
ಭಟ್ಕಳ: ಭಾನುವಾರ ಅಪರಾಹ್ನ ಸುಮಾರು 04-30 ಗಂಟೆಗೆ ಸಿಎಸ್ಪಿ ಭಟ್ಕಳ ಠಾಣಾ ವ್ಯಾಪ್ತಿಯ ಅಳ್ವೆಕೋಡಿ ಜಟ್ಟಿಯ ಠಾಣಾ ಬೋಟ್ ನಿಲುಗಡೆ ಸ್ಥಳದ ಹತ್ತಿರವಿರುವ ವಿದ್ಯುತ್ ಕಂಬದ ಸ್ವಿಚ್ ಬೋರ್ಡ್ ಬಾಕ್ಸ್ (Switch Board Box) ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದಾಗ, ಸ್ಥಳದಲ್ಲಿ ಹಾಜರಿದ್ದ ಬೋಟ ಗಾರ್ಡ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯವರಾದ ಶ್ರೀ ಕೃಷ್ಣ ತಾಂಡೇಲ್ ರವರು ಬೋಟನಲ್ಲಿದ್ದ CO2 Fire Extinguisher ಉಪಯೋಗಿಸಿ ಬೆಂಕಿಯನ್ನು ನಂದಿಸಿರುತ್ತಾರೆ. ಸ್ಥಳೀಯ ಮೀನುಗಾರರು ಸದ್ರಿ ಸಿಬ್ಬಂದಿಯವರ ಕಾರ್ಯವನ್ನು ಅಭಿನಂದಿಸಿರುತ್ತಾರೆ. ಸಿಎಸ್ಪಿ ಭಟ್ಕಳ ಠಾಣಾ ಪೊಲೀಸ್ ನೀರಿಕ್ಷಕರಾದ ಕೃಷ್ಣಾನಂದ ಜಿ. ನಾಯ್ಕ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಸಿಎಸ್ಪಿ ಉಡುಪಿರವರಾದ ಅಂಶು ಕುಮಾರ್ ಐ.ಪಿ.ಎಸ್ ರವರು ಸದ್ರಿ ಸಿಬ್ಬಂದಿಯವರ ಕಾರ್ಯ ಕ್ಷಮತೆಯನ್ನು ಪ್ರಶಂಸಿಸುತ್ತಾರೆ


More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ