಗೆ ನೀಡಿದ ಭರವಸೆಯಂತೆ ಸೇತುವೆ ನಿರ್ಮಾಣಕ್ಕೆ ಸುನೀಲ್ ನಾಯ್ಕ ಚಾಲನೆ ನೀಡಿದ್ದಾರೆ.
ಒಟ್ಟು ೬ ಕಡೆಗಳಲ್ಲಿನ ಬಹುಬೇಡಿಕೆಯ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕರನ್ನು ಆಯಾ ಗ್ರಾಮಸ್ಥರು ಕಾಮಗಾರಿ ಸ್ಥಳದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ ಮಾತನಾಡಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಜನರ ಬೇಡಿಕೆ ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮೂಲಭೂತ ಸೌಲಭ್ಯಗಳಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಪೂ ರೈಕೆಗೆ ಹೆಚ್ಚಿನ ಪ್ರಾಶಸ್ಯ ನೀಡುತ್ತಿದ್ದೇನೆ ಎಂದು ಶಾಸಕ ಸುನೀಲ ನಾಯ್ಕ ಹೇಳಕದರು.
ಈಗಾಗಲೇ ಭಟ್ಕಳ-ಹೊನ್ನಾವರ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದಾಗಿ ಗ್ರಾಮೀಣ ಭಾಗಕ್ಕೆ ಪಿಡಬ್ಲೂಡಿ ಹಾಗೂ ಪಿಆರ್‌ಇಡಿ ಇಲಾಖೆಯಡಿಯಲ್ಲಿ ರಸ್ತೆ ಕಾಮಗಾರಿಗಳನ್ನು ಮಂಜೂಲಿಸಿದ್ದಾರೆ. ಸದ್ಯ ಅಡುಗಡೆಯಾದ ಎಲ್ಲಾ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ ಜನರ ಓಡಾಟಕೆ ನೀಡಲಿದ್ದೇವೆ. ಇನ್ನುಮುಂದೆಯು ಸಹ ಕ್ಷೇತ್ರದಲ್ಲಿ ಯಾವುದೇ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಅವಶ್ಯವಿದ್ದಲ್ಲಿ ಮನವಿ ನೀಡಿದ್ದಲ್ಲಿ ಸ್ಪಂದಿಸುವ ಕೆಲಸ ಮಾಡುತೆದ್ದೇನೆ ಎಂದರು.
ಮಾವಳ್ಳಿ- ೨ ಪಂಚಾಯತಿ ಅಧ್ಯಕ್ಷ ಮಹೇಶ ನಾಯ್ಕ, ಪಂಚಾಯತ್ ಸದಸ್ಯ ಕಿರಣ ನಾಯ್ಕ,ನಾಯ್ಕ, ಕೃಷ್ಣ ನಾಯ್ಕ ಜಮೀನ್ದಾರ್, ಕಾಯ್ಕಿಣಿ, ಪಂಚಾಯತಿ ಸದಸ್ಯ ಶಬರೀಶ ನಾಯ್ಕ, ಹಿರಿಯ ಬಿಜೆಪಿ ಮುಖಂಡ ಸುಬ್ರಾಯ ನಾಯ್ಕ ತರ್ನಮಕ್ಕಿ, ರಾಮ ನಾಯ್ಕ ಚೌಥನಿ, ಗುತ್ತಿಗೆದಾರರ ಸಂತೋಷ ನಾಯ್ಕ ಮಾವಳ್ಳಿ ಮುಂತಾದವರು ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ