
ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ಶ್ರೀದೇವರ ಪಾಲಕಿ ಉತ್ಸವದ ಮೆರವಣಿಗೆ ನಗರದಾಧ್ಯಂತ ಸಂಚರಿಸಿ ಸಾವಿರಾರು ಭಕ್ತ ಸಮೂಹ ಭಕ್ತಿ ಪರವಶತೆಯಲ್ಲಿ ತೆಲುವಂತೆ ಮಾಡಿತು. ಈ ಪಾಲಕಿ ಮಹೋತ್ಸವಕ್ಕೆ ಶಾಸಕ ಸುನೀಲ ನಾಯ್ಕ ಸೇರಿದಂತೆ ನಾಮಧಾರಿ ಸಮಾಜದ ಅಧಿಕ ಬಂಧುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಶ್ರೀ ದೇವರಿಗೆ ತುಲಾಭಾರ ಸಮರ್ಪಣೆಗಳು ನಡೆದವು. ನಂತರ ಸಂಜೆ 4 ಗಂಟೆಯಿAದ ವೆಂಕಟೇಶ್ವರ ದೇವರ ಪಾಲಕಿಯೂ ಸಹಸ್ರಕ್ಕೂ ಅಧಿಕ ಭಕ್ತರ ಜಯಘೋಷದಲ್ಲಿ ನಗರದಾದ್ಯಂತ ಸಂಚರಿಸಿದ್ದು ಮಧ್ಯರಾತ್ರಿ 1 ಗಂಟೆಯ ತನಕ ಈ ಉತ್ಸವ ನಡೆದಿದೆ.
ದೇವಸ್ಥಾನದಿಂದ ಆರಂಭಗೊಳ್ಳುವ ಪಾಲಕಿ ಉತ್ಸವವೂ ಸೋನಾರಕೇರಿ, ನಗರ ಪೊಲೀಸ ಠಾಣಾ ಮಾರ್ಗವಾಗಿ ಹಳೆ ಬಸ್ ನಿಲ್ದಾಣದಿಂದ ತೆರಳಿ ಮಾರಿಗುಡಿ ದೇವಸ್ಥಾನದಿಂದ ಚೌಥನಿಯ ಕಾಳಿಕಾಂಬಾ ದೇವಸ್ಥಾನ ಸಮೀಪದ ಕಟ್ಟೆಯ ತನಕ ತೆರಳಿ ಅಲ್ಲಿ ಭಕ್ತರಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಅದೇ ಮಾರ್ಗವಾಗಿ ಮುಂಡಳ್ಳಿಯ ಕುದುರೆ ಬೀರಪ್ಪ ದೇವಸ್ಥಾನದಲ್ಲಿಯೂ ಪೂಜೆಯನ್ನು ಸಲ್ಲಿಸಲಿರುವ ಭಕ್ತರು ಪಾಲಕಿ ರಘುನಾಥ ರಸ್ತೆಯ ಮೂಲಕ ಮಣ್ಕುಳಿಗೆ ಬಂದು ಮಣ್ಕುಳಿಯಲ್ಲಿನ ಭಕ್ತರು ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ವಾಪಸ್ಸು ಬಂದು ಪದ್ಮಾವತಿ ದೇವಸ್ಥಾನಕ್ಕೆ ತೆರಳಿ. ಇಲ್ಲಿಯೂ ಪೂಜೆ ಪುನಸ್ಕಾರವನ್ನು ಸಲ್ಲಿಸಿ ಕಳಿ ಹನುಮಂತ ದೇವಸ್ಥಾನ ಮಾರ್ಗವಾಗಿ ರಾತ್ರಿ 1 ಗಂಟೆ ಸುಮಾರಿಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತೆರಳಿತು.

ಪಾಲಕಿ ತೆರಳುವ ಮಾರ್ಗ ಮಧ್ಯದಲ್ಲಿ ಚನ್ನಪಟ್ಟಣ ಹನುಮಂತ ದೇವಸ್ಥಾನದ ಸಮೀಪ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು ಬಳಿಕ ಕರಿಕಲ್ ಧ್ಯಾನ ಮಂದಿರಕ್ಕೆ ತೆರಳಿ ಶ್ರೀ ರಾಮಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಯವರ ಆಶೀರ್ವಾದ ಪಡೆದುಕೊಂಡು ಕಾರವಾರಕ್ಕೆ ತೆರಳಿದರು

ಪಾಲಕಿ ಉತ್ಸವದ ಬಳಿಕ ರಾತ್ರಿ ಮಹಾ ಮಂಗಳಾರತಿ, ಹಾಗೂ ತೀರ್ಥ ಪ್ರಸಾದದೊಂದಿಗೆಪಾಲಕಿಮಹೋತ್ಸವ ಮುಕ್ತಾಯ ಗೊಂಡಿತು
ಈ ಪಾಲಕಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯವರು ಹಾಗೂ ಶಾಸಕ ಸುನೀಲ ನಾಯ್ಕ ಸೇರಿದಂತೆ ಮಹಿಳೆ ಹಾಗೂ ಪುರುಷರು ಸೇರಿದಂತೆ ಸಹಸ್ರಾರು ಭಕ್ತರು ಸಮಾಜ ಬಾಂಧವರು ಪಾಲ್ಗೊಂಡಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ